

ಕಾರವಾರ:- ಹೆಚ್ಚುತ್ತಿರುವ ಕರೋನಾ ಆತಂಕ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ನಾಳೆಯಿಂದ ಐದು ದಿನಗಳ ಕಾಲ 144 ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದರು.ಇಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಅವರು ಭಟ್ಕಳ ಉಪ ವಿಭಾಗದಲ್ಲಿ ವಿದೇಶದಿಂದ ಬರುವವರ ಸಂಖ್ಯೆ ಶೇಕಡ 40% ಇರುವುದರಿಂದಾಗಿ ಭಟ್ಕಳ ಉಪ ವಿಭಾಗವನ್ನು ಲಾಕ್ ಡೌನ್ ಗೆ ಆದೇಶಿಸಿರುವುದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
144 ಸೆಕ್ಷನ್ ಆದೇಶಪ್ರತಿ .
ನಾಳೆಯಿಂದ ಭಟ್ಕಳ ತಾಲೂಕು ಸಂಪೂರ್ಣ ಲಾಕ್ ಡೌನ್ ಆಗಲಿದೆ ಜೊತೆಗೆ ಧಾರವಾಡ,ಉಡುಪಿ,ಗೋವಾ ರಾಷ್ಟ್ರೀಯ ಹೆದ್ದಾರಿ ,ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ.ಇನ್ನು ಸಾರಿಗೆ ಸಂಪರ್ಕ ಸಹ ಬಂದ್ ಆಗಿದೆ.
Leave a Comment