
ಹಳಿಯಾಳ:- ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶದ ಹಿನ್ನೆಲೆ ಹಳಿಯಾಳ ಸ್ತಬ್ಧವಾಗಿದೆ. ಕೆಲಸವಿಲ್ಲದೇ ಮನೆಯಿಂದ ಹೊರಬರುವವರಿಗೆ ಪೆÇಲೀಸರು ಬೆತ್ತದ ರುಚಿ ತೋರಿಸುತ್ತಿದ್ದಾರೆ.
ಹಳಿಯಾಳದ ಎಲ್ಲ ಅಂಗಡಿ,ಮುಂಗಟ್ಟುಗಳು ಬಂದ್ ಆಗಿವೆ, ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿದೆ. ವಾಹನಗಳು ಬೀದಿಗಿಳಿಯುತ್ತಿಲ್ಲ, ಕೆಎಸ್ಆರ್ಟಿಸಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಕೆಲವರು ಮನೆಗಳಲ್ಲಿ ಕೂರದೆ ತಮ್ಮ ಬೈಕ್ಗಳಲ್ಲಿ ಸುಖಾ ಸುಮ್ಮನೆ ಹಳಿಯಾಳ ಸುತ್ತಾಡಲು ಹೊರ ಬಂದವರಿಗೆ ಪೆÇಲೀಸರು ಸರಿಯಾಗಿಯೇ ಪಾಠ ಕಲಿಸಿ ಮನೆಯಿಂದ ಹೊರ ಬಂದರೇ ಒಳಹಾಕುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಇನ್ನೂ ಧಾರವಾಡ, ಅರ್ಲವಾಡ, ಕಾವಲವಾಡ ಚೆಕ್ಪೋಸ್ಟ್ಗಳಲ್ಲಿ ಬಿಗಿ ಬಂದೋಬಸ್ತ್ ಇದ್ದು ನಾಕಾಬಂದಿ ಮಾಡಲಾಗಿದೆ. ಯಾರೂ ಒಳ ಬರುವ ಹಾಗಿಲ್ಲ ಹಾಗೂ ಹೊರ ಹೋಗುವ ಹಾಗಿಲ್ಲ. ಅತ್ಯಂತ ತುರ್ತುಸೇವೆಗಳಿದ್ದರೇ, ವೈದ್ಯಕೀಯ ಸಮಸ್ಯೆ ಇದ್ದರೇ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಮಂಗಳವಾರ ಹೊರ ರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಸಾಕಷ್ಟು ಜನ ಹಳಿಯಾಳಕ್ಕೆ ತಮ್ಮ ಮನೆಗಳಿಗೆ ತಲುಪಿದ್ದಾರೆ. ಇವರು ಯಾವುದೇ ತಪಾಸಣೆ ಮಾಡಿಸಿಕೊಳ್ಳದೇ ನೇರವಾಗಿ ಮನೆಗಳಿಗೆ ತೆರಳಿದ್ದಾರೆ.ಇದು ಹಳಿಯಾಳ ಜನರಲ್ಲಿ ಸಾಕಷ್ಟು ಭೀತಿ ಮೂಡಿಸಿದೆ.
ಅಲ್ಲದೇ ಮಂಗಳವಾರ ವಿದೇಶದಿಂದ ಬಂದ ತಾಲೂಕಿನ ಗ್ರಾಮಾಂತರ ಭಾಗದ ಇಬ್ಬರಿಗೆ ಕೈ ಮೇಲೆ ಹೋಮ್ ಕ್ವಾರಂಟೈನ್ ಸೀಲ್ ಹಾಕಿರುವುದು ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಕಂಡು ಬಂದಿದ್ದು ಇವರನ್ನು ತಕ್ಷಣ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತಪಾಸಣೆ ಮಾಡಲಾಯಿತು. ಅಲ್ಲದೇ ಹೋಮ್ ಕ್ವಾರಂಟೈನ್ನಿಂದ ಹೊರ ಬರದಂತೆ ಎಚ್ಚರಿಕೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಕೊರೊನಾ ವೈರಸ್ ಪೀಡಿತರ ಪ್ರಕರಣ ದೃಢಪಟ್ಟಿದ್ದರಿಂದ ಜಿಲ್ಲೆಯಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಯಾರು ಮನೆಯಿಂದ ಹೊರ ಬರದಂತೆ ತಾಲೂಕಾಡಳಿತ, ಪೊಲೀಸ್ ಇಲಾಖೆ ಎಚ್ಚರಿಕೆ ನೀಡುತ್ತಿದೆ.
Leave a Comment