• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

*ನೆನಪಿನ ಸಣ್ಣಬೆಲೆ‌ ಉಪಾಧ್ಯಾಯರ ಮನೆ ಪಚ್ಚಡಿ ಪಾನಕ‌*

April 3, 2020 by Püshpãhås ßãstíkâr Leave a Comment

IMG 20200403 WA0090

 ಶ್ರೀ ರಾಮನವಮಿ ಎಂದರೆ ಹಿಂದೂ ಧರ್ಮದಲ್ಲಿ ಹಬ್ಬದ ಸಂಭ್ರಮ. ದೇವರಾದ ಶ್ರೀ ರಾಮನು ಹುಟ್ಟಿದ ದಿನ. ಈ ಹಬ್ಬವು ನಮ್ಮ *ಪುಣ್ಯಕ್ಷೇತ್ರ ಗೋಕರ್ಣದಲ್ಲಿ* ಬಹಳ ವಿಶೇಷ ದಿನ. ಭಜಕರು ಮುಂಜಾನೆ ತಮ್ಮ ಮನೆಗಳಲ್ಲಿ ಶ್ರೀರಾಮನ ಪೂಜಾ ಆರಾಧನೆಮಾಡಿ, ಸಂಜೆಯ ವೇಳೆ ಗೋಕರ್ಣದ ಕಡಲತೀರದಲ್ಲಿರುವ ರಾಮ ಮಂದಿರ (ರಾಮತೀರ್ಥ)ಕ್ಕೆ ಬಂದು ಭಗವಂತನಾದ ಶ್ರೀರಾಮನ ದರ್ಶನ ಭಾಗ್ಯಪಡೆಯುವರು.ರಾಮನವಮಿ ಹಬ್ಬದ ನಿಮಿತ್ತ ದೇವಾಲಯದಲ್ಲಿ ಹಣ್ಣು ಕಾಯಿ ಒಡೆಸಿಕೊಂಡು, ತೀರ್ಥ ಪ್ರಸಾದವನ್ನು ಸ್ವೀಕರಿಸಿಕೊಂಡು, ಮರಳಿ ಬರುವಾಗ ನೆನಪಿಗೆ ಬರುವುದು‌ ಸಣ್ಣಬೆಲೆಯ *”ಮಹಾಬಲ ಉಪಾಧ್ಯ”* ರವರ ಅರಮನೆ.ಈ ಮನೆತನದವರು ರಾಮನವಮಿ ದಿನದಂದು, ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ಪಚ್ಚಡಿ ಲಿಂಬು ಪಾನಕವನ್ನು ಹಂಚುತ್ತಾರೆ. ಮನೆಯ ಮುಂದೆ ಹೋಗುತ್ತಿರುವ ಜನರಿಗೆ *” ಒಳಗೆ ಬನ್ನಿ ,ಪ್ರಸಾದ ಸ್ವೀಕರಿಸಿ, ಪಾನಕ‌ ಕುಡಿಯಿರಿ”* ಎಂದು ಕರೆದು ಲವಲವಿಕೆಯಿಂದ ಮಾತನಾಡಿಸುವರು ಈ ಉಪಾಧ್ಯರು.ಈ ಮನೆತನದವರು ಸುಮಾರು‌80 ವರ್ಷಗಳ ಹಿಂದೆ ನಡೆಸಿಕೊಂಡು ಬಂದಂತಾ ಸಂಪ್ರದಾಯ ಈ ಕುಟುಂಬದ್ದು ಎಂದು ಕೇಳ್ಪಟ್ಟಿದ್ದೇನೆ.ಇವರು ನೀಡುವ ಪಚ್ಚಡಿ ಪಾನಕವು ತುಂಬಾನೆ ರುಚಿಕರ ಹಾಗೂ ಸಿಹಿಯಾಗುತ್ತಿತ್ತು. ನಾನು 15 ವರ್ಷಗಳಿಂದ ಗೈರಾಗದೆ ಇವರ ಮನೆತನದ ಆತಿಥ್ಯ ಸ್ವೀಕರಿಸುತ್ತಿದ್ದು ನನ್ನ ಅನಿಸಿಕೆಯ ಮಾತುಗಳನ್ನು ಹೇಳಿದೆ.ರಾಮನವಮಿ ದಿನದಂದು ಈ ತಾಣದಲ್ಲಿ ಜನಸಾಗರದ ಚಿತ್ರಣ ಮೂಡುತ್ತಿತ್ತು. ಆದರೆ ಈ ವರ್ಷದಲ್ಲಿ ಹಬ್ಬದ ಸಂಭ್ರಮ, ಸಡಗರಕ್ಕೆ ಕೊರೋನಾ ಕಾರ್ಮೋಡ ಅಡ್ಡಿಯಾಗಿ ನಿಂತಿದೆ.ಇದು ಎಲ್ಲರ ಮನಸ್ಸಿಗೆ ತುಂಬಾ ಬೇಸರ ಮೂಡಿಸಿದೆ. ಶ್ರೀರಾಮನ ದರ್ಶನ ಭಾಗ್ಯವು ಇಲ್ಲದಂತಾಗಿದೆ, ಮಹಾಬಲ ಉಪಾಧ್ಯರ ಮನೆಯ ಪಾನಕ ಕುಡಿಯುವ ಅದೃಷ್ಟ ಕಳೆದು ಹೋಯಿತು. ಈ ಸಲ *”ರಾಮನವಮಿ”* *”ಯಾವನಮನಿ”* ಎಂಬ ಬೇಸರ ಜೊತೆ ಆ ಸಂತಸದ ದಿನದ ನೆನಪನ್ನು‌ ನನ್ನಲ್ಲಿ ಮೆಲಕು ಹಾಕಿದೆ.

IMG 20200403 WA0093
IMG 20200403 WA0092
IMG 20200403 WA0091


IMG 20200403 WA0089

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Kumta News Tagged With: ಉಪಾಧ್ಯಾಯರ ಮನೆ ಪಚ್ಚಡಿ ಪಾನಕ‌, ನೆನಪಿನ ಸಣ್ಣಬೆಲೆ‌

Explore More:

About Püshpãhås ßãstíkâr

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,118 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...