
ಲಾಕ್ ಡೌನ್ ನಿಂದ ತಮ್ಮ ವಾಹನಗಳನ್ನು ತಮ್ಮ ಊರಿಗೆ ತರಲಾಗದೇ ಹುಬ್ಬಳ್ಳಿಯ ಫಾರೆಸ್ಟ್ ಸ್ಕ್ವಾಡ್ ಪೊಲೀಸ್ ವಾಹನ ಬಳಸಿಕೊಂಡು,
ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಎಂಟ್ರಿ ಕೊಟ್ಟಿವರನ್ನು ಸ್ಥಳೀಯ ‘ಟಾಸ್ಕ್ ಫೋರ್ಸ್’ ಕೈಯಲ್ಲಿ ಸಿಕ್ಕಿಬಿದ್ದಿ ಘಟನೆ ನಡೆದಿದೆ.
ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಹುಬ್ಬಳ್ಳಿಯ ತಮ್ಮ ಊರಿಗೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ತಾವು ಕೆಲಸ ಮಾಡುತಿದ್ದ ಗೋಕರ್ಣಕ್ಕೆ ವಾಪಸ್ ಬರಲಾಗದೆ ಖತರ್ನಾಕ್ ಐಡಿಯಾ ಬಳಸಿ ಹುಬ್ಬಳ್ಳಿಯ ಫಾರೆಸ್ಟ್ ಸ್ಕ್ವಾಡ್ ಪೊಲೀಸರಿಗೆ ಹಣ ನೀಡಿ ಪೊಲೀಸರ ವಾಹನವನ್ನೇ ಜಿಲ್ಲೆಗೆ ತಂದು ಸಿಕ್ಕಿಬಿದ್ದಿದ್ದಾರೆ.
ಗೋಕರ್ಣದಲ್ಲಿ ಕೊರೋನಾ ತಡೆಗಾಗಿ ರಚಿಸಲಾಗಿರುವ ಪಂಚಾಯತಿ ಅಧ್ಯಕ್ಷ, ಮಾಜಿ ಅಧ್ಯಕ್ಷ, ನೋಡಲ್ ಅಧಿಕಾರಿ, ಪೊಲೀಸರ ‘ಟಾಸ್ಕ್ ಫೋರ್ಸ್’ ತಂಡ ರಚಿಸಲಾಗಿದ್ದು ಈ ತಂಡವು ಸಂಶಯದಿಂದ ನಾಲ್ವರನ್ನು ಹಿತ್ತಲಮಕ್ಕಿ ಚೆಕ್ ಪೋಸ್ಟ್ ನಲ್ಲಿ ತಡೆದು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ, ಗೋಕರ್ಣದಲ್ಲಿ ಟಾಸ್ಕ್ ಫೋರ್ಸ್ ಕೈಗೆ ಸಿಕ್ಕಿ ಬಿದ್ದ ಇವರು, ತಮ್ಮ ಬಗ್ಗೆ ಮಾಹಿತಿ ನೀಡಲು ತಡಬಡಾಯಿಸಿ ಕೊನೆಗೂ ನಿಜ ವಿಚಾರವನ್ನು ಬಾಯ್ಬಿಟ್ಟಿದ್ದು ಪೊಲೀಸರ ಅಥಿತಿಗಳಾಗಿದ್ದು ಬಂಧಿತರು ಹುಬ್ಬಳ್ಳಿಯ ಇಮ್ತಿಯಾಜ್,ಗೌಸ್ ,ಬಾಗಲಕೋಟೆ ಮೂಲದ ಮುತ್ತುರಾಜ್ ಪಾಟೀಲ್,ಪ್ರೇಮಲಿಂಗ ರಮೇಶ್ ನೀಲಣ್ಣನವರ್ ಎಂದು ಗುರುತಿಸಲಾಗಿದೆ.
Leave a Comment