
#ಮಂಡ್ಯ :- ಮಂಡ್ಯದಲ್ಲಿ #ಜೆಡಿಎಸ್ #ಎಮ್ಎಲ್‌ಸಿ #ಶ್ರೀಕಂಠೆಗೌಡ ಹಾಗೂ ಆತನ ಮಗ #ಕೃಷಿಕ್ ಗೌಡ ನಿಂದ #ಮಾಧ್ಯಮದವರ #ಮೇಲೆ #ಹಲ್ಲೆ.
ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ತಗಾದೆ ತೆಗೆದು ಕರ್ತವ್ಯಕ್ಕೆ ಅಡ್ಡಿ ಮಾತ್ರವಲ್ಲದೆ ಮಾಧ್ಯಮದವರ ಮೇಲೆ ದೈಹಿಕ ಹಲ್ಲೆ ನಡೆಸಿ ಪಾಳೆಗಾರಿಕೆ ನಡೆಸಿದ ಬಗ್ಗೆ ವರದಿಯಾಗಿದೆ.
ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ಗಲಾಟೆ ನಡೆಸಿದ ಅಪ್ಪಮಗ
ಪೋಲಿಸರಿಂದ ಆರೋಪಿಗಳು ಅರೆಸ್ಟ್.
ಈ ಸಂದರ್ಭದಲ್ಲಿ ಪೋಲಿಸರಿಂದ ಲಾಠಿ ಜಾರ್ಜ್.

ಎಫ್ ಐ ಆರ್ ನಲ್ಲಿ
ಎ-1 ಆರೋಪಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೆಗೌಡಾ
ಎ-2 ಆರೋಪಿ ಎಮ್ ಎಲ್‌ಸಿ ಪುತ್ರ ಕೃಷಿಕ್ ಗೌಡ.
ರಾಜ್ಯಾದ್ಯಂತ ಎಮ್ಎಲ್ ಸಿ ಅಪ್ಪ ಮಗನ ದರ್ಪಕ್ಕೆ ಖಂಡನೆ.
ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ನಡೆಸಲು ಶಾಸಕ ಶ್ರೀಕಂಠೇಗೌಡ ಮನೆ ಸಮೀಪದ ಅಂಬೇಡ್ಕರ್ ಭವನದಲ್ಲಿ ಜಾಗ ಗುರುತು ಮಾಡಲಾಗಿತ್ತು. ಅಂಬೇಡ್ಕರ್ ಭವನಕ್ಕೆ ಪತ್ರಕರ್ತರು ಆಗಮಿಸುತ್ತಿದ್ದಂತೆ ಶ್ರೀಕಂಠೇಗೌಡ ಮಗ ಮಾಧ್ಯಮದವರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೆ ಐದು ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಎಂಎಲ್ ಸಿ ಶ್ರೀಕಂಠೇಗೌಡ, ಆತನ ಪುತ್ರ ಕೃಷಿಕ್ ಗೌಡ ಸೇರಿ ಇನ್ನೂಳಿದ ಮೂವರ ವಿರುದ್ದ ಎಫ್ಐಆರ್ ದಾಖಲಾಗಿದ್ದು ಶ್ರೀಕಂಠೇಗೌಡ ಪುತ್ರನಿಗೆ ವಶಕ್ಕೆ ಪಡೆಯಲಾಗಿದೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೆ ಐಪಿಸಿ ಸೆಕ್ಷನ್ 143,147,341,323,501,114,269,270,149ರ ಅನ್ವಯ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ತಪ್ಪಿತಸ್ಥರ ವಿರುದ್ದ ಮಂಡ್ಯ ಪತ್ರಕರ್ತರು ಈಗಾಗಲೆ ಡಿ ಸಿ ಹಾಗೂ ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿ ಡಾ ವೆಂಕಟೇಶ ಅವರು ಈಗಾಗಲರ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ದೂರು ಬಂದಿದೆ. ಹಲ್ಲೆ ನಡೆಸಿರುವ ವಿಡಿಯೋ ಕೂಡ ಸಿಕ್ಕಿದೆ. ಕಾನೂನಾತ್ಮಕವಾಗು ನಾವು ಕ್ರಮ ತೆಗೆದುಕೊಳ್ಳತ್ತೇವೆ.
ಪತ್ರಕರ್ತರು ಕೊರೋನಾ ಸಮಯದಲ್ಲೂ ಕೂಡ ಹಗಲಿರುಳು ದುಡಿಯುತ್ತಿದ್ದಾರೆ. ಪತ್ರಕರ್ತರ ಮೇಲೆ ಹಲ್ಲೆ ಮಾಡುವುದು ತಪ್ಪು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಡಿಸಿ ತಿಳಿಸಿದ್ದಾರೆ.
Leave a Comment