
ಜೋಯಿಡಾ ;
ಜೋಯಿಡಾ ತಾಲೂಕಿನೆಲ್ಲೆಡೆ ಮಂಗನಕಾಯಿಲೆ ಭೀತಿ ಹೆಚ್ಚುತ್ತಿರುವುದರಿಂದ ತಾಲೂಕಿನೆಲ್ಲೆಡೆ ವೈದ್ಯರು ಮಂಗನ ಕಾಯಿಲೆ ಚುಚ್ಚುಮದ್ದು ನೀಡುವ ಕೆಲಸ ಮಾಡುತ್ತಿದ್ದಾರೆ.
ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಧ್ಯಾಧಿಕಾರಿ ಸಂಜೀವ ರೆಡ್ಡಿ ಗ್ರಾಮದಲ್ಲಿನ ಜನರಿಗೆ ಮಂಗನ ಕಾಯಿಲೆ ಚುಚ್ಚು ಮದ್ದು ನೀಡುವ ಮೂಲಕ ಮಂಗನ ಕಾಯಿಲೆ ಜನರಿಗೆ ಹರಡದಂತೆ ಎಚ್ಚರ ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಂಜೀವ ರೆಡ್ಡಿ ಮಂಗನ ಕಾಯಿಲೆ ಮಂಗಗಳಿಗೆ ಕಡಿದ ಕೀಟ ಹಾಗೂ ಮಂಗಗಳು ಮುಟ್ಟಿದ ಹಣ್ಣು ,ಕಾಯಿ ಇತರೆಗಳಿಂದ ಬರುತ್ತದೆ ,ಆದ್ದರಿಂದ ಜನರು ಕಾಡಿಗೆ ಹೋಗುವುದನ್ನು ಕಡಿಮೆ ಮಾಡಬೇಕು ಇದರಿಂದ ಮಂಗನ ಕಾಯಿಲೆ ನಿಯಂತ್ರಣ ಮಾಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಗುಂದ ಆಸ್ಪತ್ರೆಯ ಸಿಬ್ಬಂದಿಗಳಾದ ವಿಜಯಾ ನಾಯ್ಕ,ದೀಪಾ ಗೋವೆಕರ,ಸುಚಿತ್ರಾ ನಾಯಕ,ರಾಮು ದಳವಾಯಿ ,ಪಾಂಡುರಂಗ ಇತರರು ಉಪಸ್ಥಿತರಿದ್ದರು, ನೂರಾರು ಜನರು ಮಂಗನ ಕಾಯಿಲೆ ಚುಚ್ಚುಮದ್ದು ಪಡೆದರು.
Leave a Comment