
ದಾಂಡೇಲಿ: ಸ್ಥಗಿತಗೊಂಡಿರುವ ದಾಂಡೇಲಿಯ ಕೇರವಾಡದ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಅಗತ್ಯ ಕ್ರಮ ಕೈಗೊಂಡು ಅತಂತ್ರರಾದ ಕಾರ್ಮಿಕರ ಆಸರೆಯಾಗಬೇಕೆಂದು ನಗರದ ದಾಂಡೇಲಿ ಸಮಸಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಅವರು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಮಾಡಿದ್ದಾರೆ.
ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ನಗರದ ಸಮೀಪವಿರುವ ಕೇರವಾಡದಲ್ಲಿರುವ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಖಾರ್ಖಾನೆಯು ಸ್ಥಗಿತಗೊಂಡು ಐದಾರು ತಿಂಗಳಾಗಿದ್ದು, ಉದ್ಯೋಗÀವಿಲ್ಲದೆ ಕಾರ್ಮಿಕರು ಅತಂತ್ರರಾಗಿದ್ದು, ಅವರೆಲ್ಲರ ಬದುಕು ದುಸ್ತರವಾಗಿದೆ. ಸರಿ ಸುಮಾರು 400 ಕಾರ್ಮಿಕರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೀಗ ಅವರೆಲ್ಲರು ಆರ್ಥಿಕವಾಗಿ ಚಿಂತಜನಕ ಸ್ಥಿತಿಯಲ್ಲಿದ್ದಾರೆ.
ಪ್ರಸಕ್ತ ಭಾರತ ಲಾಕ್ ಡೌನ್ ಸಮಸ್ಯೆಯಿಂದಲೂ ಬಳಲುತ್ತಿದ್ದು, ಕಾರ್ಖಾನೆಯನ್ನೆ ನಂಬಿಕೊಂಡ ಅತಂತ್ರ ಕಾರ್ಮಿಕರು ಮತ್ತೆ ಬದುಕು ಕಟ್ಟಿಕೊಳ್ಳುವಂತಾಗಲೂ ಸ್ಥಗಿತಗೊಂಡ ಕಾರ್ಖಾನೆಯನ್ನು ಪುನರಾರಂಭಿಸಲು ಸರಕಾರದ ಮಟ್ಟದಲ್ಲಿ ಚಿಂತಿಸಿ, ಕಾರ್ಖಾನೆಯ ಆಡಳಿತ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅಕ್ರಂ ಖಾನ್ ಅವರು ಮನವಿ ಮಾಡಿದ್ದಾರೆ.
Leave a Comment