
ಜೋಯಿಡಾ –
ದೇಶದಲ್ಲಿ ಮತ್ತು ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಸಾರ್ವಜನಿಕರು ಕರೋನಾ ವೈರಸ್ ಬಗ್ಗೆ ಲಕ್ಷ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ಹೇಳಿದರು.
ಅವರು ಜೋಯಿಡಾ ದಲ್ಲಿ ತಹಶೀಲ್ದಾರ ಕಚೇರಿ ಹಾಗೂ ಬಡವರಿಗೆ ಮಾಸ್ಕ ವಿತರಿಸಿ ಮಾತನಾಡುತ್ತಿದ್ದರು. ಕರೋನಾ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ಜನರು ಈ ಬಗ್ಗೆ ಬಹಳ ಕಟ್ಟೆಚ್ಚರ ವಹಿಸಬೇಕು, ನಿಮ್ಮ ಊರಿನಲ್ಲಿ ಹೊರ ಜಿಲ್ಲೆ ಅಥವಾ ರಾಜ್ಯದಿಂದ ಜನರು ಬಂದಿದ್ದರೆ ತಕ್ಷಣ ವೈಧ್ಯಾಧಿಕಾರಿ ಗಳಿಗೆ ಹಾಗೂ ಸಂಭಂದ ಪಟ್ಟ ಇಲಾಕೆಗೆ ತಿಳಿಸಿ, ಎಲ್ಲರೂ ಸಾಮಜಿಕ ಅಂತರ ಕಾದುಕೊಳ್ಳುವ ಮೂಲಕ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟೊಣ ಎಂದರು.
ಈ ಸಂದರ್ಭದಲ್ಲಿ ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ ,ಜೋಯಿಡಾ ಗ್ರಾ.ಪಂ.ಸದಸ್ಯ ಸಂತೋಷ ಮಂಥೇರೋ, ಶ್ಯಾಮ ಪೊಕಳೆ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
Leave a Comment