
ಹಳಿಯಾಳ :- ಹಳಿಯಾಳ ಹಾಗೂ ದಾಂಡೇಲಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ರಾಜಸ್ಥಾನದ ವಿವಿಧ ಸ್ತರದ ಕಾರ್ಮಿಕರು ಕೋರೋನಾ ಲಾಕ್-ಡೌನಿಂದಾಗಿ ವ್ಯಾಪಾರ ವಹಿವಾಟಿಲ್ಲದೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರು ಕಾರಣ ಇಂದು ಅವರಿಗೆ ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್ ನಿಂದ ಅವರ ಊರುಗಳಿಗೆ ತೆರಳಲು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ವರೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು.
ವ್ಯಾಪಾರಸ್ಥರು ಹಾಗೂ ಪಾನಿಪುರಿ ಹಾಗೂ ಇತರೇ ಅಂಗಡಿಗಳನ್ನು ಇಟ್ಟುಕೊಂಡವರು ಬಹಳ ದಿನಗಳಿಂದ ವ್ಯಾಪಾರ ವಹಿವಾಟಿಲ್ಲದೇ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರು.
ಲಾಕಡೌನ್ ಅಲ್ಪ ಸಡಿಲಿಕೆಯಿಂದ ಸರ್ಕಾರವು ತಮ್ಮ ತಮ್ಮ ಊರುಗಳಿಗೆ ಹೋಗಲು ರೈಲ್ವೆ ವ್ಯವಸ್ಥೆ ಮಾಡಿದ್ದು, ಇವರೆಲ್ಲರೂ ಈಗ ತಮ್ಮ ಊರುಗಳಿಗೆ ತೆರಳಲು ಕಾತುರರಾಗಿದ್ದರು.
ಅಲ್ಲದೇ ತಮ್ಮ ಮಾಹಿತಿಗಳನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ, ತಮ್ಮ ಊರುಗಳಿಗೆ ಕಳುಹಿಸಿ ಕೊಡಲು ಸಹಾಯ ಮಾಡುವಂತೆ ಹಳಿಯಾಳ ಶಾಸಕರಾದ ಆರ್.ವಿ ದೇಶಪಾಂಡೆಯವರಲ್ಲಿ ಕೋರಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಅವರಿಗೆ ಅಗತ್ಯ ಆಹಾರ ಪೊಟ್ಟಣಗಳನ್ನು ವಿತರಿಸಿ, ಎರಡು ಬಸ್ಸುಗಳ ಮೂಲಕ ಹುಬ್ಬಳ್ಳಿಯವರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದೆ.
ಒಟ್ಟೂ ಹಳಿಯಾಳದಿಂದ 36 ಜನ ದಾಂಡೇಲಿಯಿಂದ 24ಜನರನ್ನು ಇಂದು ಬೆಳಿಗ್ಗೆ ಹಳಿಯಾಳದಿಂದ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದರು.
Leave a Comment