ಶಿರಸಿ: ಕೊರೊನಾ #ಸೋಂಕಿಗೆ_ತುತ್ತಾಗಬಾರದೆಂದು ಕಾಸರ್ಕನ ಚಕ್ಕೆ – ಹಳ್ಳಿ ಔಷಧಿ ಕುಡಿದ ಪರಿಣಾಮ ಮಗ ಸಾವನ್ನಪ್ಪಿದ್ದು, ತಂದೆಯ ಪರಿಸ್ಥಿತಿ ಗಂಭೀರವಾಗಿರುವ ಘಟನೆ ಶಿರಸಿ ತಾಲೂಕಿನ #ರಾಮನಬೈಲಿನಲ್ಲಿ ಇಂದು ನಡೆದಿರುವ ಬಗ್ಗೆ ವರದಿಯಾಗಿದೆ.
#ಫ್ರಾನ್ಸಿಸ್_ರೇಘೋ(42) ಮೃತ ದುರ್ದೈವಿಯಾಗಿದ್ದು ಆತನ ತಂದೆ #ಅಂಥೋನಿ(70) #ತೀವೃ #ಅಸ್ವಸ್ಥರಾಗಿದ್ದು ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮೀಣ ಪ್ರದೇಶದಿಂದ ತಂದ ಕಾಸರ್ಕನ ಚಕ್ಕೆಯನ್ನು ಕುದಿಸಿ ಕುಡಿದ ಪರಿಣಾಮ ಈ ಔಷಧಿ ಅಡ್ಡಪರಿಣಾಮ ಬೀರಿ ಮಗ ಸಾವನ್ನಪ್ಪಿದ್ದಾನೆ.
ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Leave a Comment