
ಹಳಿಯಾಳ :- ಸರ್ಕಾರ ರೈತರು ಬೆಳೆಸಾಲ ಪಡೆಯುವಲ್ಲಿನ ಷರತ್ತುಗಳಲ್ಲಿ ಸರಳಿಕರಣ ಮಾಡಿರುವ ಕಾರಣ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಸರ್ಕಾರದ ಸೂಚನೆಯಂತೆ ರೈತರಿಗೆ ಎಲ್ಲ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಬಾರ್ಡನಲ್ಲಿ 30ಸಾವಿರ ಕೋಟಿ ರೂ. ರೈತರಿಗೆ ಬೆಳೆಸಾಲ ನೀಡಲು ಕಾಯ್ದಿರಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು. ಕೆಲವೊಂದು ತಿದ್ದುಪಡಿಗಳ ಮೂಲಕ ಈ ಹಿಂದಿನಂತೆಯೇ ರೈತರಿಗೆ ಪ್ರಸ್ತುತ 3 ಲಕ್ಷದ ವರೆಗೆ 0% ಬಡ್ಡಿ ದರದಲ್ಲಿ ಸಾಲ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಚಿವರಾದ ಸೋಮಶೇಖರ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರೈತಪರ ಕಾಳಜಿಯ ಶ್ರಮವಿದೆ ಹೊರತು ಇದರ ಹಿಂದೆ ಮತ್ಯಾವ ನಾಯಕರ ಶ್ರಮವು ಇಲ್ಲವೆಂದು ಹೆಗಡೆ ಪದೆ ಪದೆ ಹೇಳಿದರು.
ಜಿಲ್ಲೆಯ ಕೆಡಿಸಿಸಿ ಬ್ಯಾಂಕಿಗೆ ಸರ್ಕಾರದಿಂದ ಯಾವುದೇ ಬಾಕಿ ದುಡ್ಡು ಬರುವುದು ಇಲ್ಲ ಆಡಳಿತ ಮಂಡಳಿಯವರು ಗೊಂದಲ ಮಾಡಿ ಬಾಕಿ ಹಣ ತೊರಿಸಿದ್ದಾರೆ ಎಂದು ಆರೋಪಿಸಿದ ಸುನೀಲ್ ಹೆಗಡೆ, ಒಂದಾನುವೇಳೆ ಸರಿಯಾದ ಮಾಹಿತಿ ಸರ್ಕಾರಕ್ಕೆ ನೀಡಿದರೇ ಅವರಿಗೆ ಹಣ ದೊರೆಯುತ್ತದೆ ಎಂದು ಕೂಡ ಅವರು ಸ್ಪಷ್ಟಪಡಿಸಿದರು.
7 ಹಣ್ಣುಗಳ ಬೆಳೆಗೆ ಸರ್ಕಾರ ಪರಿಹಾರ ಘೊಷಿಸಿದೆ ಇನ್ನು ಕೆಲವೆ ದಿನಗಳಲ್ಲಿ ಮಾವಿನ ಬೆಳೆಗೂ ಪರಿಹಾರ ದೊರಕುವ ಭರವಸೆ ಇದ್ದು ಇದಕ್ಕಾಗಿ ಸಚಿವರಾದ ಶಿವರಾಮ ಹೆಬ್ಬಾರ ಪ್ರಯತ್ನ ಮುಂದುವರೆದಿದೆ ಎಂದರು.
ಸರ್ಕಾರ ಅಗತ್ಯ ವಸ್ತುಗಳ ಬೆಳೆ ಮಾರಾಟ ಕಾಯ್ದೆಯಲ್ಲಿ ತಿದ್ದುಪಡಿ ತಂದಿರುವ ಕಾರಣ ರೈತರು ಎಪಿಎಮ್ಸಿಯಲ್ಲೇ ಬೆಳೆ ಮಾರಾಟ ಮಾಡಬೇಕೆಂದಿಲ್ಲ ಬದಲಾಗಿ ನೇರವಾಗಿ ಕಂಪೆನಿಗೂ ಮಾರಾಟ ಮಾಡಬಹುದು ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು ಹೆಗಡೆ.
ರಾಜ್ಯ ಸರ್ಕಾರ ಹೊಸ ಮರಳು ನೀತಿ ಜಾರಿಗೆ ತಂದಿದ್ದು ಇನ್ನೂ ಮುಂದೆ ನಾಲಾ,ನದಿ, ತೊರೆ, ಹಳ್ಳಗಳಿಂದ, ಡ್ಯಾಂ ಹಿನ್ನಿರು ಪ್ರದೇಶದಿಂದ ಸಿಗುವ ಉಸುಕನ್ನು ಗ್ರಾಮ ಪಂಚಾಯತಗಳಿಗೆ ಹಣ ಪಾವತಿಸಿ ಖರಿದಿ ಮಾಡಬಹುದು ಇಲ್ಲಿ ಕಡಿಮೆ ದರದಲ್ಲಿ ಮರಳು ದೊರೆಯುವುದರಿಂದ ಜನಸಾಮಾನ್ಯರಿಗೆ ಉತ್ತಮ ಅನುಕೂಲವಾಗಿದೆ ಎಂದು ಸುನೀಲ್ ಹೆಗಡೆ ಅಭಿಪ್ರಾಯಪಟ್ಟರು.
ಕೆಲವು ಆಹಾರದ ಕಿಟ್ ಕೊಟ್ಟ ತಕ್ಷಣ ಯಾರು ಕೊರೊನಾ ವಾರಿಯರ್ಸ್ ಆಗುವುದಿಲ್ಲ ಆದ ಕಾರಣ ಬೆಂಗಳೂರಿನಲ್ಲೇ ಠಿಕಾಣಿ ಹೂಡುವ ಶಾಸಕ ಆರ್ವಿ ದೇಶಪಾಂಡೆ ಅವರನ್ನು ಕೊರೊನಾ ವಾರಿಯರ್ಸ್ ಎಂದು ಬಿಂಬಿಸುವ ಪ್ರಯತ್ನ ಸರಿಯಲ್ಲ. ಇದರಿಂದ ನೀಜವಾದ ಕೊರೊನಾ ವಾರಿಯರ್ಸ್ಗಳಿಗೆ ಅವಮಾನವಾಗುತ್ತದೆ ಎಂದ ಸುನೀಲ್ ಹೆಗಡೆ ಅವರನ್ನು ಬೇಕಾದರೇ ಕಾಂಗ್ರೇಸ್ ವಾರಿಯರ್ ಅಂದರೇ ತಪ್ಪೇನಿಲ್ಲ ಎಂದರು.
ಹಳಿಯಾಳ ಎಪಿಎಮ್ಸಿಯಲ್ಲಿ ರೈತ ಹಿತಾಸಕ್ತಿ ಕಾಣಸಿಗುತ್ತಿಲ್ಲ ಮೆಕ್ಕೆಜೋಳ ಖರೀದಿಯಲ್ಲಿ ರೈತರಿಗೆ ಸರಿಯಾದ ಮಾರುಕಟ್ಟೆ, ಖರೀದಿ ಕೇಂದ್ರ ದೊರೆಯದೆ ತೊಂದರೆ ಆಗುತ್ತಿದೆ ಎಂದು ರೈತರು ತಮ್ಮ ಅಳಲು ತೊಡಿಕೊಳ್ಳುತ್ತಿರುವ ಕಾರಣ ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಗಣಪತಿ ಕರಂಜೆಕರ, ಪುರಸಭೆ ಸದಸ್ಯರಾದ ಸಂಗೀತಾ ಜಾಧವ, ಚಂದ್ರು ಕಮ್ಮಾರ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ಪ್ರಮುಖರಾದ ಅನಿಲ ಮುತ್ನಾಳ್, ಶಿವಾಜಿ ನರಸಾನಿ, ಶಂಕರ ಗಳಗಿ, ವಾಸು ಪೂಜಾರಿ, ವಿಎಮ್ ಪಾಟೀಲ್, ಯಲ್ಲಪ್ಪಾ ಹೊನ್ನೊಜಿ ಮೊದಲಾದವರು ಇದ್ದರು.
Leave a Comment