
ಹಳಿಯಾಳ :- ದೆಹಲಿಯಿಂದ ಬಂದು ಯಲ್ಲಾಪುರದಲ್ಲಿ ಕೊರೊನಾ ಸೊಂಕಿತನಾಗಿರುವ ರೋಗಿ ಪೇ-ನಂ-1912 ನ ಸಂಪರ್ಕಕ್ಕೆ ಬಂದಿದ್ದ ಹಳಿಯಾಳದ ಪೋಲಿಸ್ ಕಾನ್ಸ್ಟೇಬಲ್,ಆರ್ಐ ಸೇರಿದಂತೆ ಐವರನ್ನು ಕ್ವಾರಂಟೈನ್ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ದೆಹಲಿಯಿಂದ ರೈಲ್ವೆ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದ ಹಳಿಯಾಳದ-2, ಜೋಯಿಡಾ-1, ಮುಂಡಗೋಡ-2, ಯಲ್ಲಾಪುರ-1, ಸಿದ್ದಾಪುರ-1, ಒಟ್ಟೂ 7 ಜನರನ್ನು ಸರ್ಕಾರದ ಆದೇಶ ಹಾಗೂ ಇಲಾಖೆಯ ನಿರ್ದೇಶನದಂತೆ ಹಳಿಯಾಳದ ಇಬ್ಬರು ಪೋಲಿಸ್ ಕಾನ್ಸ್ಟೇಬಲ್, ತಹಶೀಲ್ದಾರ್ ಇಲಾಖೆಯ ಓರ್ವ ಆರ್ಐ, ಅರಣ್ಯ ಇಲಾಖೆಯ ಓರ್ವ ವಾಹನ ಚಾಲಕ ಹಾಗೂ ಖಾಸಗಿ ವಾಹನ ಚಾಲಕರು ತೆರಳಿ ಕರೆತಂದು ಅವರ ಊರುಗಳಿಗೆ ಬಿಟ್ಟಿದ್ದರು.
ಈಗ ಯಲ್ಲಾಪುರದವ ಪೇಶಂಟ್ ನಂ.1912ಯಲ್ಲಿ ಕೊರೊನಾ ಸೊಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕರೆತಂದ ಈ ಐವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಅವರ ಗಂಟಲು ದ್ರವವನ್ನು ಸಂಗ್ರಹಿಸಿ ಸೊಂಕು ಪತ್ತೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
Leave a Comment