ಕೇರಳ:- ಕೇರಳದಲ್ಲಿ_ಗರ್ಭಿಣಿ_ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಅದನ್ನು ಮಾನವೀಯತೆ ಮರೆತು #ಅಮಾನುಷವಾಗಿ_ಕೊಲೆ #ಮಾಡಿರುವ_ಘಟನೆ ವರದಿಯಾಗಿದ್ದು ಈ ಘಟನೆ ಓದಿದವರ ಕರುಳು ಚುರುಕ್ ಎನ್ನದೆ ಇರದು ಅಲ್ಲದೇ ಕಣ್ಣಾಲೆಗಳು ತುಂಬಿ ಬರುತ್ತವೆ.
ಕೇರಳದಲ್ಲಿ ಹಸಿದ ಮತ್ತು ಗರ್ಭಿಣಿ ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಸ್ಥಳೀಯರು ಪೈನಾಪಲ್_ನಲ್ಲಿ_ದೊಡ್ಡ_ಪಟಾಕಿ_ತುಂಬಿಸಿ ಅದಕ್ಕೆ ತಿನ್ನಲು ಕೊಟ್ಟಿದ್ದಾರೆ. ಪಟಾಕಿಯನ್ನು ತಿಂದ ತಕ್ಷಣ ಭಯಂಕರ_ಸ್ಪೋಟವಾಗಿ ಆನೆಯ ಬಾಯಿ, ನಾಲಿಗೆಗೆ ಗಂಭೀರ ಗಾಯಗಳಾಗಿವೆ.
ವಿಪರೀತ ಹಸಿವೆ ಮತ್ತು ಗಾಯದಿಂದ ನರಳುತ್ತ ನೀರು ಹುಡುಕುತ್ತ ಒಂದು ಕೆರೆಗೆ ಇಳಿದು ಅಲ್ಲಿ ನಿಂತಲ್ಲಿಯೇ ಮೃತ ಪಟ್ಟಿದೆ. ಕೇರಳದ ಮಳಪ್ಪುರಂನ ಅರಣ್ಯಾಧಿಕಾರಿಯೊಬ್ಬರು ಕಣ್ಣಾರೆ ಕಂಡ ರಕ್ಕಸ ಜನರ ಈ ಭಯಾನಕ ಕುಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಓದುಗರಿಗೆ ಹರಿಬಿಟ್ಟ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
“ಮನುಷ್ಯನ ಕಪಟವನ್ನು ಅರಿಯದ ಮುಗ್ಧ ಬಸುರಿ ಆನೆ ಗಬಗಬನೇ ಪಟಾಕಿಯುಕ್ತ ಪೈನಾಪಲ್ ಹಣ್ಣನ್ನು ತಿಂದಿದೆ. ಅದು ಬಸುರಿ ಇರದಿದ್ದರೆ ಊರಿನೊಳಗೆ ಬರುತ್ತಿರಲಿಲ್ಲವೇನೋ. ಪಾಪ ಇನ್ನು 18, 20 ತಿಂಗಳೊಳಗೆ ಜನ್ಮತಳೆಯುವ ತನ್ನ ಮರಿ ಹಸಿವೆಯಿಂದ ಸಾಯದಿರಲಿ ಅಂತ ಗಾಬರಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಊರಿನೊಳಗೆ ಬಂದಿದೆ.” ಅಂತ Rapid_Response_Team ನ ಅರಣ್ಯಾಧಿಕಾರಿ ಮೋಹನ್_ಕ್ರಿಷ್ಣನ್ ಅವರು ಫೇಸಬುಕ್ ನಲ್ಲಿ ಬರೆದುಕೊಳ್ಳುತ್ತಾರೆ.
ಪಟಾಕಿಯ ಸ್ಪೋಟ ಎಷ್ಟು ಭಯಾನಕವಾಗಿತ್ತೆಂದರೆ ಅದರ ಹೊಡೆತಕ್ಕೆ ಆನೆಯ ನಾಲಿಗೆ ಮತ್ತು ಬಾಯಿ ಸಂಪೂರ್ಣ ಹರಿದು ಹೋಗಿವೆ. ತೀವ್ರತರದ ಹಸಿವಾಗಿದ್ದರೂ ಏನೂ ತಿನ್ನದ ಸ್ಥಿತಿ. ನೂವು ಮತ್ತು ಹಸಿವೆಯಿಂದ ಬಸುರಿ ಆನೆ ಓಡಿದೆ ಓಡಿದೆ ಓಡಿದೆ ಓಡಿದೆ ತುಂಬಾ ಓಡಿದೆ ಪಾಪ. ಒಂದು ಮನೆಯನ್ನೂ ಧ್ವಂಸಮಾಡಲಿಲ್ಲ. ಯಾರೊಬ್ಬನನ್ನೂ ತುಳಿದು ಕೊಲ್ಲಲಿಲ್ಲ. ಅದು ತುಂಬಾ ದಯಾಳುವಾಗಿತ್ತು ಪಾಪ.
ಹಾಗೆ ಓಡಿದ ಆನೆ ನೀರನ್ನರಸಿ ವೆಳ್ಳಿಯಾರ್ ನದಿಯಲ್ಲಿ ಇಳಿದಿದೆ. ಗಾಯವಾಗಿರುವ ಬಾಯಿ ಮತ್ತು ಸೊಂಡಿಲನ್ನು ನೀರಿನೊಳಗೆ ಬಿಟ್ಟು ತುಸು ಹೊತ್ತು ನಿಂತಿದೆ. ಸ್ವಲ್ಪ ನೂವು ಶಮನವಾಗಲೆಂದು. ಚಿತ್ರದಲ್ಲಿ ಗಮನಿಸಬಹುದು. ಸೊಳ್ಳೆ ಮತ್ತು ಹುಳುಗಳಿಂದ ತಪ್ಪಸಿಕೊಳ್ಳಲೂ ಇರಬಹುದು ಪಾಪ.
ಸುರೇಂದ್ರನ್ ಮತ್ತು ನೀಲಕಂಠನ್ ಎಂಬ ಪಳಗಿದ ಆನೆಗಳನ್ನೊಳಗೊಂಡ ತಂಡ ಬಸುರಿ ಆನೆಯನ್ನು ರಕ್ಷಿಸಲು ನದಿಗಿಳಿದಿವೆ. ಹಲವು ತಾಸುಗಳಷ್ಟು ನಡೆದ ರಕ್ಷಣಾಕಾರ್ಯದ ಪ್ರಯತ್ನಗಳು ಫಲನೀಡಲಿಲ್ಲ. ಮೇ 27 ಸಂಜೆ 4 ಗಂಟೆಗೆ ನೀರಿನಲ್ಲಿ ನಿಂತಸ್ಥಳದಲ್ಲಿಯೇ ಅಸುನೀಗಿದೆ.
ಅದು ಗೌರವಸೂಚಕ ವಿದಾಯಕ್ಕೆ ಅರ್ಹವಾಗಿತ್ತು. ತಾನು ಆಡಿ ಬೆಳೆದ ಊರಿನಲ್ಲಿಯೇ ಈಗ ಅದರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅದರ ಪೋಸ್ಟ್ ಮಾರ್ಟಂ ಮಾಡುವಾಗ ಮತ್ತು ಅಂತ್ಯ ಸಂಸ್ಕಾರ ನೆರವೇರಿಸುವಾಗ ಮೋಹನ್ ಕ್ರಿಷ್ಣನ್ ಅವರ ಮಾಸ್ಕ್ ದೂಡಿಕೊಂಡು ಕಣ್ಣೀರು ಒಸರುತ್ತಿತ್ತೆಂದು ಪೋಸ್ಟ ಮಾರ್ಟಂ ಮಾಡಿದ ವೈದ್ಯರು ಹೇಳುತ್ತಾರೆ.
ಕೃಪೆ:ಇಂಗ್ಲೀಷ್:NDTV Facebook page
ಕನ್ನಡಕ್ಕೆ:ಮಧುಸೂದನ ಕುಲಕರ್ಣಿ
Leave a Comment