ದಾಂಡೇಲಿ : ನಗರದಲ್ಲಿ ಶುಕ್ರವಾರ ಒಟ್ಟು 8 ಕೊರೊನೊ ಸೋಂಕು ಪ್ರಕರಣಗಳು ದೃಢವಾಗಿದ್ದು, ಈ ಹಿಂದಿನ ಸೋಂಕಿತ ವ್ಯಕ್ತಿ ಪಿ-23163 ರ ದ್ವಿತೀಯ ಸಂಪರ್ಕದಿಂದ ಹರಡಿದೆಯೆನ್ನಲಾಗಿದೆ.
ಶುಕ್ರವಾರ ಪತ್ತೆಯಾದ ಎಲ್ಲ ಪ್ರಕರಣಗಳು ಪಿ-23163 ಸೋಂಕಿತ ವ್ಯಕ್ತಿಯಿಂದಲೆ ಹರಡಿರುವುದು ಖಚಿತವಾಗಿದ್ದು, ಇನ್ನಷ್ಟು ಜನರ ವರದಿ ಬರಬೇಕಾಗಿರುವುದರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.
59, 82, 25, 34, 40, 40 ವರ್ಷದ ಮಹಿಳೆಯರಿಗೆ ಹಾಗೂ 3 ವರ್ಷದ ಬಾಲಕ ಮತ್ತು 32 ವರ್ಷ ವಯಸ್ಸಿನ ಪುರುಷನಿಗೆ ಸೋಂಕು ದೃಢವಾಗಿದೆ. ಇಂದು ದೃಢವಾದ ಸೋಂಕಿತರಲ್ಲಿ ನಗರದ ಇ.ಎಸ್.ಐ ಆಸ್ಪತ್ರೆಯ ಇಬ್ಬರು ಸ್ಟಾಪ್ ನರ್ಸ್, ಒಬ್ಬ ಆಂಬ್ಯುಲೆನ್ಸ್ ಚಾಲಕ ಮತ್ತು ಡಿ ದರ್ಜೆ ಮಹಿಳೆಯು ಸೇರಿದ್ದಾಳೆ. ಸೋಂಕಿತರಲ್ಲಿ ನಾಲ್ವರು ಬಸವೇಶ್ವರ ನಗರ ನಿವಾಸಿಗಳಾಗಿದ್ದರೇ, ಉಳಿದ ನಾಲ್ವರು ಹಳೆ ದಾಂಡೇಲಿ, ಇ.ಎಸ್.ಐ ಕ್ವಾಟ್ರಸ್, ಟೌನಶೀಪ್ ಮತ್ತು ಬಾಂಬೆಚಾಳದ ನಿವಾಸಿಗಳಾಗಿದ್ದಾರೆ.
ಈವರೇಗೆ ನಗರದಲ್ಲಿ ಒಟ್ಟು 25 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಇವರುಗಳ ಪೈಕಿ 11 ಮಂದಿ ಈಗಾಗಲೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರಾಜೇಶಪ್ರಸಾದ ಅವರು ಸೋಂಕಿತರ ಕುರಿತಂತೆ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
Leave a Comment