
ಹಳಿಯಾಳ:- ಶುಕ್ರವಾರ ಒಂದೇ ಒಂದು ಪ್ರಕರಣ ದೃಢಪಡುವ ಮೂಲಕ ಸಮಾಧಾನ ಮೂಡಿಸಿದ್ದ ಕೊರೊನಾ ಆತಂಕ ಮತ್ತೇ ಶನಿವಾರ 12 ಜನರಲ್ಲಿ ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ ಹಳಿಯಾಳ ತಾಲೂಕು ಒಂದರಲ್ಲೇ 141 ತಲುಪಿದೆ.
ಕಾರವಾರ ಲ್ಯಾಬ್ನಿಂದ ಬಂದ ವರದಿಯಲ್ಲಿ 7 ಜನರಿಗೆ ಸೊಂಕು ದೃಢಪಟ್ಟಿದ್ದರೇ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ತ್ವರಿತ (ರ್ಯಾಪಿಡ್) ಕೊವಿಡ್-19 ಪತ್ತೆ ಪರೀಕ್ಷೆಯಲ್ಲಿ 5 ಜನರಿಗೆ ಸೊಂಕು ದೃಢಪಟ್ಟಿವೆ. ಹಳಿಯಾಳ ಪಟ್ಟಣದ 10 ಹಾಗೂ ಗ್ರಾಮಾಂತರ ಭಾಗಕ್ಕೆ 2 ಹೀಗೆ ಶನಿವಾರ ಒಟ್ಟು 12 ಜನರಲ್ಲಿ ಸೊಂಕು ದೃಢಪಟ್ಟಿದೆ. ಪೋಲಿಸ್, ನರ್ಸಗಳು ಸೇರಿ ಮೂವರು ಕೊರೊನಾ ವಾರಿಯರ್ಸ್ಗಳಿಗೆ ಶನಿವಾರ ಮಹಾಮಾರಿ ಒಕ್ಕರಿಸಿದೆ.
ಪಟ್ಟಣದ ಪ್ರಕರಣಗಳ ಪೈಕಿ ಬಸವನಗರದ 74 ವರ್ಷದ ಅಜ್ಜಿ ಅನಾರೋಗ್ಯದಿಂದ ಇತ್ತೀಚೆಗೆ ಧಾರವಾಡ ಎಸ್.ಡಿಎಮ್ ಆಸ್ಪತ್ರೆಗೆ ತೆರಳಿದಾಗ ಸೊಂಕು ದೃಢಪಟ್ಟಿತ್ತು ಇವಳ ಸಂಪರ್ಕದಲ್ಲಿದ್ದ ಪತಿ 81 ವರ್ಷದ ವೃದ್ದ, ಮನೆಯ 23 ಮತ್ತು 15 ವರ್ಷಗಳ ಯುವತಿಯರಿಗೆ ಸೊಂಕು ತಾಗಿದೆ.
ಕೊರೊನಾ ವಾರಿಯರ್ಸ್ ಆಗಿರುವ ಪಟ್ಟಣದ ಪುಂಗಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ 52 ವರ್ಷದ ಮಹಿಳೆಗೆ, ಇತ್ತೀಚೆಗೆ ಸೊಂಕಿತನಾಗಿದ್ದ ಗುತ್ತಿಗೇರಿ ಗಲ್ಲಿಯ ಯುವಕನಿಂದ ಆಕೆಯ ತಾಯಿ 52 ವರ್ಷದ ಮಹಿಳೆಗೆ ಸೊಂಕು ತಗುಲಿದೆ.
ತಾಲೂಕಿನ ತೇರಗಾಂವ ಗ್ರಾಮದಲ್ಲಿ ಸೊಂಕಿತ ಆಶಾ ಕಾರ್ಯಕರ್ತೆಯ ಕುಟುಂಬದ 24 ಮತ್ತು 29 ವರ್ಷದ ಇಬ್ಬರು ಯುವಕರಲ್ಲಿ ಸೊಂಕು ದೃಢಪಟ್ಟಿದೆ.
ಇನ್ನೂ ಶನಿವಾರ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ಭಾಗವತಿ ಗ್ರಾಮದ 29 ವರ್ಷದ ಮಹಿಳೆಗೆ, ಕಳೆದ 2 ದಿನಗಳ ಹಿಂದೆಯಷ್ಟೇ ಪಾಸಿಟಿವ್ ಆಗಿರುವ ಕೊರೊನಾ ವಾರಿಯರ್ಸ್ ನರ್ಸ ಕುಟುಂಬದ ಮಗ-30 ಮತ್ತು 26 ವರ್ಷದ ಸೊಸೆಗೆ, ಮತ್ತೊರ್ವ ವಾರಿಯರ್ಸ್ 36 ವರ್ಷದ ನರ್ಸ(ಶುಶ್ರೂಷಕಿ)ಗೆ ಹಾಗೂ ಓರ್ವ 37 ವರ್ಷದ ಪೋಲಿಸ್ ಸಿಬ್ಬಂದಿಗೆ ಕೊವಿಡ್ ದೃಢಪಟ್ಟಿದೆ.

Leave a Comment