
ಚಿಕ್ಕಬಳ್ಳಾಪುರ: ‘ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ -ಹಾಡಹಗಲೇ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣ’ಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್(ಸುದ್ದಿ)ಗಾಗಿ ಮನೆಗೆ_ಬೆಂಕಿ_ಹಚ್ಚುವಂತೆ ಪ್ರೇರೇಪಿಸಿದ್ದು_ಯೂಟ್ಯೂಬ್ ಚಾನಲ್ವೊಂದರ ವರದಿಗಾರ ಎಂಬ ಆತಂಕಕಾರಿ_ಅಂಶ_ತನಿಖೆ_ವೇಳೆ ಬಯಲಾಗಿದೆ.
ಬಾಗೇಪಲ್ಲಿ ತಾಲೂಕು ಯಗವ_ಮದ್ದಲಖಾನೆಯಲ್ಲಿ ಹರೀಶ್ ಮತ್ತು ಸಿರೀಶಾ ಲವ್ ಸ್ಟೋರಿ ದುರಂತ ಅಂತ್ಯ ಕಂಡಿದೆ. ಪ್ರಿಯಕರನ ಜತೆ ಮದುವೆ ಆಗಲು ಪಾಲಕರು ಒಪ್ಪುತ್ತಿಲ್ಲ ಎಂದು ಮನನೊಂದ ಸಿರೀಶಾ ಕಳೆದ ವರ್ಷ ಆತ್ಮಹತ್ಯೆಗೆ_ಶರಣಾಗಿದ್ದಳು. ಮಗಳ ಸಾವಿನ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದ ಆಕೆಯ ತಂದೆ ವೆಂಕಟೇಶ್ ಕಳೆದ ಶುಕ್ರವಾರ (ಜು.25) ರಾತ್ರಿ ಹರೀಶ್ನನ್ನು ಚಾಕುವಿನಿಂದ_ಇರಿದು ಕೊಂದಿದ್ದರು.
ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಸ್ಥರಿಗೆ ಮತ್ತಷ್ಟು ದ್ವೇಷದ ಕಿಡಿ ಹೊತ್ತಿಸಿದ್ದು, ಯೂಟ್ಯೂಬ್ ಚಾನಲ್ವೊಂದರ ವರದಿಗಾರ ನರೇಂದ್ರ. ‘ಹೆಣ್ಣು ಮಕ್ಕಳು ಹೊಡೆದರೆ ಕೇಸ್ ಆಗಲ್ಲ’ ಎಂದು ಅವರನ್ನು ಹುರಿದುಂಬಿಸಿದ ನರೇಂದ್ರ, ವೆಂಕಟೇಶ್ ಮನೆಗೆ ಬೆಂಕಿ ಹಚ್ಚುವಂತೆ ಪ್ರೇರೇಪಿಸಿ ಹುಚ್ಚಾಟ ಮೆರೆದಿದ್ದಾನೆ. ಇದೆಲ್ಲವೂ ಆತ ಮಾಡಿದ್ದು ಸುದ್ದಿಗಾಗಿ_ಅಂತೆ!
ವರ್ಷದ ಹಿಂದೆ ಎರಡೂ ಕುಂಟುಂಬಗಳ ದ್ವೇಷಾಗ್ನಿ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯೂಟ್ಯೂಬ್ ಚಾನಲ್ನ ವರದಿಗಾರನೊಬ್ಬ ಖಾಸಗಿ ಚಾನಲ್ ಗೆ ಸುದ್ದಿ ಮಾಡುವುದಾಗಿ ಹೆಳುತ್ತಿದ್ದ ಜನರಿಗೆ ತಾನು ಸುದ್ದಿ ವಾಹಿನಿಯ ವರದಿಗಾನೆಂದು ಹೇಳುತ್ತಿದ್ದ ಎನ್ನಲಾಗಿದ್ದು ಸಿಕ್ಕ ಸಿಕ್ಕ ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಅಪಲೋಡ್ ಮಾಡುತ್ತಿದ್ದ ಎನ್ನಲಾಗಿದೆ.

ಹರೀಶ್ ಮತ್ತು ಸಿರೀಶಾ. ಮಧ್ಯದಲ್ಲಿರುವುದು ಸಿರೀಶಾಳ ಮನೆ ಬೆಂಕಿಗೆ ಆಹುತಿಯಾಗಿರುವ ಚಿತ್ರ.
ಹೆಸರಿನಲ್ಲಿ ಸುದ್ದಿ ಮಾಡುವುದಾಗಿ ಬಿಂಬಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾನೆ.
ಹರೀಶ್ ಕೊಲೆ ಆರೋಪದಡಿ ಸಿರೀಶಾಳ ತಂದೆ ವೆಂಕಟೇಶ್ ಮತ್ತು ಸಂಬಂಧಿ ಗಣೇಶ್ ಇಬ್ಬರನ್ನೂ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಗನ ಸಾವಿಂದ ಕಂಗೆಟ್ಟ ಹರೀಶ್ ಸಂಬಂಧಿಕರು ಶನಿವಾರ(ಜು.26) ವೆಂಕಟೇಶ್ ಮನೆ ಮುಂದೆ ಗಲಾಟೆ ಮಾಡಿ ಬಾಗಿಲು ಹಾಗೂ ಕಿಟಕಿ ಗಾಜುಗಳನ್ನು ಹೊಡೆದು ಆಕ್ರೋಶ ಹೊರಹಾಕಿದ್ದರು. ಆ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ಮನೆಯ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ 15 ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ‘ಬೆಂಕಿ ಹಚ್ಚುವಂತೆ ಪ್ರೇರೇಪಿಸಿದ್ದೇ ನರೇಂದ್ರ’ ಎಂಬ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.
‘ಬಾಗೇಪಲ್ಲಿ_ನ್ಯೂಸ್’ ಎಂಬ ಯೂಟ್ಯೂಬ್ #ಚಾನೆಲ್ ನಡೆಸಿಕೊಂಡಿದ್ದ ನರೇಂದ್ರ ಕೈಗೆ ಸಿಕ್ಕ ವಿಡಿಯೋವನ್ನೆಲ್ಲ ಅಪ್ಲೋಲೋಡ್ ಮಾಡುತ್ತಿದ್ದ ಎನ್ನಲಾಗಿದೆ. ನ್ಯೂಸ್ಗಾಗಿ ಬೆಂಕಿ ಹಚ್ಚಿಸಿದ ತಪ್ಪಿಗೆ ಜೈಲು ಸೇರಿದ್ದಾನೆ.

ಸುದ್ದಿ ಕೃಪೆ :- ವಿಜಯವಾಣಿ.
Leave a Comment