
ಯಲ್ಲಾಪುರ :- ತಾಲೂಕಿನ ರಾಮನಕೊಪ್ಪದಲ್ಲಿ ಏನು ಅರಿಯದ ಹೆಣ್ಣು ಮಗುವೊಂದನ್ನು ಬಾವಿಗೆ ಎಸೆದು ಕೊಂದ ಆರೋಪಿಗಳನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲೀಸರು_ಯಶಸ್ವಿಯಾಗಿದ್ದಾರೆ.
ಮೃತ 40 ದಿನದ ಮಗುವಾಗಿದ್ದ ತನುಶ್ರೀ,
ಹೆಣ್ಣು ಮಗುವೆಂಬ ಕಾರಣಕ್ಕಾಗಿ ಪ್ರಾಣ ತೆಗೆದವರು ಬೇರೆ ಯಾರೋ ಅಲ್ಲ, ಅದೇ ಮಗುವಿನ_ಸ್ವಂತ ತಂದೆ_ತಾಯಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇನ್ನೂ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೇ ಈ ಆರೋಪಿ ಗಂಡ ಹೆಂಡತಿಯ_ವಯಸ್ಸಿನ_ಅಂತರ_ಬರೊಬ್ಬರಿ
20_ವರ್ಷ.
ಪೋಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು ಅವರ ನಿರ್ದೇಶನದಂತೆ ಪ್ರತ್ಯೇಕ ತಂಡ ರಚಿಸಿದ ಅಧಿಕಾರಿಗಳ ತಂಡ ಕೊಲೆಯ ಜಾಡು ಹಿಡಿದು ಹೊರಟು ಕೊಲೆಯ ಎ ರಹಸ್ಯ ಭೇದಿಸಿ ಕೊನೆಗೆ ಪೋಲೀಸರೇ ಬೆಚ್ಚಿಬಿದ್ದಿರುವ ಅಮಾನವೀಯತೆಯ ಘಟನೆ ಇದು.
ಮೃತ ತನುಶ್ರೀ ಅವರ ಕುಟುಂಬದವರನ್ನು ವಿಚಾರಣೆ ನಡೆಸಿದಾಗ ಆರೋಪಿ ಚಂದ್ರಶೇಖರ_ಭಟ್ಟ (42) ಮತ್ತು ತಾಯಿ ಪ್ರಿಯಾಂಕಾ_ಚಂದ್ರಶೇಖರ_ಭಟ್ಟ (22) ತಾವು ಹೆಣ್ಣು ಮಗುವೆಂದು ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಪ್ರಕರಣ ದಾಖಲಾದ 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಆರೋಪಿಗಳನ್ನು ಬಂದಿಸಿದ ಯಲ್ಲಾಪುರ ಠಾಣೆ ಪೋಲೀಸರು ಮತ್ತು ಅವರ ತಂಡಕ್ಕೆ ತಾಲೂಕಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಸ್ಪಿ ಶಿವಪ್ರಕಾಶ ದೇವರಾಜು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Comment