ಹೊನ್ನಾವರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಕರ್ಕಿ ದಯಾನಂದ ವಿದ್ಯಾಭಾರತೀ ಆಂಗ್ಲಮಾಧ್ಯಮ ಶಾಲೆಯ ಜಯಂತ ಆರ್.ಹಬ್ಬು 99.02% ಪಡೆದು ಸಾಧನೆ ಮಾಡಿದ್ದರು. ಶುಕ್ರವಾರ ಶಾಸಕ ದಿನಕರ ಶೆಟ್ಟಿ ಹಳದೀಪುರದವರ ವಿದ್ಯಾರ್ಥಿಯ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.
ನಂತರ ಮಾತನಾಡಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಪ್ರಶಂಸನೀಯವಾಗಿದೆ. ನನ್ನ ಕ್ಷೇತ್ರದಲ್ಲಿ ಇಂತಹ ಶಿಕ್ಷಣ ಸಂಸ್ಥೆ ಇರುವುದು ನನಗೆ ಸಂತಸ ಮೂಡಿದೆ. ಇದೇ ಶಾಲೆಯಲ್ಲಿ ಮೇಘಾಲಯದ ವಿದ್ಯಾರ್ಥಿ ಡೋಬಿಯಾಂಗ್ ಕೆ. 97.12% ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾನೆ. ಶಾಲೆಗೆ ತೆರಳಿ ಮುಂದಿನ ದಿನದಲ್ಲಿ ಗೌರವಿಸುತ್ತೇನೆ. ಇಂತಹ ಮಕ್ಕಳ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಆರ್,ನಾಯ್ಕ, ಸ್ಥಳಿಯರಾದ ಸತೀಶಹಬ್ಬು, ರತ್ನಾಕರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Leave a Comment