ರಾಜ್ಯಾದ್ಯಂತ ಬಿಸಿಯೂಟ ನೌಕರರ ಸಂಘ ವಿವಿದ ಬೇಡಿಕೆ ಈಡೆರಿಸುವಂತೆ ಒತ್ತಾಯಿಸಿ ಧರಣಿ, ಹೊನ್ನಾವರದಲ್ಲಿಯೂ ಹೋರಾಟ ನಡೆಸಿ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೇಡಿಕೆ ಈಡೇರಿಸುವಂತೆ ಮನವಿ
ಕೋವಿಡ್ 19 ಸಾಂಕ್ರಾಮಿಕ ಅವಧಿಯಲ್ಲಿ ಬಿಸಿಯೂಟ ಅಡುಗೆ ಕಾರ್ಯಕರ್ತೆಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ 1.17.999 ನೌಕರರು ಕಳೆದ 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯ ನಾಲ್ಕು ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅತಿ ಬಡ ಮಹಿಳೆಯರು ಅಥವಾ ವಿಧವೆಯರು ಹೆಚ್ಚಿನವರು ಆಗಿರುದರಿಂದ ಈ ಉದ್ಯೋಗವನ್ನು ನಂಬಿ ತಮ್ಮ ಜೀವನ ನಡೆಸುತ್ತಿದ್ದಾರೆ 4 ತಿಂಗಳಿನಿಂದ ಯಾವುದೆ ಅದಾಯವಿಲ್ಲದೆ, ಅತ್ಯಂತ ಕಷ್ಟದ ಪರಿಸ್ಥಿತಿಗೆ ಬಂದಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಬಡ ಮಹಿಳಾ ಕಾರ್ಮಿಕರ ಬದುಕಿಗೆ ಸರ್ಕಾರ ನೆರವು ನೀಡಬೇಕಿತ್ತು. ಆದರೆ ತನ್ನ ಪ್ಯಾಕೇಜ್ ನಲ್ಲಿ ಈ ವಿಭಾಗಕ್ಕೆ ಹಣ ಮೀಸಲಾಗಿ ಇಡದೇ ಇರುವುದು ಖಂಡನಿಯ ಇದನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತಿವ್ರವಾಗಿ ಖಂಡಿಸುತ್ತೇವೆ. ಎಂದು ಅಕ್ಷರ ದಾಸೋಹದ ಕಾರ್ಯ ನಿರ್ವಹಣಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಯಮುನಾ ಗಾವಂಕರ ಮಾತನಾಡಿ
ಕಳೆದ 5 ದಿನಗಳಿಂದ ಬೇಡಿಕೆ ಈಡೇರಿಸುವಂತೆ ಉಪವಾಸ ಸತ್ಯಾಗ್ರಹ ಮಾಡಿದರೂ ಯಾರಿದಂಲೂ ಸ್ಪಂದನೆ ದೊರಕಿಲ್ಲ. ಶಿಕ್ಷಣ ಇಲಾಖೆಯ ಕೊರೋನಾ ಪ್ಯಾಕೇಜನಲ್ಲಿ ನಯಾ ಪೈಸೆ ಅನುದಾನವಿಲ್ಲ. ಏಪ್ರೀಲನಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಈ ವರ್ಗಕ್ಕೆ ದೊರಕಿಲ್ಲ. ಅಕ್ಷರದಾಸೋಹ ಕೇಂದ್ರ ಪ್ರಾಯೋಜಕತ್ವದ ಯೋಜನೆ ಆದರೂ ಕಳೆದ 7 ವರ್ಷದಿಂದ ಕೇಂದ್ರಸರ್ಕಾರ ಇಲ್ಲಿಯ ಸಿಬ್ಬಂದಿಗಳಿಗೆ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಕೆಲಸ ಮಾಡುವ ಪ್ರತಿಯೊಂದು ಕುಟುಂಬಕ್ಕೆ ಅರು ತಿಂಗಳ ರೇಷನ್ ಉಚಿತವಾಗಿ ನೀಡಬೇಕು ಮತ್ತು 7500 ರೂಪಾಯಿಂತೆ ಪ್ರತಿ ತಿಂಗಳುಗಳ ಕಾಲ ಹಣಕಾಸಿನ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಶ್ರೀಮತಿ ನಾಯ್ಕ, ಕಾರ್ಯದರ್ಶಿ ವನಿತಾ ಆಚಾರಿ, ಖಜಾಂಚಿ ರೇಣುಕಾ ಮಡಿವಾಳ, ಸುಧಾ ಅಂಬಿಗ, ಸಿ.ಐ.ಟಿ.ಯು. ಅಧ್ಯಕ್ಷ ತಿಮ್ಮಪ್ಪ ಗೌಡ, ತಿಲಕ ಗೌಡ. ಹಾಜರಿದ್ದರು.
Leave a Comment