• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೀರಪಾಂಡ್ಯ ಕಟ್ಟಬೊಮ್ಮನ್- ಭಾರತ ಕಂಡ ಅಪ್ರತಿಮ ವೀರ

August 17, 2020 by Harshahegde Kondadakuli Leave a Comment

 ಸುಮಾರು 6ತಿಂಗಳ ಹಿಂದೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೆ. ನಾ ಕುಳಿತ ಸೀಟಿನ ಪಕ್ಕದಲ್ಲಿ ಒಬ್ಬ ಧಡೂತಿ ದೇಹದ ವ್ಯಕ್ತಿಯೊಬ್ಬ ಕುಳಿತಿದ್ದ. ನನ್ನ ಕಣ್ಣು ಸಾಮಾನ್ಯವಾಗೇ ಆತನೆಡೆಗೆ ಸಾಗಿತು. ಆದರೆ ಕೊನೆಗೆ ಯಾಕೆ ನೋಡಿದೆನೋ ಅನ್ನಿಸಿದಿದಷ್ಟು ಬೇಸರವಾಯಿತು. ಏಕೆಂದರೆ ಆತನ ಕಾಲಕೆಳಗೆ ನಮ್ಮ ರಾಷ್ಟ್ರ ಧ್ವಜದ ಪುಟ್ಟ ಸ್ಟಿಕ್ಕರ್ ಒಂದು ಬಿದ್ದಿತ್ತು. ಅದನ್ನು ಆತ ಕಾಲಿನಿಂದಲೇ ತುಳಿದು ಮುಂದಿನ ಸೀಟಿಗೆ ತಳ್ಳಿದ. ನನಗೆ ಆಗಲೇ ಪ್ರತಿಕ್ರಿಯಿಸಲು ಭಯವಾಯಿತಾದರೂ , ಆ ವ್ಯಕ್ತಿ ಇಳಿದ ನಂತರ ಅದನ್ನು ಎತ್ತಿ ತಂದಿಟ್ಟುಕೊಂಡೇ. ಇದನ್ನು ಯಾಕೆ ಹೇಳಿದೆ ಎಂದರೆ ಭಾರತ ದೇಶವೇ ಹಾಗೆ, ನಮಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಜಾಸ್ತಿ. ನಮಗೆ ನಮ್ಮ ದೇಶದ ಮೇಲಿನ ಗೌರವ ಆದರಗಳಿಗಿಂತ ಬೇರೆ ದೇಶದ ಮೇಲಿನ ಪ್ರೀತಿ ಒಲವೇ ಹೆಚ್ಚು. ಇದು ಎಷ್ಟರ ಮಟ್ಟಿಗೆ ಎಂದರೆ ನಮ್ಮ ರಾಷ್ಟ್ರಧ್ವಜ ರಾಷ್ಟ್ರಗೀತೆಗೆ ಕನಿಷ್ಠ ಗೌರವವನ್ನೂ ತೋರಿಸಲಾಗದಷ್ಟು ಅಸಡ್ಡೆ ಮತ್ತು ಅಧಿಕಪ್ರಸಂಗವನ್ನು ತೋರಿಸುತ್ತೇವೆ. ಆದರೆ ವಿಪರ್ಯಾಸ ಅಂದರೆ ಆ ರೀತಿ ನಡೆದುಕೊಳ್ಳುವವರನ್ನು ಸಮಾಜ ಹೀರೊ ಎಂಬಂತೆ ಕಾಣುತ್ತದೆ. ಇದು ಬಹಳ ವಿಷಾದಕರ ಸಂಗತಿ. ಇನ್ನು ಮೇಲಾದರೂ ಈ ರೀತಿಯ ಮನೋಭಾವ ಬದಲಾಗಬೇಕು.       

ವೀರಪಾಂಡ್ಯ ಕಟ್ಟಬೊಮ್ಮನ್

ನಾವಿಂದು 74ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದೇವೆ. ಮೊದಲನೆಯದಾಗಿ ಎಲ್ಲ ಓದುಗರಿಗೆ ಈ ಮಹತ್ವಪೂರ್ಣ ಹಬ್ಬದ ಆತ್ಮೀಯ ಶುಭಾಶಯಗಳು. ಈ ವಿಶೇಷ ಸಂದರ್ಭದಲ್ಲಿ ನಾವು ನೀವೆಲ್ಲ ಮರೆತಿರುವ ಒಬ್ಬ ಮಹಾನ ಸ್ವಾತಂತ್ರ್ಯ ಸೇನಾನಿಯೊಬ್ಬರ ಕುರಿತು ಹೇಳಬಯಸುತ್ತೇನೆ. ಉತ್ತರ ಭಾರತದಲ್ಲಿ 1857ರಳ್ಳಿ ನಡೆದ ಸಿಪಾಯಿದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ  ಎಂದು ಕರೆಯಲಾಗುತ್ತದೆ. ಆದರೆ ಅದಕ್ಕಿಂತ ದಶಕಗಳ ಮೊದಲೇ ದಕ್ಷಿಣ ಭಾರತದ ಬಹಳಷ್ಟು ರಾಜರುಗಳು, ಪಾಳೇಗಾರರು ಬ್ರೀಟಿಷರ ಬಂಡವಾಳ ಶಾಹೀ ನೀತಿತ ವಿರುದ್ಧ ಸಿಡಿದೆದ್ದಿದ್ದರು. ಅವುಗಳಲ್ಲಿ ರಾಣಿ ಲಕ್ಷೀಬಾಯಿ, ರಾಣಿ ಅಬ್ಬಕ್ಕ,ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಬಹಳಷ್ಟು ಹೆಸರುಗಳು ಮುಖ್ಯವಾಗಿವೆ ಇವೆಗಳೆಲ್ಲರ ನಡುವೆ ಗೌಣವಾಗಿ ಉಳಿದ ಮತ್ತೊಬ್ಬ ಮಹಾನ ನಾಯಕನ ಹೆಸರೇ ವೀರಪಾಂಡ್ಯ ಕಟ್ಟ ಬೊಮ್ಮನ್.                                                     

ವೀರಪಾಂಡ್ಯ ಕಟ್ಟಬೊಮ್ಮನ್ , ಧೀರೋದಾತ್ತ ಸ್ವಾತಂತ್ರ್ಯ ವೀರರ ಸಾಲಿನಲ್ಲಿ ಬರುವ ಒಂದು ಜ್ವಲಂತ ಹೆಸರು. ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ತಮಿಳುನಾಡಿನ ಕೆಲವು ಸಾಮಂತ ರಾಜರುಗಳು ತಮಗೆ ತಾವೇ ಸ್ವಾತಂತ್ರ್ಯ ಘೋಷಿಸಿಕೊಂಡು , ರಾಜ್ಯಗಳನ್ನು ಕಟ್ಟಿಕೊಂಡರು. ಇವರಲ್ಲಿ ಒಬ್ಬರವು ನೈಕರ್ ದೊರೆಗಳು. ಪಾಂಡ್ಯ ಎಂಬ ಪ್ರದೇಶದಿಂದ ಮಥುರೈಯನ್ನು ಅಳುತ್ತಿದ್ದ ಈ ದೊರೆಗಳು , ತಮ್ಮ ರಾಜ್ಯವನ್ನು72ಪಾಲಯಗಳಾಗಿ ವಿಂಗಡಿಸಿ ಅವುಗಳನ್ನು ಒಂದೊಂದು ಪಾಳೆಯಗಾರರಿಗೆ ನೀಡಿದ್ದರು. ಈ ಪಾಳೇಯಗಾರರು ಪ್ರಜೆಗಳಿಂದ ತೆರಿಗೆ ವಸೂಲಿ ಮಾಡುವುದು ಹಾಗೂ ಯುದ್ಧಕ್ಕೆ ಸೈನ್ಯವನ್ನು ಸಜ್ಜಾಗಿರಿಸುವ ಕೆಲಸವನ್ನು ಮಾಡುತ್ತಿದ್ದರು. ಹೀಗಿರುವಾಗ ಒಮ್ಮೆ 1736ರಲ್ಲಿ ಆರ್ಕೊಟ್ ನ ಚಂದಾ ಸಾಹಿಬ್ ಎಂಬ ಸರದಾರ ಮಥುರೈಯನ್ನು ವಶಪಡಿಸಿಕೊಂಡ. ಚಂದಾ ಸಾಹಿಬ ಇಂಗ್ಲೀಷರ ಈಸ್ಟ್ ಇಂಡಿಯಾ ಸೈನ್ಯದ ವಿರುದ್ಧ  ಈ ರಾಜ್ಯ ಆರ್ಕಾಟ್ ನ ನವಾಬನ ಕೈಗೆ ಬಂತು. ಈತ ಅರಮನೆ ಕಟ್ಟಿಸುವುದರಲ್ಲೇ ತನ್ನ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿದ್ದ, ಇದರಿಂದ ಪಾಳೆಯಗಾರರು ತೆರಿಗೆ ಸಂದಾಯ ಮಾಡುವುದನ್ನು ನಿಲ್ಲಿಸಿದರು. ಆದರೆ ನವಾಬ ತೆರಿಗೆ ಸಂದಾಯ ಮಾಡುವ ಅಧಿಕಾರವನ್ನು ಬ್ರಿಟೀಷರಿಗೇ ಬಿಟ್ಟುಕೊಟ್ಟ. ಅವರುಗಳು ಕರ ಸಂದಾಯ ಮಾಡದ ಹಲವು ಪಾಳೇಯಗಾರರರನ್ನು ಕೊಲ್ಲುತ್ತಾ ಬಂದರು. ಈ ದೌರ್ಜನ್ಯಕ್ಕೆ ಮಣಿದು ಉಳಿದ ಪಾಳೆಯಗಾರರು ಕರವನ್ನು ಕೊಡಲು ಪ್ರಾಂಭಿಸಿದರು. ಆದರೆ ವೀರಪಾಂಡ್ಯನ್ ಪಾಳೆಯದ ಕಟ್ಟಬೊಮ್ಮನ್ ಮಾತ್ರ ಇದರ ವಿರುದ್ಧ ಸಿಡಿದೆದ್ದು ನಿಂತ.                                                             

 ಬೊಮ್ಮನ್ ಎಂಬಾತ ಅಜಗೀಯ ವೀರಪಾಂಡ್ಯಪುರಮ್ ಪಾಳೆಯವನ್ನು ಆಳುತ್ತಿದ್ದ. ಅಂದರೆ ಇಂದಿನ ತಮಿಳುನಾಡಿನ ಓಟ್ಟಪಿಡಾರಂ ಪ್ರಾಂತ್ಯ. ಈತ ಮೂಲತಃ ಪಾಳೇಯಗಾರನಲ್ಲ. ಜಗವೀರ ಪಾಂಡ್ಯನ್ ಎಂಬ ಪಾಳೇಯಗಾರನಲ್ಲಿ ಮಂತ್ರಿಯಾಗಿದ್ದ ಬೊಮ್ಮನ್  , ಆತನ ದೇಹಾಂತದ ಬಳಿಕ ಆ ಪ್ರಾಂತ್ಯದ ಜವಾಬ್ದಾರಿ ಪಡೆದ. ಆತನ ಕಟ್ಟುಮಸ್ತಾದ ದೇಹದಿಂದಾಗಿಯೇ  ಕಟ್ಟಬೊಮ್ಮ್ಮನ್ ಎಂದು ಖ್ಯಾತಿ ಪಡೆದ. ಈ ಕಟ್ಟಬೊಬ್ಬನ್ ಮನೆತನದ ಜಗವೀರ ಮತ್ತು ಆರೂಮುಗದಮ್ಮಾಳ್ ದಂಪತಿಗೆ 1760 ರಲ್ಲಿ ಹುಟ್ಟಿದ ಮಹಾನ ಸಾಹಸಿಯೇ ನಾನೀಗ ಹೇಳಹೊರಟಿರುವ ಕಥಾ ನಾಯಕ ವೀರಪಾಂಡ್ಯ ಕಟ್ಟಬೊಮ್ಮನ್. ಈತ ಬಾಲ್ಯದಿಂದಲೇ ಮಹಾನ್ ಸಾಹಸಿ, ರಾಜನಾಗುವ ಎಲ್ಲ ಅರ್ಹತೆಗಳೂ ಅವನಲ್ಲಿದ್ದವು. ಜನರು ಅವನನ್ನು ‘ ಕರುಥೈಯ್ಯ ‘ (ಕರಿಯ ರಾಜಕುಮಾರ ) ಎಂದೇ ಕರೆಯುತ್ತಿದ್ದರು. 1790 ರಲ್ಲಿ ತನ್ನ ಮೂವತ್ತನೇ ವಯಸ್ಸಿನಲ್ಲಿ ವೀರಪಾಂಡ್ಯನ್ ಪಾಂಚಾಲನ್ ಕುರಿಚಿಯ ರಾಜನಾದ . ಆ ಕಾಲದಲ್ಲಿ ಎಲ್ಲ ಪಾಳೇಯಗಾರರು ಕಂಪನಿ ಸರಕಾರಕ್ಕೆ ಕಂದಾಯ ಸಂಗ್ರಹ ಮಾಡುತ್ತಿದ್ದರೆ, ಈತ ಮಾತ್ರ ಅದನ್ನು ನಿಲ್ಲಿಸಿಬಿಟ್ಟ. ಈ ಸಂಬಂಧ ಕಂಪನಿ ಸರಕಾರದ ಕಲೆಕ್ಟರ್ ಆಗಿದ್ದ ಜಾಕ್ಸನ್ , ವೀರಪಾಂಡ್ಯಾಗೆ ತನ್ನನ್ನು ಭೇಟಿಯಾಗುವಂತೆ ಹೇಳಿ ಕಳುಹಿಸಿದ. ಆದರೆ ಪಾಂಡ್ಯನ್ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ಕಂಪನಿ ಸರ್ಕಾರ ಆತನ ನೆರೆಯ ಪಾಳೇಯಗಾರರನ್ನು ಆತನ ವಿರುದ್ಧ ಯುದ್ಧ ಮಾಡುವಂತೆ ಪ್ರೇರೇಪಿಸಿತು. ಕಟ್ಟಬೊಮ್ಮನ್ ಅವರ ಆ ಸೈನ್ಯವನ್ನು ಬಗ್ಗುಬಡಿದು ಹಣ್ಣುಗಾಯಿ ನೀರುಗಾಯಿ ಮಾಡಿದ. ಇದಾದ ಮೇಲೆ ರಾಮನಾಥಪುರಂ ಪಾಳಯದ ರಾಜ ಈತನನ್ನು ಸಂಧಾನಕ್ಕೆ ಕರೆದ. ಅಲ್ಲಿ ಪಾಂಡ್ಯನ್ ಜಾಕ್ಸನ್ ನನ್ನ ಭೇಟಿಯಾದ. ಬರಗಾಲದ ಪರಿಣಾಮ ಪ್ರಜೆಗಳು ಸಂಕಷ್ಟದಲ್ಲಿದ್ದಾರೆ, ಕಂದಾಯ ವಸೂಲಿ ಮಾಡಲಾಗುವುದಿಲ್ಲ ಎಂದು ಪಾಂಡ್ಯನ್ ಖಡಾಖಂಡಿತವಾಗಿ ಹೇಳಿಬಿಟ್ಟ. ಕೂಡಲೇ ಜಾಕ್ಸನ್ ಪಾಂಡ್ಯನ್ ನನ್ನ ಬಂಧಿಸಲು ಸೈನಿಕರನ್ನು ಛೂ ಬಿಟ್ಟ. ಇದನ್ನು ಮೊದಲೇ ನೀರಿಕ್ಷಿಸಿದ್ದ ಪಾಂಡ್ಯನ್ ಜಾಕ್ಸನ್ ನನ್ನೇ ಮುಗಿಸಿ ಅಲ್ಲಿಂದ ಪಾರಾದ. ಆದರೆ ಆತನ ಕಾರ್ಯದರ್ಶಿ ಇಂಗ್ಲೀಷರ ಸೆರೆಯಾಳಾದ.                                                                                        ಈ ವಿವಾದದ ಬಳಿಕ ಪಾಂಡ್ಯನ್ ನನ್ನ ಒಲಿಸಿಕೊಳ್ಳಲು ಹೊಸ ಕಲೆಕ್ಟರ್ ಪ್ರಯತ್ಸಿಸಿದ. ಆದರೆ ಈ ಬಾರಿಯೂ ಪಾಂಡ್ಯನ್ ತೆರಿಗೆಯನ್ನಂತೂ ವಸೂಲಿ ಮಾಡಲು ಒಪ್ಪಲಿಲ್ಲ, ಬದಲಾಗಿ ತನ್ನ ಕಾರ್ಯದರ್ಶಿಯನ್ನು ಬಿಟ್ಟು ಕಳುಹಿಸುವಿದಾದರೆ ಸಂಧಾನಕ್ಕೆ ಸಿದ್ಧ ಎಂದ. ಈ ನಡುವೆ ಕೆಲವು ಪಾಳೇಗಾರರು ಪಾಂಡ್ಯನ್ ಗೆ ಸಹಾಯ ಮಾಡಲು ನಿರ್ಧರಿಸದ್ದರು. ಅವರಿಂದ ಪಾಂಡ್ಯನ್ ದೊಡ್ಡ ಸೈನ್ಯ ಕಟ್ಟುತ್ತಿದ್ದಾನೆಂಬ ಸುದ್ದಿ ಕಲೆಕ್ಟರ್ ಗೆ ತಲುಪಿತು. ಆತ ಕೂಡಲೇ ಬ್ಯಾನರ ಮ್ಯಾನ್ ಎಂಬಾತನ ನೇತೃತ್ವದಲ್ಲಿ ಪಾಂಚಾಲನ್ ಕುರಿಚಿಯ ಮೇಲೆ ಸೈನ್ಯವನ್ನು ಕಳುಹಿಸಿದ. ಆದರೆ ಸುಲಭವಾಗಿ ಪಾಂಡ್ಯನ ಕೋಟೆ ಮಣಿಯಲಿಲ್ಲ. ಬದಲಾಗಿ ಕಂಪನಿ ಸರ್ಕಾರವೇ ತನ್ನ ಅಪಾರ ಸೈನಿಕರನ್ನೊಳಗೊಂಡಂತೆ ಲೆಫ್ಟಿನೆಂಟ್ ಜನರಲ್ ಒಬ್ಬನ್ನನ್ನು ಕಳೆದುಕೊಂಡಿತು. ಇದರಿಂದ  ಬ್ಯಾನರ ಮ್ಯಾನ್ ಗೆ ಪಾಂಡ್ಯನ್ ಅದೆಷ್ಟು ಬಲಶಾಲಿ ಎಂಬುದು ಅರಿವಾಗಿತ್ತು. ಆತನನ್ನು ಮಣಿಸಲು ಮತ್ತೊಂದಿಷ್ಟು ಸೇನಾ ತುಕಡಿಗಳನ್ನು ಹಾಗೂ ತೋಪುಗಳನ್ನು ತರಿಸಿಕೊಂಡ. ತೋಪುಗಳ ಹೊಡೆತಕ್ಕೆ ಕೋಟೆ ಉಳಿಯಲಾರದು ಎಂದರಿತ ಪಾಂಡ್ಯನ್ ರಾತ್ರೋರಾತ್ರಿ ತನ್ನ ಕೆಲವು ಸಹಚರರೊಡನೆ ಕೋಟೆಯಿಂದ ತಪ್ಪಿಸಿಕೊಂಡು ಹೋದ. ಪಾಂಡ್ಯನ ನನ್ನು ಸೆರೆ ಹಿಡಿದವರಿಗೆ ಬಹುಮಾನವನ್ನು ಘೋಷಿಸಲಾಯ್ತು. ಪಾಂಡ್ಯನ್ ನ ಕಾರ್ಯದರ್ಶಿ ಸೇರಿ ಒಟ್ಟು 16 ಜನರನ್ನು ಗಲ್ಲಿಗೇರಿಸಲಾಯಿತು.                                                       ಇತ್ತ ಪಾಂಡ್ಯನ್ ಕೋಟೆಯಿಂದ ತಪ್ಪಿಸಿಕೊಂಡು ಬಂದು ತಿರುಮಾಯಮ್,ವೀರಾಚಿಲೈ,ಮುಂತಾದ ಕಡೆಗಳಲ್ಲಿ ತಿರುಗಿ ಕೊನೆಗೆ ಕೋಲಾರ ಪಟ್ಟಿಗೆ ಬಂದು ಅಲ್ಲಿನ ಒಬ್ಬ ಪಾಳೇಗಾರನ ಮನೆಯಲ್ಲಿ ಉಳಿದುಕೊಂಡ. ಕಂಪನಿ ಸೈನ್ಯ ಆ ಮನೆಯನ್ನೂ ಮುತ್ತಿಗೆ ಹಾಕಿತು. ಪಾಂಡ್ಯನ್ ಈಗಲೂ ತಪ್ಪಿಸಿಕೊಂಡು,ಪುದುಕೋಟ್ಟಾಯ್ ಬಳಿಯ ತಿರುಕಲಂ ಕಾಡಿನಲ್ಲಿ ಆಶ್ರಯ ಪಡೆದ. ಅಲ್ಲಿನ ಪಾಳೇಗಾರ ಪಾಂಡ್ಯನ್ ಅನ್ನು ಮೋಸದಿಂದ ಸೆರೆಹಿಡಿದ. ಕಂಪನಿ ಸರ್ಕಾರ ವಿಚಾರಣೆಯ ನಾಟಕವಾಡಿ ಕೊನೆಗೆ ಪಾಂಡ್ಯನ್ ಗೆ ಗಲ್ಲು ಶಿಕ್ಷೆ ವಿಧಿಸಿತು.1799 ರ ಅಕ್ಟೊಬರ್ ನಲ್ಲಿ ಪಾಂಡ್ಯನ್ ನನ್ನು ಕಾಯಥರ್ ಎಂಬಲ್ಲಿ ಒಂದು ಮರಕ್ಕೆ ನೇಣಿಗೇರಿಸಲಾಯಿತು. ಜೊತೆಗೆ ಆತನ ಕೋಟೆಯನ್ನೂ ಕಂಪನಿ ಸರ್ಕಾರ ವಶಪಡಿಸಿಕೊಂಡು ಅದನ್ನು ನೆಲಸಮ ಮಾಡಿತು. ಆದರೆ ಜನಮನದಲ್ಲಿ ಮಾತ್ರ ಈ ವೀರಾಗ್ರಣಿ ಹೆಸರು ಅಳಿಯಲಿಲ್ಲ. ಕಥೆ, ಹಾಡು , ಲಾವಣಿಯ ರೂಪದಲ್ಲಿ ಈ ವೀರನ ವೀರಗಾಥೆ ಅಜರಾರಾಮರವಾಯಿತು. ಕೇವಲ 39ವರ್ಷ ವಯಸ್ಸಿನಲ್ಲಿಯೇ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ನಡೆದ ಈ ಸ್ವಾತಂತ್ರ್ಯ ಸೇನಾನಿಯ ಸ್ಮಾರಕವಾಗಿ 1972 ರಲ್ಲಿ ಆತನ ಕೋಟೆಯಿದ್ದ ಜಾಗದಲ್ಲಿ ಹೊಸ ಕೋಟೆಯನ್ನೇ ತಮಿಳುನಾಡು ಸರ್ಕಾರ ಕಟ್ಟಿಸಿತು.1999ರಲ್ಲಿ ಕೇಂದ್ರ ಸರ್ಕಾರ ವೀರಪಾಂಡ್ಯ ಕಟ್ಟಬೊಮ್ಮನ್ ಹೆಸರಿನಲ್ಲಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.       

                                                    ಸ್ನೇಹಿತರೆ ,  ಭಾರತ ಸ್ವಾತಂತ್ರ್ಯ ಗಳಿಸಿ74 ವರ್ಷಗಳಾದರೂ ಇನ್ನೂ ಒಂದು ದೇಶ ಎಂಬ ಅರಿವಿಗೆ ಹಲವರು ಬಂದಂತೆ ಕಾಣುತ್ತಿಲ್ಲ.ಮೊನ್ನೆ ಮೊನ್ನೆಯ ಬೆಂಗಳೂರು ಗಲಭೆಯೇ ಇದಕ್ಕೆ ಜ್ವಲಂತ ಸಾಕ್ಷಿ. ಇದು ಮೇಲ್ನೋಟಕ್ಕೆ ಒಬ್ಬ ಹಾಕಿದ ಫೇಸ್ ಬುಕ್ ಪೋಸ್ಟ್ ನಿಂದ ಆದ ಘಟನೆಯಾದರೂ ಬಹಳ ಪೂರ್ವತಯಾರಿಯಿಂದ ಬಹುದೊಡ್ಡ  ಗಲಭೆಯನ್ನೇ ಸೃಷ್ಟಿಸಲು ಸಂಚು ರೂಪಿಸಲಾಗಿತ್ತು. ಆದರೆ ಆವರ ದುರಾದೃಷ್ಟವೊ ಅಥವಾ ಶ್ರೀಸಾಮಾನ್ಯರ ಅದೃಷ್ಟವೋ ಅದು ಸಫಲವಾಗಲೇ ಇಲ್ಲ. ಇದೇ ರೀತಿಯಲ್ಲಿ ದೆಹಲಿ, ಉತ್ತರಪ್ರದೇಶ,ಕಾಶ್ಮೀರಗಳಲ್ಲೂ ದೊಂಬಿಯನ್ನು ನಡೆಸಲಾಗಿತ್ತು. ನಮ್ಮ ಇಂದಿನ ದಿನಮಾನದಲ್ಲಿ ನಾವೆಲ್ಲಾ ಧರ್ಮ,ಮತ, ಜನಾಂಗಗಳ ಅಮಲಿನಲ್ಲಿದ್ದೇವೆ. ಹಿಂದೂಗಳು ಅವರ ಹಕ್ಕಾದ ರಾಮಮಂದಿರವನ್ನು ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪುನಃ ಕಟ್ಟಿಕೊಳ್ಳಲು ಮುಂದಾದರೆ,ಇದನ್ನು ಸಹಿಸಿಕೊಳ್ಳದ ಕೆಲವರು ದೇಶದ ಸಾಮರಸ್ಯ ಕದಡುವ ಮಾತುಗಳನ್ನಾಡುತ್ತಾರೆ. ದೇಶದ ಸಮಗ್ರತೆಗೆ ಅಖಂಡತೆಗೆ ದಕ್ಕೆ ತರುವ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದರೆ ಅದರಲ್ಲೂ ಧರ್ಮವನ್ನು, ಜಾತಿಯನ್ನು ಎಳೆದು ತರುತ್ತಿದ್ದಾರೆ.  ಸಿಎಎ , ಏನ್.ಆರ್.ಸಿ ಕಾಯ್ದೆಯನ್ನು ತಂದಾಗ ಅದರಲ್ಲಿ ಮೊಸರಲ್ಲಿ ಕಲ್ಲುಹುಡುಕುವ ಕೆಲಸ ಮಾಡುತ್ತಾರೆ. ಭಾರತದ ಭಾಗವಾದ ಕಾಶ್ಮೀರವನ್ನು ಮರಳಿ ಪಡೆಯಬೇಕೆಂದು ಭಾರತ ಪ್ರಯತ್ನಿಸಿದರೆ ಅದಕ್ಕೂ ಕೆಲವು ಮತಾಂಧರು ಮುಸ್ಲಿಂ-ಹಿಂದೂ ಕೋಮು ಬಣ್ಣವನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವೂ ನನ್ನದೇ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನಡೆಯುತ್ತಿದೆ. ದೇಶದ ವಿರುದ್ಧ ಮಾತನಾನಾಡುವ, ದೇಶವನ್ನೇ ಒಡೆಯುವ  ಸದ್ದಿಲ್ಲದೇ,ಎಡೆಯಿಲ್ಲದೆ ಬೆಳೆಯುತ್ತಿದೆ. ಇದು ಇಲ್ಲಿಗೆ ಕೊನೆಗೊಳ್ಳಲಿ ಎಂದು ಆಶಿಸೋಣ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರಿಗೆ ಧಿಕ್ಕಾರವಿರಲಿ. ಬನ್ನಿ ಒಂದಾಗಿ ಬಾಳುವ ಪ್ರತಿಜ್ಞೆ ಮಾಡೋಣ. ಆಮೂಲಕ ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿಸೋಣ…… ಬನ್ನಿ ಬದಲಾಗೋಣ , ಬದಲಾಯಿಸೋಣ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Trending, ಪುರವಣಿಗಳು Tagged With: ಆರ್ಟಿಕಲ್ 370, ಕಟ್ಟುಮಸ್ತಾದ ದೇಹ, ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶ, ಧೀರೋದಾತ್ತ, ಬೆಂಗಳೂರು ಗಲಭೆ, ಭಾರತದ ಭಾಗವಾದ ಕಾಶ್ಮೀರ, ಯುದ್ಧಕ್ಕೆ ಸೈನ್ಯವನ್ನು ಸಜ್ಜಾಗಿರಿಸುವ ಕೆಲಸ, ರಾಮಮಂದಿರ, ರಾಷ್ಟ್ರ ಧ್ವಜದ ಪುಟ್ಟ ಸ್ಟಿಕ್ಕರ್, ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲ, ವೀರಪಾಂಡ್ಯ ಕಟ್ಟಬೊಮ್ಮನ್, ಸ್ವಾತಂತ್ರ್ಯ ವೀರ, ಹಿಂದೂಗಳು ಅವರ ಹಕ್ಕಾದ

Explore More:

About Harshahegde Kondadakuli

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...