ಹಳಿಯಾಳ :- ಹಳಿಯಾಳದ ಪುರಸಭೆಯಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಕಾಂತ ಹೂಲಿಯವರು ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಹಳಿಯಾಳ ಪಟ್ಟಣದ ಹಿರಿಯ ಚೇತನರಾಗಿದ್ದ ಅವರು ತಮ್ಮ 73 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ದುರ್ದೈವ ಎಂದರೇ ಕಳೆದ 2 ತಿಂಗಳ ಹಿಂದೆಯಷ್ಟೇ ಅವರ ಧರ್ಮಪತ್ನಿದ್ರಾಕ್ಷಾಯಿಣಿ ಅನಾರೋಗ್ಯದಿಂದ ನಿಧನರಾಗಿದ್ದರು ಎಂಬುದೇ ನೋವಿನ ಸಂಗತಿಯಾಗಿದೆ.

ಹೂಲಿ ಅವರು ಹಳಿಯಾಳದ ಚೆನ್ನಬಸವೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕ ನಿರ್ದೇಶಕರು, ರೈತರ ಸೇವಾ ಸಹಕಾರಿ ಸಂಘ, ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಹಳಿಯಾಳ ಮಹಾಗಣಪತಿ ದೇವಸ್ಥಾನ, ಪೇಟೆ ಬಸವೇಶ್ವರ ದೇವಸ್ಥಾನದ ಟ್ರಸ್ಟ್ ಕಮೀಟಿ ಹಿರಿಯ ಸದಸ್ಯರಾಗಿದ್ದ , ಶ್ರೀಕ್ಷೇತ್ರ ಉಳವಿಗೆ ಪಾದಯಾತ್ರೆ ಆರಂಭಿಸಿದ ಆಧ್ಯಾತ್ಮಿಕ ಚಿಂತಕರು.
ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿ ಸದಾ ಚಟುವಟಿಕೆಯಿಂದ ಇದ್ದು ಎಲ್ಲರಿಗೂ ಮಾರ್ಗದರ್ಶನ ನೀಡಿದ ಮಹಾನ್ ಚೇತನವಾಗಿದ್ದ ಅವರ ಅಗಲಿಕೆಗೆ ಶಾಕಸ ಆರ್ ವಿ ದೇಶಪಾಂಡೆ, ವಿಪ ಸದಸ್ಯ ಎಸ್ ಎಲ್ ಘೋಟ್ನೇಕರ, ಮಾಜಿ ಶಾಸಕ ಸುನೀಲ್ ಹೆಗಡೆ, ವಿಡಿ ಹೆಗಡೆ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು ಹೂಲಿ ಅವರ ಕುಟುಂಬಕ್ಕೆ ಅವರ ಹಿತೈಷಿಗಳಿಗೆ, ಸ್ನೇಹಿತರಿಗೆ, ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಹಾಗೂ ಶ್ರೀಕಾಂತ ಹೂಲಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದೂ ಪ್ರಾರ್ಥಿಸಿದ್ದಾರೆ.

Leave a Comment