ಹೊನ್ನಾವರ ತಾಲೂಕಿನ ರಾಮತೀರ್ಥ ಕೆರೆ ಅಭಿವೃದ್ದಿಗೆ 20.40ಲಕ್ಷ ವೆಚ್ಚದ ಅನುದಾನ ಬಿಡುಗಡೆಯಾಗಿದ್ದು ಗುದ್ದಲಿ ಪೂಜೆ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ನೇತ್ರತ್ವದಲ್ಲಿ ನೇರವೇರಿಸಿದರು. ಸ್ಥಳಿಯರು, ಹಾಗೂ ದೇವಾಲಯದ ಪುರೋಹಿತರ ಮನವಿ ಮೇರೆಗೆ ಮಳೆಗಾಲದಲ್ಲಿ ಕುಸಿಯುವ ಭೀತಿಯ ಹಿನ್ನಲೆ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಮುಂದೆ ಮತ್ತೆ ೩೫ ಲಕ್ಷ ಅನುದಾನ ಬಿಡುಗಡೆಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದು. ಭವಿಷ್ಯದಲ್ಲಿ ಪ್ರವಾಸಿ ಕೇಂದ್ರವಾಗಿ ನಿರ್ಮಿಸಲು ನೀಲಿನಕ್ಷೆ ಸಿದ್ದತೆಯಲ್ಲಿದ್ದು ೧ ಕೋಟಿಗೂ ಅಧಿಕ ಮೊತ್ತದ ಅನುದಾನ ತಂದು ಪ್ರಸಿದ್ದ ಪ್ರವಾಸಿ ಧಾರ್ಮಿಕ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಪಟ್ಟಣ ಪಂಚಾಯತ ಸದಸ್ಯ ನಾಗಾರಾಜ ಭಟ್, ವಿಜಯ ಕಾಮತ್, ಮಹೇಶ ಮೇಸ್ತ, ಸುಬ್ರಾಯ ಗೌಡ,ಶ್ರೀಪಾದ ನಾಯ್ಕ, ಸುಜಾತ ಮೇಸ್ತ, ನಾಗರತ್ನ ಕೋನೇರಿ, ಸುರೇಶ ಶೆಟ್ಟಿ , ಟಿ.ಎಸ್.ಹೆಗಡೆ, ಎಂ.ಎಸ್.ಹೆಗಡೆ ಕಣ್ಣಿ,ರಘು ಪೈ ದತ್ತಾತ್ರೇಯ ಮೇಸ್ತ, ಸುರೇಶ ಶೇಟ್, ಯೋಗೀಶ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.

Leave a Comment