ಯಲ್ಲಾಪುರ: ಯಾವದೇ ವಿಚಾರವನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೇ, ಒಂದು ತಪಸ್ಸಿನಂತೆ ಅಧ್ಯಯನದಲ್ಲಿ ತೊಡಗಿಕೊಂಡು ಆಯ್ ಎ ಎಸ್ ಪರೀಕ್ಷೆ ಪಾಸು ಮಾಡುವದು ಒಂದು ಯಜ್ಞದಂತೆ ಸರಿ.ಹೀಗೆ ಪಡೆದ ಯಶಸ್ಸನ್ನು ತಾನೇನೋ ಸಾಧನೆ ಮಾಡಿದ್ದೇನೆ ಎಂಬಂತೆ ತಲೆಗೇರಿಸಿಕೊಂಡರೆ ಅವರ ಬೆಳವಣಿಗೆ ಅಲ್ಲಿಯೇ ಕುಂಠಿತವಾಘುತ್ತದೆ.ಆದ್ದರಿಂದ ಆ ರೀತಿಯ ಭಾವನೆ ಸಾಧಕರಲ್ಲಿ ಬರಬಾರದು ಎಂದು ತಹಶೀಲ್ದಾರ ಗಣಪತಿ ಶಾಸ್ತ್ರೀ ಹೇಳಿದರು.

ಅವರು ರವಿವಾರ ಸಂಜೆ ಪಟ್ಟಣದ ತಿಲಕ ಚೌಕ ಗಜಾನನ ಸಮಿತಿ ಸಭಾಭವನದಲ್ಲಿ ಲಯನ್ಸ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಯುಪಿಎಸ್ಸಿ ಮತ್ತು ಎಸ್ಎಸ್ಎಲ್ಸಿ ಯಲ್ಲಿ ಸಾಧನೆ ಗೈದವರನ್ನು ಸನ್ಮಾನಿಸಿ ಮಾತನಾಡಿ ಭ್ರಷ್ಟಾಚಾರ ನಿರ್ಮೂಲನೆ ಒಬ್ಬ ಅಧಿಕಾರಿಯಿಂದ ಮಾತ್ರ ಸಾಧ್ಯವಾಗುವಂತಹ ಪ್ರಕ್ರಿಯೆ ಅಲ್ಲ ಅದು ಜನಾಂದೋಲನವಾಗಬೇಕು ಅದಕ್ಕೆ ಹೆಚ್ಚು ಹೆಚ್ಚು ಯುವಜನರು ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸು ಮಾಡಿ ಉನ್ನತ ಅಧಿಕಾರಿಗಳಾಗಿ ಸಾಮಾನ್ಯ ಜನರಿಗೆ ಸ್ಪಂದಿಸುವಂತಾದರೆ ಭ್ರಷ್ಟಾಚಾರ ತನ್ನಿಂದ ತಾನೆ ತೊಲಗುತ್ತದೆ ಎಂದರು.ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾದನೆಗೈದ ವೆಂಕಟರಮಣ ಕವಡೀಕೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ ಉಳ್ಳವರಿಗೆ ಮಾತ್ರ ಯುಪಿಎಸ್ಸಿ ಪರೀಕ್ಷೆಯಲ್ಲ ಎಷ್ಟೇ ಬಡತನದ ಹಿನ್ನಲೇ ಏನೇ ಇದ್ದರೂ ಕೇವಲ ಪುಸ್ತಕದ ಹುಳುವಾಗದೇ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ,ಸಾಮಾಜಿಕ ಆಗುಹೋಗುಗಳ ಕುರಿತು ಹಾಗೂ ಸತತ ಅಧ್ಯಯನದಿಂದ ಪರೀಕ್ಷೇಯನ್ನು ಸಮರ್ಥವಾಗಿ ಎದುರಿಸಿ ಪಾಸಗಬಹುದು ಪರೀಕ್ಷೇಯೂ ಅಷ್ಟೇ ಪಾರದರ್ಶಕವಾಗಿ ನಡೆಯುತ್ತದೆ. ಆದರೆ ಇದು ಒಮ್ಮಲೇ ಧಕ್ಕುವ ಯಶಸ್ಸು ಖಂಡಿತ ಅಲ್ಲ ತಾಳ್ಮೆಯಿಂದ ಪ್ರಯತ್ನಿಸಬೇಕು ಎಂದರು.ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ತಿಲಕ ಚೌಕ ಗಜಾನನ ಸಮಿತಿ ಅಧ್ಯಕ್ಷ ಉಲ್ಲಾಸ ಮಹಾಲೆ, ಎಸ್ ಎಸ್ ಎಲ್ ಸಿ ಯಲ್ಲಿ ಅಧಿಕ ಅಂಕಗಳಿಸಿದ ಪೂರ್ವಿ ಹೆಗಡೆ ,ತೇಜಸ್ ಭಟ್ಟ,ಸ್ನೇಹಾ ಬೊಳಗುಡ್ಡೆ .ಲಯನ್ ಕ್ಲಬ್ ಅಧ್ಯಕ್ಷ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಯನ್ ಶಾಂತರಾಮ ಹೆಗಡೆ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಲಯನ್ ಎಸ್ ಎಲ್ ಭmನ್ನಿರ್ವಹಿಸಿದರು. ಖಜಾಂಚಿ ಮಂಜುನಾಥ ನಾಯ್ಕ ವಂದಿಸಿದರು.
ಸದಸ್ಯರಾದ ನಾಗರಾಜ ನಾಯ್ಕ, ಸುರೇಶ ಬೋರಕರ್,ಶ್ರೀಧರ ಭಟ್ಟ ಮುಂತಾದವರು ಉಪಸ್ಥಿತರಿದ್ದರು.
Leave a Comment