ಹೊನ್ನಾವರ ಪಟ್ಟಣದ ಬಜಾರ ರಸ್ತೆಯಲ್ಲಿರುವ ಸುಭಾಷ್ ಇವರ ಮಾಲೀಕತ್ವದ ಪೋಟೊ ಹಾಗೂ ವಿಡಿಗ್ರಾಫಿ ಸ್ಟುಡಿಯೋದಲ್ಲಿ ಮಂಗಳವಾರ ನಸುಕಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಮೂರು ಅಂಗಡಿಗೂ ವ್ಯಾಪಿಸಿದೆ. ಎರಡನೇ ಅಂತಸ್ಥಿತ ಮಳಿಗೆ ಆಗಿರುದರಿಂದ ಮೇಲ್ಚಾವಣೆಯ ಹಂಚುಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ ಸಂಪೂರ್ಣ ಅಂಗಡಿ ಹಾಗೂ ಪಕ್ಕದ ಮೂರು ಕೋಣೆಗಳಿಗೆ ಬೆಂಕಿ ತಗುಲಿದೆ. ಕ್ಯಾಮರಾ, ವಿಡಿಯೋ ಕ್ಯಾಮರ, ಎರಡು ಕಂಪ್ಯೂಟರ್, ಲ್ಯಾಪಟಾಪ್ , ಝೊರೆಕ್ಸ ಮಿಷೆನ್, ಸೇರಿದಂತೆ ಸ್ಕೀನ್ ಹಾಗೂ ಸ್ಟುಡಿಯೋಗೆ ಸಂಭದಿಸಿದ ವಸ್ತುಗಳು ಸುಟ್ಟುಕರಕಲಾಗಿದೆ.ಕೂಡಲೇ ಸ್ಥಳಕ್ಕಾಮಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೋಲಿಸರು ಹಾಗೂ ಸ್ಥಳಿಯ ನಿವಾಸಿಗಳು ಬೆಂಕಿಯ ಕೆಳ ಅಂತಸ್ಥಿತ ಅಂಗಡಿಗೆ ತಗಲದಂತೆ ನೋಡಿಕೊಂಡರು, ಸುಮಾರು ೨ ಗಂಟೆಗೂ ಅಧಿಕ ಕಾಲ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ತಹಶೀಲ್ದಾರ ವಿವೇಕ ಶೆಣ್ವಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಸ್ತಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




Leave a Comment