ವೈದ್ಯರು ನೀಡಿದ ಅನಸ್ತೇಶಿಯಾದಿಂದಾಗಿ ಬಾಣಂತಿ ಸಾವಾಗಿದೆಯೆಂದು ಕುಟುಂಬಸ್ಥರ ಆರೋಪ
ಗೀತಾ ಶಿವನಾಥ್ ಬಾನಾವಳಿಕರ್ ( 28) ಸಾವಿಗೀಡಾದ ಮಹಿಳೆ
ಕಾರವಾರ ನಗರದ ಸರ್ವೋದಯ ನಗರದ ನಿವಾಸಿ ಬಾಣಂತಿ ಗೀತಾ
ಎರಡನೇ ಹೆರಿಗೆಯಾಗಿ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದ ಮಹಿಳೆ
ನಾರ್ಮಲ್ ಡೆಲಿವರಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ
ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸ್ಥಿರವಾಗಿದ್ದ ಮಹಿಳೆ
ಇಂದು ಬೆಳಗ್ಗೆ ಅನಸ್ತೇಶಿಯಾ ನೀಡಿ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್ ಮಾಡಲು ಮುಂದಾದಾಗ ಮಹಿಳೆಯ ಸ್ಥಿತಿ ಗಂಭೀರ
ಕೂಡಲೇ ಐಸಿಯುಗೆ ವರ್ಗಾಯಿಸಿ ವೆಂಟಿಲೇಟರ್ನಲ್ಲಿರಿಸಿದ್ದ ವೈದ್ಯರು
ಆಪರೇಷನ್ ಮುಂದಾದಾಗ ಮಹಿಳೆಗೆ ಹೃದಯಾಘಾತವಾಗಿದೆ ಎಂದು ಹೇಳಿದ ಜಿಲ್ಲಾ ಸರ್ಜನ್ ಹೇಳಿಕೆ
ಹೃದಯಾಘಾತದಿಂದಲೇ ಮಹಿಳೆಯ ಸಾವಾಗಿದೆಯೆಂದು ಸಂಜೆ 4 ಗಂಟೆಗೆ ಘೋಷಣೆ ಮಾಡಿದ ವೈದ್ಯರು
ಕುಟುಂಬಸ್ಥರಿಗೆ ಯಾವುದೇ ಸಂಶಯವಿದ್ದರೆ ಪೋಸ್ಟ್ ಮಾರ್ಟಂ ಮಾಡುವುದಾಗಿ ತಿಳಿಸಿದ ವೈದ್ಯರು
ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆಯ ಸಾವಾಗಿದೆಯೆಂದು ಕುಟುಂಬಸ್ಥರ ಆರೋಪ
ಡೆಲಿವರಿ ವಾರ್ಡ್ನಬಳಿ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ..

Leave a Comment