ಹೊನ್ನಾವರ : ಸ್ಥಳೀಯ ಪ್ರತಿಷ್ಠಿತ ನ್ಯೂ ಎಜ್ಯುಕೇಶನ್ ಸೊಸೈಟಿಯ ಕನ್ನಡ ಮಾಧ್ಯಮದ ಮುಖ್ಯಾಧ್ಯಾಪಕರಾಗಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ವೆಂಕಟರಮಣ ಅವಧಾನಿಯವರು ಅಗಸ್ಟ್ 31 ರಂದು ಸೇವಾ ನಿವೃತ್ತರಾಗಿದ್ದು ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿಗಳು ಆತ್ಮೀಯ ಬೀಳ್ಕೊಡುಗೆ ನೀಡಿದರು.
ಕೋವಿಡ್ 19ರ ಕಾರಣದಿಂದಾಗಿ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿ.ಎಸ್. ಅವಧಾನಿಯವರ ಸುದೀರ್ಘ 35 ವರ್ಷಗಳ ಸೇವೆಯನ್ನು ಸ್ಮರಿಸಲಾಯಿತು. ವಿಜ್ನಾನ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಶಾಲೆಗೆ ಸಲ್ಲಿಸಿದ ಅನುಪಮ ಸೇವೆಯನ್ನು , ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ. ಟಿ. ಪೈ, ಹಾಗೂ ಶಿಕ್ಷಕರಾದ ಅಶೋಕ ನಾಯ್ಕ ಸ್ಮರಿಸಿದರು.
ವೆಂಕಟರಮಣ ಅವಧಾನಿಯವರು ಶಾಲೆಯೊಂದಿಗಿನ ತಮ್ಮ ಸಂಬಂಧದವನ್ನು ನೆನೆದು ಭಾವುಕರಾದರು. ನಿಯೋಜಿತ ಮುಖ್ಯಾಧ್ಯಾಪಕರಾದ ಜಯಂತ ನಾಯಕ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ನಾಗರಾಜ ಕಾಮತ, ಕಾರ್ಯದರ್ಶಿಯಾದ ರಘು ಪೈ, ಸದಸ್ಯರಾದ ರಾಮಕೃಷ್ಣ ಶಾನಭಾಗ, ವೆಂಕಟೇಶ್ ಕಾಮತ್, ನಿವೃತ್ತ ಶಿಕ್ಷಕರುಗಳಾದ ಬಿ. ಜೆ. ನಾಯ್ಕ, ಗೀತಾ ಬರ್ಗಿ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಘವೇಂದ್ರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.


Leave a Comment