ಯಲ್ಲಾಪುರ; ಮರಣಾನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಗುವ ಅಮೂಲ್ಯ ಕಣ್ಣುಗಳನ್ನು ದಾನ ಮಾಡಿದರೆ ಎಷ್ಟೋ ಅಂಧರ ಬಾಳಲ್ಲಿ ಬೆಳಕು ಮೂಡಿಸಲು ಸಾಧ್ಯ ಎಂದು ತಾಲೂಕಾ ಆರೋಗ್ಯ ಕೇಂದ್ರದ ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ ಹೇಳಿದರು. ಅವರು ಗುರುವಾರ ತಾಲೂಕಾ ಆರೋಗ್ಯ ಕೇಂದ್ರದ ಆವರಣದಲ್ಲಿ ಅಯೋಜಿಸಿದ್ದ ಅ.25ರಿಂದ ಸೆ 8 ರವರೆಗೆ ನಡೆಯುತ್ತಿರುವ ನೇತ್ರದಾನ ಪಾಕ್ಷಿಕ ದಿನಾಚಾರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಕಣ್ಣು ನಮ್ಮ ದೇಹದ ಪ್ರಮುಖವಾದ ಅಂಗ .ಹುಟ್ಟಿನ ದೋಷದಿಂದಲೋ, ಪೆಟ್ಟಿನಿಂದಲೋ, ಸೊಂಕಿನಿಂದಲೂ ಕಣ್ಣಿನ ಕಪ್ಪುಗುಡ್ಡೆಯು ತನ್ನ ಪಾರದರ್ಶಕತ್ವವನ್ನು ಕಳೆದುಕೊಂಡಾಗ ಕಾರ್ನಿಯಾ ಅಂಧತ್ವ ಉಂಟಾಗುತ್ತದೆ.ಹೀಗಾದಾಗ ಔಷಧಿಯಿಂದಲೂ, ಕನ್ನಡಕದಿಂದಲೋ ಗುಣಪಡಿಸಲು ಆಗಲಿಕ್ಕಿಲ್ಲ, ಹಾಗೆಯೇ ಕೃತಕವಾಗಿ ಕಾರ್ನಿಯಾವನ್ನು ತಯಾರಿಸಲು ಸಾಧ್ಯವಿಲ್ಲ,ಆದರೆ ಮರಣಾನಂತರ ನೇತ್ರದಾನ ಮಾಡುವದರಿಂದ ಕಾರ್ನಿಯಾವನ್ನು ಪಡೆದು ಆಧುನಿಕ ತಂತ್ರಜ್ಞಾನ ಆಧಾರಿತ ಶಸ್ತ್ರಚಿಕಿತ್ಸೆಯಿಂದ ದೃಷ್ಟಿದಾನ ಮಾಡಬಹುದು. ಸಾವಿನ ನಂತರವೂ ನಮ್ಮ ಕಣ್ಣುಗಳನ್ನು ಜೀವಂತವಾಗಿರುಸೋಣ ಎಂದು ನೇತ್ರದಾನ ಹೇಗೆ ಮಾಡಬಹುದು, ಅದರ ಮಹತ್ವ, ಬಗ್ಗೆ ವಿಸ್ತøತ ಮಾಹಿತಿ ತಿಳಿಸಿದರು. ನೇತ್ರಾಧಿಕಾರಿ ಪರವೀನ ಬಾನು ಉಪಸ್ಥಿತರಿದ್ದರು. ಕೋವಿಡ್ ಸಂದರ್ಭವಾದ್ದರಿಂದ ಮಾಸ್ಕ, ಸೈನಿಟೈಸರ್ ಸಾಮಾಜಿಕ ಅಂತರ ಪಾಲಿಸುವ ಮೂಲಕ ಗಾಳಿ ಬೆಳಕು ಇರುವ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲಾಯಿತು.

Leave a Comment