ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬರುವ ಮಂಗಳವಾರ ದಿ. 8 ರಂದು ಜಿಲ್ಲಾ ಕಾಂಗ್ರೆಸ್ ಮಾರ್ಗದರ್ಶನದಂತೆ, ಜಿಲ್ಲೆಯ 14 ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ “ಆರೋಗ್ಯ ಹಸ್ತ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಅಂದೇ ಹೊನ್ನಾವರದಲ್ಲೂ ಕೂಡ “ಆರೋಗ್ಯ ಹಸ್ತ” ಕಾರ್ಯಕ್ರಮ ಆರಂಭಿಸಲಾಗುವುದೆಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀ¥.À ಎನ್. ತೆಂಗೇರಿ ತಿಳಿಸಿದ್ದಾರೆ.

ಅಂದು ಮುಂಜಾನೆ 10:30ಕ್ಕೆ ನಗರದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ನಡೆಯುವ “ಆರೋಗ್ಯ ಹಸ್ತ” ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಚಾಲನೆ ನೀಡಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಹೊಸಬಾಳೆ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಉಪಾದ್ಯಕ್ಷ ರಾಮಾ ಮೊಗೇರ ಉಸ್ತುವಾರಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊನ್ನಾವರದಲ್ಲಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಹೊನ್ನಾವರ ಪಟ್ಟಣ ಪಂಚಾಯತವನ್ನೊಳಗೊಂಡು ಒಟ್ಟೂ 10 ಪಂಚಾಯತಗಳಿವೆ. ಪ್ರತಿ ಪಂಚಾಯತಕ್ಕೂ ತಲಾ ಇಬ್ಬರಂತೆ ‘ಹೆಲ್ತ್ ವಾರಿಯರ್ಸ್’ನ್ನೂ ಈಗಾಗಲೇ ನೇಮಕ ಮಾಡಲಾಗಿದ್ದು, ಕಾರ್ಯಕ್ರಮದ ದಿನದಂದೇ ಅವರಿಗೆ ತಜÐ ವೈದ್ಯರಿಂದ ತರಬೇತಿ ನೀಡಲಾಗುವುದು ಎಂದರು. “ಆರೋಗ್ಯ ಹಸ್ತ” ಕಾರ್ಯಕ್ರಮದ ಶೀಘ್ರ ಅನುಷ್ಠಾನಕ್ಕಾಗಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಮೂರು ವಿಭಾಗಗಳನ್ನು ಮಾಡಲಾಗಿದ್ದು, ಹಳದೀಪುರ ಜಿಲ್ಲಾ ಪಂಚಾಯತ ವಿಭಾಗಕ್ಕೆ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್‍ನ ಅಧ್ಯಕ್ಷ ಶಿವಾನಂದ ಹೆಗಡೆ, ಕಡತೋಕಾ, ಮುಗ್ವಾ ಜಿಲ್ಲಾ ಪಂಚಾಯತ ವಿಭಾಗಕ್ಕೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಕವಲಕ್ಕಿ ಮತ್ತು ಪಟ್ಟಣ ಪಂಚಾಯತ ವಿಭಾಗಕ್ಕೆ, ಕಾಂಗ್ರೆಸ್ ಶಕ್ತಿ ವಿಭಾಗದ ಸಂಚಾಲಕ ಬಾಲಚಂದ್ರ ನಾಯ್ಕ ಮತ್ತು ಮಾಜಿ ಪಟ್ಟಣ ಪಂಚಾಯತ ಚೇರಮನ್ ಸುರೇಶ ಮೇಸ್ತ ಇವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಸೆಲ್‍ಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಸದಸ್ಯರುಗಳು, ಪಕ್ಷದ ಹಿರಿಯ ಮುಖಂಡರುಗಳು ಪಾಲ್ಗೊಳುತ್ತಿದ್ದು, “ಆರೋಗ್ಯ ಹಸ್ತ” ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀ¥.À ಎನ್. ತೆಂಗೇರಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Leave a Comment