ಹೊನ್ನಾವರ; ಶಿಕ್ಷಣ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಸಪ್ಟೆಂಬರ್ ೫ ರಂದು ನೀಡಲಾಗುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನಿಂದ ಸ.ಕಿ.ಪ್ರಾ.ಶಾಲೆ ಮೂಡ್ಕಣಿಯ ಸಹ ಶಿಕ್ಷಕ ಜಿ.ಟಿ.ನಾಯ್ಕ, ಸ.ಹಿ.ಪ್ರಾ.ಶಾಲೆ ಅಪ್ಸರಕೊಂಡದ ಸಹಶಿಕ್ಷಕಿ ಭಾಗಿರಥಿ ಹೆಗಡೆ, ಮಲ್ಲಾಪುರದ ಶ್ರೀ ಗುರುಪ್ರಸಾದ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಎಮ್.ಟಿ. ಗೌಡ ಇವರನ್ನು ಆಯ್ಕೆ ಮಾಡಲಾಗಿದೆ.

ಜಿ.ಟಿ.ನಾಯ್ಕ; ಇವರು ಹೊನ್ನಾವರ ತಾಲೂಕಿನಹಿ.ಪ್ರಾ.ಶಾಲೆ ಬೈಲಗದ್ದೆಯಲ್ಲಿ ವೃತ್ತಿ ಜೀವನ ಆರಂಭಿಸಿ,ಹಿ.ಪ್ರಾಶಾಲೆ ಬಿಳೆಗೋಡು, ಸಿದ್ದಾಪುರ ದಲ್ಲಿ ಸೇವೆ ಸಲ್ಲಿಸಿ ಪ್ರಸುತ್ತ ಕಿ.ಪ್ರಾ.ಶಾಲೆ ಮೂಡ್ಕಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ ಜೀವನದ ೨೧ ವರ್ಷದಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ್ದಾರೆ. ಭಾಗೀರಥಿ ಕೃಷ್ಣ ಹೆಗಡೆ; ಎಂ.ಎ.ಇಂಗ್ಲೀಷ್ ಪದವಿ ಪಡೆದಿರುವ ಇವರು ಕಳೆದ 26 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಣಮಂತೆಯಲ್ಲಿ ಸೇವೆ ಆರಂಭಿಸಿ ೧೩ ವರ್ಷಗಳ ಸೇವೆ ಬಳಿಕ ಕಿರಿಯ ಪ್ರಾಥಮಿಕ ಶಾಲೆ ನಾಕುದಮುಲ್ಲಾದಲ್ಲಿ ೪ ವರ್ಷ ಸೇವೆಯ ನಂತರ ಕಳೆದ ೯ ವರ್ಷದಿಂದ ಹಿ.ಪ್ರಾ.ಶಾಲೆ ಅಪ್ಸರಕೊಂಡದಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಪೌರಾಣಿಕ ನಾಟಕ, ಕೋಲಾಟ, ವಿಜ್ಞಾನ ಪಾಠೋಪಕರಣಗಳಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಜಿಲ್ಲಾ ಮಟ್ಟದವರೆಗೆ ಹಲವು ಬಾರಿ ಪ್ರದರ್ಶಿಸಿ ಪ್ರಶಸ್ತಿ ಪಡೆಯುವಲ್ಲಿ ತರಬೇತಿ ನೀಡಿದ್ದರು. ಇನ್ಸಸೈಯರ್ಡ ಅವಾರ್ಡ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ನಲಿ-ಕಲಿ, ಬಹುವರ್ಗ ಬೋಧನೆ, ವಿಜ್ಞಾನ, ನಲಿ-ಕಲಿ ಇಂಗ್ಲಿಷ್, ಕ್ರೀಯಾ ಸಂಶೋಧನೆ ಇತ್ಯಾದಿ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಯಶ್ವಸಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಎಂ.ಟಿ.ಗೌಡ: ಹೊನ್ನಾವರ ತಾಲೂಕಿನ ಗ್ರಾಮೀಣ ಪ್ರದೇಶವಾದ ಮಲ್ಲಾಪುರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ೩೫ವರ್ಷಗಳ ಸುದೀರ್ಘ ಅವಧಿಯ ಶೈಕ್ಷಣಿಕ ಕೈಂಕರ್ಯವನ್ನು ಪ್ರಾಮಾಣಿಕವಾಗಿ ನಿಭಾಹಿಸುತ್ತಿದ್ದಾರೆ. ಆರಂಭದಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಂತರ ಸಹಶಿಕ್ಷಕರಾಗಿ ಕಳೆದ ೧೦ ವರ್ಷಗಳಿಂದ ಮುಖ್ಯಾಧ್ಯಾಪಕರಾಗಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಸರ್ವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಭೌತಿಕ ವಿಕಾಸಕ್ಕೆ ಪ್ರಥಮ ಆದ್ಯತೆ ನೀಡಿ, ಕ್ರಿಯಾಯೋಜನೆ ರೂಪಿಸಿ ಶಾಲೆಗೆ ಹೊಸ ಆಯಾಮವನ್ನು ತಂದಿದ್ದಾರೆ. ಕ್ರೀಡೆಯಲ್ಲಿ ಅನೇಕ ವರ್ಷಗಳಿಂದ ತಾಲೂಕಾ ಚಾಂಪಿಯನ್ನಾಗಿ ಅನೇಕ ಬಾರಿ ರಾಜ್ಯ ಪ್ರಶಸ್ತಿ ಪಡೆದು ಮೂರುಸಲ ರಾಷ್ಟ್ರ ಮಟ್ಟದವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟದವರೆಗೆ ಭಾಗವಹಿಸಿದ್ದು, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲಾಮಟ್ಟ, ವಿಭಾಗಮಟ್ಟ, ರಾಜ್ಯಮಟ್ಟದವರೆಗೆ ಸತತ ನಾಲ್ಕು ಬಾರಿ ಇವರ ತರಬೇತಿ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಸ್ವತಃ ಕಲಾವಿದರು ಮತ್ತು ಕ್ರೀಡಾಪಟುಗಳಾಗಿರುವ ಇವರು ಉತ್ತಮ ವಾಗ್ಮಿಗಳು ಆಗಿದ್ದಾರೆ.ಇಂದು ಕಾರವಾರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.


Leave a Comment