ಹೊನ್ನಾವರ : ತಾಲೂಕಿನ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಕೇಶಿಯಾ ಪ್ಲೇಂಟೇಶನ ವಿರುದ್ದ ವರ್ಷಗಳಿಂದ ಕಾನೂನು ಬದ್ದವಾಗಿ ಹೋರಾಟ ಮಾಡುತ್ತಿರುವ ಕಡ್ಲೆ ಯುವಕರ ಮನವಿಗೆ ಸ್ಪಂದಿಸಿ ಕರ್ನಾಟಕ ಸರಕಾರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಅನಂತ ಹೆಗಡೆ ಅಶೀಸರ ಅವರು ಅಧಿಕಾರಿಗಳೊಂದಿಗೆ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕರಿಕಾನಮ್ಮ ಬೆಟ್ಟ ಮತ್ತು ಗ್ರಾಮದ ಹಲವು ಅಕೇಶಿಯಾ ಪ್ಲೇಂಟೇಶನ್ ಇರುವ ಕಡೆ ಸ್ಥಳ ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ ಸಬಾಭವನದಲ್ಲಿ ಹಮ್ಮಿಕೊಂಡ *ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಅಶೀಸರ ಅವರು ಮಾತನಾಡಿ ಪ್ರತಿ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ , ಮತ್ತು ಗ್ರಾಮ ಪಂಚಾಯತಗಳಲ್ಲಿ ಜೀವ ವೈವಿಧ್ಯ ಸಮಿತಿಯನ್ನ ರಚಿಸಲಾಗಿದ್ದು, ಗ್ರಾಮೀಣ ಮಟ್ಟದ ಬೆಟ್ಟಗಳಲ್ಲಿರುವಂತ ವಿವಿದ ಜಾತಿಯ ಸಸ್ಯಗಳ ಬಗ್ಗೆ , ಮೊದಲು ಯಾವ ಯಾವ ಜಾತಿಯ ವಿಶೇಷ ಸಸ್ಯಗಳಿದ್ದವು , ಈಗ ಯಾವುದೆಲ್ಲ ಅಳಿದು ಹೋಗಿವೆ ಅನ್ನುವುದರ ಬಗ್ಗೆ , ಪ್ರಾಣಿ ಪಕ್ಷಿಗಳ ಬಗ್ಗೆ , ಗೋ ಸಂತತಿಯ ಬಗ್ಗೆ , ನಾಟಿ ವೈಧ್ಯರ ಬಗ್ಗೆ, ಅಲ್ಲದೆ ಮುಖ್ಯವಾಗಿ ವಿವಿಧ ಉದ್ಯೋಗದಲ್ಲಿ ತೊಡಗಿರುವವರ ಮಾಹಿತಿಯನ್ನ ಜೀವ ವೈವಿಧ್ಯ ಸಮಿತಿಯಲ್ಲ ದಾಖಲಿಸ ಬೇಕಾಗಿದೆ ಎಂದರು. ನಾವು ನಮ್ಮ ವೈಕ್ತಿಕ ಸಂಪತ್ತನ್ನ ರಕ್ಷಿಸಿಕೊಳ್ಳುವಲ್ಲಿ ಹೇಗೆ ಶ್ರಮ ವಹಿಸುತ್ತೆವೆಯೋ ಹಾಗೆ ನಮ್ಮ ಗ್ರಾಮದ ಪರಿಸರವನ್ನ ಪ್ರಕೃತಿಯನ್ನ ಉಳಿಸಿಕೊಳ್ಳುವಲ್ಲಿ ಅಷ್ಟೇ ಕಾಳಜಿ ವಹಿಸಬೇಕು ಎಂದರು.
ಕರಿಕಾನಮ್ಮ ಬೆಟ್ಟವನ್ನ ಪಾರಂಪರಿಕ ತಾಣ ಎಂದು ಈ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳ ಬೇಕು ಅಲ್ಲದೆ ಕಡ್ಲೆ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನ ಊರ ದೇವರ ಕಾಡು ಎನ್ನುವ ಹೆಸರಿನಡಿಯಲ್ಲಿ ಜೀವವೈವಿಧ್ಯ ಗಿಡಗಳನ್ನ ನೆಟ್ಟು ಸಂರಕ್ಷಿಸಬೇಕು ಅಲ್ಲದೆ 2018 ರ ಗ್ರಾಮ ಪಂಚಾಯತ ಸಾರ್ವಜನಿಕ ಸಭೆಯಲ್ಲಿ ಯಾವುದೇ ಕಾರಣಕ್ಕೂ ಅಕೇಶಿಯಾ ಗಿಡಗಳನ್ನ ನಾಟಿ ಮಾಡಬಾರದು ಎಂದು ಠರಾವ್ ಮಾಡಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ನಂತರ ನಾಟಿ ಮಾಡಿದ ಅಕೇಶಿಯಾ ಗಿಡಗಳನ್ನ ತೆಗೆಸಿ, ಬೇರೆ ಹಣ್ಣು ಹಂಪಲ ಗಿಡಗಳನ್ನ , ಬೇಳೆಸುವಲ್ಲಿ ಅರಣ್ಯ ಇಲಾಖೆಯವರು ಸಹಕರಿಸಬೇಕು ಎಂದರು.
ಸದಾನಂದ ಭಟ್ಟ ಮಾತನಾಡಿ ಕಡ್ಲೆಗ್ರಾಮದ ವ್ಯಾಪ್ತಿಯಲ್ಲಿರುವ ಅಕೇಶಿಯಾ ಗಿಡಗಳನ್ನ ಕಟಾವು ಮಾಡಿ ಜೀವ ವೈವಿಧ್ಯ ಸಸ್ಯ ಗಳನ್ನ ಮುಂದಿನ ದಿನಗಳಲ್ಲಿ ನಾಟಿ ಮಾಡಿಕೊಡುತ್ತೆವೆಂಬ ಲಿಖಿತ ಭರವಸೆಯನ್ನ ಅರಣ್ಯ ಅಧಿಕಾರಿಗಳು ನೀಡಬೇಕು ಎಂದರು.
ನ್ಯಾಯವಾದಿ ನಾಗರಾಜ ದೇಶ ಬಂಡಾರಿ ಮಾತನಾಡಿ ನಾವು ಊರಿನ ಯವಕರು ಅಕೇಶಿಯಾ ಪ್ಲೆಂಟೇಶನ್ ವಿರುದ್ದ ವರ್ಷಗಳಿಂದ ನಮ್ಮ ಊರಲ್ಲಿ ಅಕೆಶಿಯಾ ಪ್ಲೇಂಟೆಶನ್ ತೆರವು ಗೊಳಿಸಬೇಕು ಇದರಿಂದ ಮೇವಿಲ್ಲದೆ ಕಾಡು ಪ್ರಾಣಿಗಳ ಹಾವಳಿ ನಮ್ಮ ಕೃಷಿ ಜಮೀನಿನಲ್ಲಿ ಜಾಸ್ತಿ ಆಗುತ್ತಿದೆ ,ಅಂತರ್ಜಲ ಕುಸಿತವಾಗುತ್ತಿದೆ ಎಂದು ಹೊರಾಟ ಮಾಡುತ್ತಾ ಬಂದಿದ್ದೆವೆ ಅರಣ್ಯ ಇಲಾಖೆಯವರು ನ್ಯಾಯ ಒದಗಿಸಿ ಕೊಡಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗಣಪತಿ ಕೆ ಮಾತನಾಡಿ , ಹಿಂದೆ ಜನಸಾಮಾನ್ಯರಿಗೆ ಉರುವಲ ಕಟ್ಟಿಗೆ ಅವಶ್ಯಕತೆ ತೀರಾ ಇರುವಾಗ ಅಕೇಶಿಯಾ ಮೊರೆ ಹೋಗಲಾಗಿತ್ತು ಈಗ ಬೇಡಿಕೆ ಕಡಿಮೆ ಆಗಿದೆ ಅಲ್ಲದೆ ಅತಿಕ್ರಮಣವನ್ನ ತಪ್ಪಸುವ ಸಲುವಾಗಿ ಅಕೇಶಿಯಾ ನೆಡಲಾಗುತ್ತಿತ್ತು ಈಗ ಅಕೇಶಿಯಾ ನಡುತೋಪಿನಲ್ಲಿ ಹಣ್ಣು ಹಂಪಲು ಗಿಡಗಳನ್ನ ಹಾಕುತ್ತಿದ್ದೇವೆ , ಈ ಗ್ರಾಮಸ್ಥರು ಯಾವುದೆ ಯಾವುದೆ ಲಾಭದಾಯಕ ಬೆಳೆಯ ಬೇಡಿಕೆಯಿಡದೆ ಜೀವ ವೈವಿದ್ಯ ಕಾಡನ್ನ ಉಳಿಸುವ ಮತ್ತು ಬೆಳೆಸುವ ಪ್ರಯತ್ನಕ್ಕೆ ಮುಂದಾಗಿರುವುದು ಸಂತಸದ ವಿಷಯ ಎಂದರು.


ಪರಿಸರವಾದಿ ಶ್ರೀಧರ ಭಟ್ಟ ಮಾತನಾಡಿ ಅರಣ್ಯ ಇಲಾಖೆಯವರು ರೈತರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು .
ಕಿಸಾನ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ ಆರ್ ಹೆಗಡೆ ಮಾತನಾಡಿ ಹೊನ್ನಾವರ ರಾಮತೀರ್ಥ ಅರಸಾಮಿ ಕೆರೆ ಅಭಿವೃದ್ದಿ ಪಡಿಸುವಲ್ಲಿ ಅರಣ್ಯ ಇಲಾಖೆ ತ್ವರಿತ ಕ್ರಮ ತೆಗೆದು ಕೊಳ್ಳಬೇಕು ಎಂದರು.
ಕಾರ್ಯಕ್ರದಲ್ಲಿ ರೈತರಿಂದ ಅರಣ್ಯ ಇಲಾಖೆ ಮತ್ತು ಜೀವವೈವಿಧ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಗಣಪತಿ ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ,ಕೆ ಸಿ ಬೊರಯ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ಶರತ್ ಕೆ ವಲಯ ಅರಣ್ಅಧಿಕಾರಿ,ಜಿ ಎಲ್ ಮಾಯ್ಕ ವ್ಯವಸ್ಥಾಪಕರು ತಾ ಪಂ ಹೊನ್ನಾವರ,ಮಹೇಶ ನಾಯ್ಕ ಆಡಳಿತ ಅಧಿಕಾರಿಗಳು ಕಡ್ಲೆ,ವನಮಾಲಾ ಮಂಜುನಾಥ ಮಾಯ್ಕ ಪಿ ಡಿ ಒ ಕಡ್ಲೆ , ಜೀವ ವೈವಿಧ್ಯ ನಿರ್ವಾಹಣಾ ಸಮೀತಿಯ ಪದಾದಿಕಾರಿಗಳಾದ ಶ್ರೀಮತಿ ಉರ್ಮಿಳಾ ರಾಜು ಶೇಟ್, ಎಂ ಜಿ ಹೆಗಡೆ ಕಡ್ಲೆರೂಪಾ ಜನಾರ್ಧನ ಪಟಗಾರ, ಸುಮನಾ ಹೆಗಡೆ, ಕನ್ನೆ ನಾರಾಯಣ ಮುಕ್ರಿ , ಗೊವಿಂದ ನಾರಾಯಣ ಗೌಡ, ಹಾಗೂ ಕಡ್ಲೆ ಗ್ರಾಮ ಪಂಚಾಯತ ಮಾಜಿ ಆದ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಮಹಾಬಲೇಶ್ವರ ಮಡಿವಾಳ , ರವಿ ಹೆಗಡೆ, ಮತ್ತು ಊರ ಪರ ಊರಿನ ರೈತರು ಉಪಸ್ಥಿತರಿದ್ದರು.





Leave a Comment