ಹೊನ್ನಾವರ – ಹೊಸಪಟ್ಟಣದ ಚಿಕಣಿಮೂಲೆಯಲ್ಲಿ ಜಮೀನಿನ ಸಾಗುವಳಿ ವಿಚಾರದಲ್ಲಿ ನಡೆದ ಜಗಳದಲ್ಲಿ, ಆರು ಮಂದಿ ಆರೋಪಿಗಳು ತೋಟದಲ್ಲಿನ ಅಡಿಕೆ ಗಿಡಗಳನ್ನು ಕಿತ್ತು ಜಮೀನು ಸಾಗುವಳಿ ಮಾಡುತ್ತಿದ್ದ ದಂಪತಿಗಳ ಮೇಲೆ ದೈಹಿಕ ಹಲ್ಲೆಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕಣಿ ಮೂಲೆಯವರೇ ಆದ ಮೋಹನ ಲಕ್ಷ್ಮಣ ಮೇಸ್ತ ಇವರು ಸಾಗುವಳಿ ಮಾಡುತ್ತಿದ್ದ ಜಮೀನಿನ ಬಗ್ಗೆ ಹಿಂದಿನಿಂದಲೂ ತಕರಾರು ಮಾಡುತ್ತಾ ಬಂದಿದ್ದ ಅದೇ ಊರಿನವರಾದ ಗಣಪತಿ ನಾಗಪ್ಪ ಮೇಸ್ತ, ಗಣೇಶ ಪಾಂಡು ಮೇಸ್ತ, ಆನಂದ ಪಾಂಡು ಮೇಸ್ತ, ಭೀಮ ನಾಗಪ್ಪ ಮೇಸ್ತ, ಸಂತೋಷ ಗಣಪತಿ ಮೇಸ್ತ, ಕಲ್ಪನಾ ಸಂತೋಷ ಮೇಸ್ತ ಎಂಬವರು ಮೋಹನ ಮೇಸ್ತ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಅವರು ಬೆಳೆಸಿದ್ದ ಅಡಿಕೆ ಬಾಳೆ ಸಸಿಗಳನ್ನು ಹಾರೆ ಗುದ್ದಲಿಗಳಿಂದ ಕಿತ್ತು ಹಾಕಲು ಮುಂದಾದಾಗ ತಡೆಯಲು ಬಂದ ಮೋಹನ ಮೇಸ್ತ ಮತ್ತು ಅವರ ಪತ್ನಿ ಗೀತಾ ಮೋಹನ ಮೇಸ್ತ ಮೇಲೆ ಆರೋಪಿಗಳು ಹಲ್ಲೆ ಮಾಡಿ, ಪೊಲೀಸರಿಗೆ ದೂರು ನೀಡಲು ಮುಂದಾದರೆ ಅತ್ಯಾಚಾರದ ಕೇಸು ಹಾಕಿಸುತ್ತೇವೆ ಎಂದು ಬೇದರಿಕೆ ಹಾಕಿದ್ದಾರೆಂದು ದೂರಿದ್ದಾರೆ.
ಮಂಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪಿ.ಎಸ್.ಐ ಪರಮಾನಂದ ಕೊಣ್ಣೂರ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.


Leave a Comment