ಕಾರವಾರ: ಉತ್ತರ ಕನ್ನಡ 1978 ರ ಪೂರ್ವ ಅರಣ್ಯ ಭೂಮಿ ಮಂಜೂರಿಗೆ ಕೇಂದ್ರ ಸರಕಾರದಿಂದ 2513 ಅರಣ್ಯ ವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಸರಕಾರ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಹೇಳಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಭೇಟಿಯಾಗಿ 1978 ರ ಪೂರ್ವ ಭೂಮಿ ಹಕ್ಕು ಪತ್ರ ನೀಡಲು ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅರಣ್ಯ ವಾಸಿಗಳಿಗೆ ಹಕ್ಕು ಪತ್ರವನ್ನು ನೀಡುವ ದಿಶೆಯಲ್ಲಿ ಜಿಲ್ಲಾಡಳಿತವು ಕಾರ್ಯಪ್ರವರ್ತರಾಗಿದೆ ಎಂದು ತಿಳಿಸಿದರು. ಕೇಂದ್ರ ಸರಕಾರದ ಆದೇಶದಂತೆ 2513 ಅರಣ್ಯ ಅತಿಕ್ರಮಣದಾರರ ಕುಟುಂಬಗಳಿಗೆ 3235 ಎಕರೆ ಪ್ರದೇಶ ಮಂಜೂರಿಗೆ 1996 ರಲ್ಲಿ ನಿರ್ದೇಶನ ನೀಡಿದೆ ಎಂದರು.

Leave a Comment