ಹೊನ್ನಾವರ: ಬಂದರು ಅಳಿವೆ ಪ್ರದೇಶದಲ್ಲಿ ಯಾಂತ್ರಿಕ ದೋಣಿ ದುರಂತ ಸಂಭವಿಸಿದೆ. ದುರಂತದಲ್ಲಿ ಬೋಟಿನಲ್ಲಿದ್ದ 25 ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ.
ಫೆಲಿಕ್ಸ್ ಲೂಫಿಸ್ ಎಂಬುವವರಿಗೆ ಸೇರಿದ ಸೆಂಟ್ ಅಂತೋನಿ ಹೆಸರಿನ ಬೋಟ್ ದುರಂತಕ್ಕೀಡಾಗಿದೆ.ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಬೋಟ್ ಅಳಿವೆ ಪ್ರದೇಶದಲ್ಲಿ ತುಂಬಿದ ಹೂಳಿಗೆ ಸಿಲುಕಿದ್ದರಿಂದ ತಳಭಾಗದಲ್ಲಿ ಡ್ಯಾಮೇಜ್ ಉಂಟಾಗಿದೆ. ಬಳಿಕ ನೀರು ತುಂಬಿದ್ದರಿಂದ ಮುಳುಗಿತು. ಈ ವೇಳೆ ಮೂವತ್ತಕ್ಕೂ ಹೆಚ್ಚು ಬೋಟಿನ ಮೀನುಗಾರರರು ಕಾರ್ಯಾಚರಣೆ ಮಾಡಿದರಾದರೂ ಪ್ರಯೋಜನ ಆಗಿಲ್ಲ.
ಹೊನ್ನಾವರ ಸಮುದ್ರದ ಅಳಿವೆಯಲ್ಲಿ ಕಳೆದ ದಶಕಗಳಿಂದ ಹೂಳು ತುಂಬಿದ್ದರಿಂದಲೇ ಪದೇ ಪದೇ ಬೋಟ್ ಅನಾಹುತ ಸಂಭವಿಸುತ್ತಿದೆ. ಆದರೆ ಸರ್ಕಾರ ಸ್ಥಳೀಯ ಮೀನುಗಾರರ ಸಮಸ್ಯೆಗೆ ಸ್ಪಂದಿಸಿಲ್ಲ.
Leave a Comment