• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಖಾಯಿಲೆಗಿಂತ ಜೀವ ಅಮೂಲ್ಯ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಜನರು ಸ್ವಯಂಪ್ರೇರಿತರಾಗಿ ಮುಂದೆಬರಬೇಕು – ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್

September 10, 2020 by Vishwanath Shetty Leave a Comment

ಕೊರೊನಾ ಪರೀಕ್ಷೆ, ಚಿಕಿತ್ಸೆ ಎಲ್ಲವೂ ಉಚಿತವಾಗಿರುವಾಗ ಅನಾರೋಗ್ಯ ಕಾಣಿಸಿಕೊಂಡವರು ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಖಾಯಿಲೆಗಿಂತ ಜೀವ ಅಮೂಲ್ಯವಾದುದು. ಮರಣ ಪ್ರಮಾಣ ಕಡಿಮೆಯಾಗಲು ಜನರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ಬುಧವಾರ ಮದ್ಯಾಹ್ನ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ಕೊರೊನಾ ಸಂಬಂಧಿತ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಹರೀಶ ಕುಮಾರ್ ಜಿಲ್ಲೆಯಲ್ಲಿ ಕೊರೊನಾ ಮಾರಣಾಂತಿಕವಾಗಿ ಬದಲಾಗದಿರಲು ಅಧಿಕಾರಿಗಳ ಶ್ರಮದ ಜೊತೆ ಜನರ ಸಹಕಾರವೂ ಕಾರಣವಾಗಿದೆ. ಆದರೆ ಇತ್ತೀಚೆಗೆ ಕೊರೊನಾ ಒಂದು ಖಾಯಿಲೆಯೇ ಅಲ್ಲ ಅದೊಂದು ಸಾಮಾನ್ಯ ಜ್ವರ ಎನ್ನುವ ನಿರ್ಲಕ್ಷ್ಯ ಜನರಲ್ಲಿ ಮನೆಮಾಡುತ್ತಿದೆ. ಕೊರೊನಾ ಉಸಿರಾಟಕ್ಕೆ ತೊಂದರೆಯುಂಟುಮಾಡುವ ಖಾಯಿಲೆಯಾಗಿದ್ದರಿಂದ ಆರಂಭದಲ್ಲಿ ನಿರ್ಲಕ್ಷಿಸಿ ಖಾಯಿಲೆ ಉಲ್ಬಣಿಸಿದಾಗ ಆಸ್ಪತ್ರೆಗೆ ಬಂದರೆ ಪರಿಸ್ಥಿತಿ ಕೈ ಮೀರುತ್ತದೆ ಎಂದರು.

watermarked IMG 20200909 171655


ಸರ್ಕಾರಿ ಕಛೇರಿಗೆ ಬರುವವರು ಮಾಸ್ಕ್ ಧರಿಸುವುದು ಕಡ್ಡಾಯ
ಆರ್ಥಿಕ ಪುನಶ್ಚೇತನದ ಕಾರಣ ಈ ಹಿಂದೆ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನೂ ತೆಗೆದುಹಾಕಲಾಗಿದೆ. ಜನರು ಮನೆಯಿಂದ ಹೊರಗೆ ಬರದಿದ್ದಾಗ ಕಛೇರಿಯಲ್ಲಿದ್ದ ಅಧಿಕಾರಿಗಳು ಆರೋಗ್ಯವಾಗಿದ್ದರು. ಈಗ ಜನರು ಹೊರಗೆ ಓಡಾಡಲು ಶುರುಮಾಡಿದ್ದಾರೆ. ಆದರೆ ಅಧಿಕಾರಿಗಳು ಕೊರೊನಾ ಸೋಂಕಿತರಾಗಿ ಕ್ವಾರಂಟೈನ್ ಆಗುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವವರು, ಸರ್ಕಾರಿ ಕಛೇರಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಯಾರು ನಿಯಮ ಮೀರುತ್ತಾರೋ ಅಂತವರಿಗೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರೋಗ್ಯದಲ್ಲಿ ದುರ್ಬಲರಾಗಿರುವವರಮೇಲೆ ಕೊರೊನಾ ವಾರಿಯರ್ಸ್ ಕಣ್ಣಿಡಬೇಕು
ಪಟ್ಟಣ ಅಥವಾ ಗ್ರಾಮೀಣ ಪ್ರದೇಶದಲ್ಲಿ ಯಾರು ಆರೋಗ್ಯದ ದೃಷ್ಟಿಯಿಂದ ದುರ್ಬಲರಾಗಿರುತ್ತಾರೋ ಅಂತವರಮೇಲೆ ಆ ಭಾಗದ ಕೊರೊನಾ ವಾರಿಯರ್ಸ್ ಅಂತ ಯಾರಿದ್ದಾರೋ ಅವರು ಗಮನವಿಡಬೇಕು. ಅವರ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಬೇರೆ ಖಾಯಿಲೆಗಳಿಂದ ಬಳಲುತ್ತಿದ್ದವರು ಕೊರೊನಾ ಸೋಂಕಿತರಾಗಿ ಆಸ್ಪತ್ರೆಗೆ ಬರುವ ಮೊದಲೇ ಮರಣಿಸಿದರೆ ಅವರನ್ನು ಕೊರೊನಾ ವಾರಿಯರ್ಸ್ ಗಮನಿಸಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇವಲ ಕೊರೊನಾ ಕಾರಣಕ್ಕಾಗಿ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಶಿಫಾರಸು ಮಾಡುವಂತಿಲ್ಲ
ರೋಗಿ ಎಲ್ಲಿ ತಾನು ಚಿಕಿತ್ಸೆ ಪಡೆಯಬೇಕೆಂದು ಬಯಸುತ್ತಾನೋ ಅಲ್ಲಿಗೆ ಕಳುಹಿಸುವುದು ತಪ್ಪಲ್ಲ. ಆದರೆ ಈಗಾಗಲೇ ಹೊರ ಜಿಲ್ಲೆಗಳಲ್ಲೂ ಕೊರೊನಾ ಸಂಬಂಧಿತ ವಾರ್ಡಗಳಲ್ಲಿ ಬೆಡ್‍ಗಳು ಭರ್ತಿಯಾಗಿರುವ ಹಿನ್ನಲೆಯಲ್ಲಿ. ಕೊರೊನಾ ಸೋಂಕಿತರನ್ನು ಕಳುಹಿಸಬೇಡಿ ಎನ್ನುವ ಸೂಚನೆ ಬಂದಿದೆ. ಕೊರೊನಾಗೆ ಸಂಬಂಧಪಟ್ಟಂತೆ ಉತ್ತರಕನ್ನಡದಲ್ಲಿ ಸಿಗುವ ಚಿಕಿತ್ಸೆಯೇ ಮಂಗಳೂರು ಉಡುಪಿಯಲ್ಲಿಯೂ ಸಿಗುವುದು. ಆದ್ಧರಿಂದ ಕೇವಲ ಕೊರೊನಾ ಕಾರಣಕ್ಕಾಗಿ ಬೇರೆ ಜಿಲ್ಲೆಯ ಆಸ್ಪತ್ರೆಗೆ ಶಿಫಾರಸು ಮಾಡದೇ ಇಲ್ಲಿಯೇ ಉತ್ತಮ ಚಿಕಿತ್ಸೆ ನೀಡಬೇಕು ಎಂದರು.
ಕೊರೊನಾ ನಂಬರ್ ಬಗ್ಗೆ ನಾವು ಚಿಂತೆ ಮಾಡುವುದಿಲ್ಲ. ಅನ್‍ಲಾಕಿಂಗ್ ಪ್ರಕ್ರಿಯೆ ಅನಿವಾರ್ಯವಾಗಿದ್ದು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕೊರೊನಾ ಟೆಸ್ಟ್ ಮಾಡಿಸಕೊಳ್ಳುವುದಕ್ಕೆ ಜನರು ಮುಂದೆ ಬಂದು ಸಾವಿನ ಪ್ರಮಾಣವನ್ನು ತಗ್ಗಿಸುವುದಕ್ಕೆ ಸಹಕಾರ ನೀಡಬೇಕು. ಜನರಲ್ಲಿ ಭಯ ಹುಟ್ಟಿಸುವ ಅಥವಾ ನಿರ್ಲಕ್ಷ್ಯ ಧೊರಣೆ ತಾಳುವಂತೆ ಮಾಡುವ ಸುಳ್ಳುಸುದ್ದಿಗಳನ್ನು ಹಬ್ಬಿಸುವುದನ್ನು ಬಿಟ್ಟು ಎಲ್ಲರೂ ಸಾಮಾಜಿಕ ಬದ್ಧತೆ ತೋರಬೇಕು – ಡಾ.ಹರೀಶ ಕುಮಾರ್, ಜಿಲ್ಲಾಧಿಕಾರಿ ಉತ್ತರಕನ್ನಡ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಉತ್ತರಕನ್ನಡದಲ್ಲಿ ಸಿಗುವ ಚಿಕಿತ್ಸೆಯೇ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು., ಕೊರೊನಾ ಸಂಬಂಧಿತ ಅಧಿಕಾರಿಗಳ ಸಭೆ, ಕೊರೊನಾ ಸೋಂಕಿತರನ್ನು ಕಳುಹಿಸಬೇಡಿ, ಜನರ ಸಹಕಾರ ಅತ್ಯಗತ್ಯ, ತಹಶೀಲ್ದಾರ್ ಕಛೇರಿಯಲ್ಲಿ ನಡೆದ, ಮಂಗಳೂರು ಉಡುಪಿಯಲ್ಲಿಯೂ ಸಿಗುವುದು, ಮರಣ ಪ್ರಮಾಣ ಕಡಿಮೆ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,038 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...