ಕಲೆಯ ಅಸ್ಥಿತ್ವದಲ್ಲಿ ಕಲಾವಿದರಷ್ಟೇ ಪ್ರಾಮುಖ್ಯತೆ ಪ್ರೇಕ್ಷಕರಿಗೂ ಇದೆ. ಕಲಾವಿದರು ತಮ್ಮಲ್ಲಿರುವ ಪ್ರತಿಭೆಯಿಂದ ಕಲೆಯನ್ನು ಉಳಿಸಿ ಬೆಳೆಸುತ್ತಾರೆನ್ನುವುದು ಎಷ್ಟು ನಿಜವೋ ಕಲಾವಿದರನ್ನು ಮೆಚ್ಚಿ ಹರಸುವ ಸಹೃದಯಿ ಪ್ರೇಕ್ಷಕರೂ ಕಲೆಯ ಉಳಿವಿಗೆ ಕಾರಣ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು. ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನದ ಮೂಲಕ ಅದೆಷ್ಟೋ ಪ್ರತಿಭೆಗಳು ನಾಡಿನಾಧ್ಯಂತ ಹೆಸರು ಮಾಡಿದ್ದಾರೆ. ಅಪಾರ ಕಲಾಭಿಮಾನಿಗಳನ್ನೂ ಸಂಪಾಧಿಸಿಕೊಂಡಿದ್ದಾರೆ. ಆದರೆ ಕಳೆದ ಆರು ತಿಂಗಳಿಂದ ಇಡೀ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿರುವ ಕೊರೊನಾ ಹೆಮ್ಮಾರಿಯ ಕಾಟ ಯಕ್ಷಗಾನ ಲೋಕಕ್ಕೂ ಬಾರೀ ಹೊಡೆತವನ್ನೇ ನೀಡಿದೆ.

ರಂಘದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರ ಜೊತೆ ಮುಖಾಮುಖಿಯಾಗುತ್ತಿದ್ದ ಕಲಾವಿದರು ಪ್ರದರ್ಶನವಿಲ್ಲದೇ ಬಸವಳಿದಿದ್ದರು. ಕೊನೆಗೂ ಇದರಿಂದ ಲಕ್ಷಣಗಳು ಗೋಚರವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಆರಂಭಿಸಿದಂತೆ, ಸಿನೆಮಾಗಳನ್ನು ಒ.ಟಿ.ಟಿ ವೇದಿಕೆಗಳಲ್ಲಿ ರಿಲೀಸ್ ಮಾಡಿದಂತೆ ಯಕ್ಷಗಾನ ಪ್ರದರ್ಶನವನ್ನೂ ಆನ್ಲೈನ್ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿದೆ. ತೆಂಕು ಬಡಗು ತಿಟ್ಟಿನ ಖ್ಯಾತ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಅವರು ಕಲಾಧರ ಯಕ್ಷರಂಗ ಬಳಗ, ದಾನಿಗಳು ಹಾಗೂ ಸ್ಥಳಿಯ ಚಾನೆಲ್‍ಗಳ ಸಹಕಾರದಲ್ಲಿ ಇತ್ತೀಚೆಗೆ ಮಲ್ಲಮಾಗಧ ಆಖ್ಯಾನವನ್ನು ಪ್ರದರ್ಶಿಸಿದ್ದರು. ಇದೀಗ ಮತ್ತೊಂದು ಪ್ರಯೋಗಕ್ಕೆ ಅಣಿಯಾಗಿದ್ದು ರಾಜಾ ಉಗ್ರಸೇನ ಪ್ರಸಂಗದ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದ್ದು ಯಕ್ಷರಂಗದಲ್ಲಿ ಹೊಸ ಬೆಳವಣಿಗೆಯಾಗಿ ಕಂಡುಬರುತ್ತಿದೆ.

Leave a Comment