ಗೋಕರ್ಣ: ಮೀನುಗಾರಿಕೆಗಾಗಿ ಜಾರ್ಖಂಡ್ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದು, ಇವರನ್ನು ಇಲ್ಲಿನ ಆರೋಗ್ಯ ಇಲಾಖೆ ತಂಡ ಕೋವಿಡ್ 19, ಮಲೇರಿಯಾ ಪರೀಕ್ಷೆಗೆ ಒಳಪಡಿಸಿ ಗಂಟಲು ದ್ರವ , ರಕ್ತ ಲೇಪನಗಳನ್ನು ಸಂಗ್ರಹಿಸಿದರು. 50ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದು , ಪ್ರತಿ ವರ್ಷ ಹೊರ ರಾಜ್ಯದವರು ಮೀನುಗಾರಿಕೆ ಕೆಲಸಕ್ಕಾಗಿ ಬರುತ್ತಾರೆ. ಲಾಕ್ ಡೌನ ನಂತರ ಇದೇ ಮೊದಲ ಬಾರಿಗೆ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.

ಕಾರ್ಮಿಕರಿಗೆ ತಿಳುವಳಿಕೆ : ಕೊರೊನಾ ರೋಗದ ಬಗೆಗಿನ ಮಾಹಿತಿ ಹಾಗೂ ಕೈಗೊಳ್ಳ ಬೇಕಾದ ಸುರಕ್ಷತಾ ಕ್ರಮಗಳನ್ನು ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ತಿಳಿಸಿದರು. ಅಲ್ಲದೆ ಇತರೆ ರೋಗಗಳಾದ ಮಲೇರಿಯಾ, ಫೈಲೇರಿಯಾ, ಚಿಕನ್ ಗುನ್ಯಾ , ಜಾಂಡೀಸ್ ಬಗ್ಗೆ ಸವಿವರವಾಗಿ ತಿಳಿಸಿ. ರೋಗ ಬರದಂತೆ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮವನ್ನು ವಿವರಿಸಿದರು.
ಪಿ.ಎಸ್. ಐ. ನವೀನ ನಾಯ್ಕ ಮಾತನಾಡಿ ಜನ ಜೀವನ ಸಹಜ ಸ್ಥಿತಿಯತ್ತ ಮರಳಿದ್ದು , ಜನರು ತಮ್ಮ , ತಮ್ಮ ಉದ್ಯೋಗದಲ್ಲಿ ತೊಡಗಿಕೊಳ್ಳಲೇ ಬೇಕು , ಆದರೆ ಸಮಾಜಕ್ಕೆ ಮಾರಕವಾದ ರೋಗಳು ಹಡದಂತೆ ನಾವೇ ಜಾಗೃತವಾಗಿರ ಬೇಕಾಗಿದ್ದು ಇಂದಿನ ತುರ್ತು ಅವಶ್ಯವಿದ್ದು , ಎಲ್ಲರೂ ಸಹಕರಿಸ ಬೇಕು ಎಂದರು. ಇಂತಹ ಗಂಭೀರ ವಿಷಯದಲ್ಲಿ ಅಸಹಕಾರ ತೊರಿದರೆ ತೆಗೆದುಕೊಳ್ಳ ಬಹುದಾದ ಕಾನೂನು ಕ್ರಮದ ಬಗ್ಗೆ ತಿಳಿಸಿ , ಎಚ್ಚರಿಕೆಯನ್ನು ನೀಡಿದರು.
ಮೀನುಗಾರಿಕೆ ಇಲಾಖೆ ನಿರ್ದೇಶಕ ವಸಂತ ಹೆಗಡೆ , ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಮಹಾಂತೇಶ್ ಹೂಗಾರ, ಲಲಿತಾ , ಸೀತಾ ನಾಯ್ಕ, ದೀಪ ಆಗೇರ , ಸ್ಥಳೀಯರಾದ ಮೀನಾಗರರ ಒಕ್ಕೂಟದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟ, ದಾಮೋದರ್ ಮೂಡಂಗಿ, ಈಶ್ವರ ತೊರೆಗಝನಿ, ಸುಧಾಕರ ತಾಂಡೇಲ್ , ಜ್ಞಾನೇಶ್ವರ ತಾಂಡೇಲ್ ಜೊತೆಗಿದ್ದು ಸಹಕರಿಸಿದರು.

Leave a Comment