ಕುಮಟಾ: ತಾಲೂಕಿನ ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವೀಂದ್ರ ಭಟ್ಟ, ಸೂರಿ ಅವರಿಗೆ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಶಿಕ್ಷಕ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.

ಎಂ.ಕಾಂ.ಬಿ.ಪಿ.ಇಡಿ. ಪದವೀಧರರಾಗಿರುವ ರವೀಂದ್ರ ಭಟ್ಟ ಅವರು ಸೃಜನಶೀಲ ಶಿಕ್ಷಕರಾಗಿದ್ದು ಶೈಕ್ಷಣಿಕ, ಸಾಹಿತ್ಯ, ಯೋಗದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, 3000 ಕ್ಕೂ ಅಧಿಕ ಕಾರ್ಯಕ್ರಮ ನಿರೂಪಣೆ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಸಂಪನ್ಮೂಲ ವ್ಯಕ್ತಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ, ಸರ್ಕಾರಿ ಶಾಲೆಯಲ್ಲಿ ಮಾಡಿದ ವಿಶೇಷ ಸಾಧನೆ ಗಮನಿಸಿ ಈ ಪ್ರಶಸ್ತಿಗೆ ನೀಡಲಾಗಿದೆ.
Leave a Comment