ಹೊನ್ನಾವರ – ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ಕೃಷಿ ಯಂತ್ರೋಪಕರಣ ಖರೀದಿಗೆ ರೈತರಿಗೆ ಸಹಾಯಧನ ಒದಗಿಸುವ ಕುರಿತು ಫಲಾನುಭವಿಗಳಾಗಲು ತೋಟಗಾರಿಕಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೈಗಾಡಿ, ಯಂತ್ರಚಾಲಿತ ಗಾಡಿ, ಕಳೆಕತ್ತರಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ಪವರ್ ಸ್ಪ್ರೇಯರ್, ಕಾಲು ಮೆಣಸು ಮತ್ತು ಅಡಿಕೆ ಸುಲಿಯುವ ಯಂತ್ರ ಮತ್ತು ಏಣಿ ಮುಂತಾದವುಗಳನ್ನು ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 40 ರಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ರೈತರು, ಸಣ್ಣ ರೈತ ವರ್ಗಕ್ಕೆ ಶೇಕಡಾ 50ರಷ್ಟು ಸಹಾಯಧನ ತೋಟಗಾರಿಕಾ ಇಲಾಖೆಯಿಂದ ನೀಡಲು ಅವಕಾಶವಿರುತ್ತದೆ. ಪ್ರತಿ ರೈತ ಫಲಾನುಭವಿಗೆ ಗರಿಷ್ಠ ಮಿತಿ 1 ಲಕ್ಷ 25 ಸಾವಿರ ರುಪಾಯಿ ಆಗಿರುತ್ತದೆ. (5 ಸಂಖ್ಯೆಯ ಉಪಕರಣಗಳು ಮಾತ್ರ)
ರೈತರು ಯಂತ್ರಗಳನ್ನು ಖರೀದಿಸುವ ಮೊದಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿ ಹೊನ್ನಾವರ ಇವರಿಂದ ಇಂಡೆಂಟ್ ಪತ್ರವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. 08387-221265
Leave a Comment