ಹೊನ್ನಾವರ: ತಾಲೂಕಿನ ಜಲವಳ್ಳಿ ನಿವಾಸಿ ಕೇಶವ ತಿಮ್ಮಪ್ಪ ನಾಯ್ಕ ಗೋವಾದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ರೋಪ್ ಗೆ ಕೈ ಸಿಲುಕಿಕೊಂಡು ಆಕಸ್ಮಿಕವಾಗಿ ಬಲಗೈ ತುಂಡಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಕಡುಬಡ ಕುಟುಂಬದವರಾಗಿರುವುದರಿಂದ ಕುಟುಂಬವು ಸಂಪೂರ್ಣವಾಗಿ ಇವರ ಮೇಲೆ ಅವಲಂಬಿತವಾಗಿತ್ತು. ಕುಟುಂಬದ ನಿರ್ವಹಣೆ ತೀರ ಕಷ್ಟವಾಗಿರುವುದರಿಂದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರ ಧನವನ್ನು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ವಿಶೇಷ ಪ್ರಯತ್ನ ನಡೆಸಿ ಮಂಜೂರು ಮಾಡಿಸಿ ಆದೇಶ ಪ್ರತಿಯನ್ನು ವಿತರಿಸಿದರು.ಈ ಸಂಧರ್ಭದಲ್ಲಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಜಯಂತ ನಾಯ್ಕ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment