• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬೀಗ ತೆರೆಯದ ಮೀನು ಮಾರುಕಟ್ಟೆ – ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವ ಮಹಿಳೆಯರು

September 17, 2020 by Lakshmikant Gowda Leave a Comment

ಟೆಂಡರ್ ಕರೆದು ಲಕ್ಷ ಲಕ್ಷ ಎಣಿಸುವಲ್ಲಿ ಪಟ್ಟಣ ಪಂಚಾಯತ ಮುಂದೆ.. ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಮಾತ್ರ ಹಿಂದೆ

“ಇಲ್ಲಿ ಕುಳಿತುಕೊಳ್ಳುವುದಕ್ಕೆ ಆಗ್ತಾ ಇಲ್ಲ.. ಮೀನು ಮಾರುಕಟ್ಟೆಯನ್ನು ತೆರೆದಿದ್ದರೆ ಅಲ್ಲಿಯಾದರೂ ಕುಳಿತುಕೊಳ್ತಿದ್ದೆವು. ಅಲ್ಲಿ ಮಳೆ ಬಿಸಿಲಿನಿಂದ ರಕ್ಷಣೆಯಾದರೂ ಸಿಕ್ತಾ ಇತ್ತು ಯಾವಾಗ ಬೀಗ ತೆರೆಯುತ್ತಾರೋ ಗೊತ್ತಿಲ್ಲ” ಎಂದು ತಮ್ಮ ಹತಾಶೆಯನ್ನು ಹೊರ ಹಾಕುತ್ತಿದ್ದಾರೆ ಹೊನ್ನಾವರ ಬಂದರು ಪ್ರದೇಶದ ಮೀನು ವ್ಯಾಪಾರ ಮಾಡುವ ಮಹಿಳೆಯರು.
ಕೊರೊನಾ ಸಂಬಂಧಿತ ಲಾಕ್‍ಡೌನ್ ತೆರವಾದ ನಂತರ ಹಳ್ಳಿಗಳಿಂದ ಜನರು ಸಾವಕಾಶವಾಗಿ ಪೇಟೆಯತ್ತ ಮುಖ ಮಾಡುತ್ತಿದ್ದು ವ್ಯಾಪಾರ ವಹಿವಾಟುಗಳು ನಿಧಾನಕ್ಕೆ ಚಿಗುರುತ್ತಿದೆ. ಇದರ ಜೊತೆಗೆ ಆಳ ಸಮುದ್ರ ಮೀನುಗಾರಿಕೆಯೂ ಆರಂಭವಾಗಿ ತಿಂಗಳೇ ಉರುಳಿದ್ದು ಮೀನಿನ ಖರೀದಿಯೂ ಜೋರಾಗಿಯೇ ನಡೆದಿದೆ. ಆದರೆ ಮೀನುಮಾರುಕಟ್ಟೆ ಇದ್ದರೂ ಮಾರ್ಗಸೂಚಿ ಬಂದಿಲ್ಲ ಎನ್ನುವ ಕಾರಣವೊಡ್ಡಿ ಬೀಗ ಹಾಕಿಟ್ಟಿರುವುದರಿಂದ ಬೀದಿಯಲ್ಲಿ ಕುಳಿತೇ ಅಸಹ್ಯಕರ ವಾತಾವರಣದಲ್ಲಿ ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

watermarked 01 16 hnr


ಮೀನುಮಾರುಕಟ್ಟೆ ಮಳೆ ಬಿಸಿಲಿನಿಂದ ರಕ್ಷಣೆ ಕೊಡುವುದು ಬಿಟ್ಟರೆ ಇಲ್ಲಿನ ಕುಡಿಯುವ ನೀರು ಹಾಗೂ ಬೀದಿ ದೀಪದ ಸಮಸ್ಯೆಯ ಬಗ್ಗೆ ಪದೇ ಪದೇ ದೂರು ಕೇಳಿಬರುತ್ತಲೇ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶೌಚಾಲಯ ವ್ಯವಸ್ಥೆ ಬಳಸುವುದಕ್ಕೇ ಆಗದಷ್ಟು ಹದಗೆಟ್ಟು ಹಲವು ವರ್ಷಗಳೇ ಉರುಳಿದರೂ ಸರಿಪಡಿಸುವ ಸಣ್ಣ ಪ್ರಯತ್ನವೂ ಪಟ್ಟಣಪಂಚಾಯತದಿಂದ ಆಗಿಲ್ಲ ಎಂದು ದೂರುತ್ತಿದ್ದಾರೆ ಮೀನು ವ್ಯಾಪಾರ ಮಾಡುವ ಮಹಿಳೆಯರು.
ಮೀನು ಮಾರುಕಟ್ಟೆ ತೆರೆಯುವ ನಿಟ್ಟಿನಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಕಛೇರಿಗೆ ಮನವಿ ಮಾಡಿದ್ದೇವೆ. ಸಧ್ಯ ವ್ಯಾಪಾರ ನಡೆಯುತ್ತಿರುವ ಸ್ಥಳ ಮತ್ತು ಮೀನು ಮಾರುಕಟ್ಟೆ ಇರುವ ಸ್ಥಳವರೆಡೂ ಬಂದರು ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಇದರಿಂದ ಅಲ್ಲಿ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದಾದರೂ ಬಂದರು ಇಲಾಖೆಯ ಅನುಮತಿ ಪಡೆಯಬೇಕು. ಅದೇ ಕಾರಣಕ್ಕೆ ಅಭಿವೃದ್ಧಿ ಕೆಲಸಗಳನ್ನು ನಡೆಸುವುದಕ್ಕೆ ತೊಂದರೆಯಾಗುತ್ತಿದೆ ಎಂದು ಬಂದರು ಇಲಾಖೆಯತ್ತ ಬೊಟ್ಟು ತೋರಿಸುತ್ತಾರೆ ಪಟ್ಟಣಪಂಚಾಯತ ಅಧಿಕಾರಿಗಳು.

watermarked 02 16 hnr

ಪಟ್ಟಣ ಪಂಚಾಯತ ಮತ್ತು ಬಂದರು ಇಲಾಖೆಯ ನಡುವಿನ ಸಮನ್ವಯದ ಕೊರತೆ ಮೀನುಗಾರರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ. ಟೆಂಡರ್‍ನಲ್ಲಿ ಲಕ್ಷ ಲಕ್ಷ ಆದಾಯ ಗಳಿಸುವ ಪಟ್ಟಣ ಪಂಚಾಯತ್ ವ್ಯಾಪಾರಿಗಳ ಹಿತ ಕಾಯಲು ಆಸಕ್ತಿ ತೋರಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

watermarked 03 16 hnr


ಮುಖ್ಯಾಂಶಗಳು
ಮೀನು ವ್ಯಾಪಾರಿಗಳು ಮಳೆ ಬಿಸಿಲಿನಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ
ಟೆಂಡರ್‍ನಲ್ಲಿ ಲಕ್ಷಾಂತರ ರುಪಾಯಿ ಆದಾಯ ಗಳಿಸಿದರೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಟ್ಟಣಪಂಚಾಯತ ವಿಫಲ
ಬಂದರು ಇಲಾಖೆ ಮತ್ತು ಪಟ್ಟಣ ಪಂಚಾಯತ ನಡುವಿನ ಹೊಂದಾಣಿಕೆ ಸಮಸ್ಯೆಗೆ ಮೀನುಗಾರರು ಬಲಿಪಶು

[ಹಿಂದಿನ ವರ್ಷ 2 ಲಕ್ಷ 40 ಸಾವಿರ ರುಪಾಯಿಗೆ ನಾವು ಮಹಿಳೆಯರೇ ಒಟ್ಟಾಗಿ ಕಟ್ಟಡವನ್ನು ಟೆಂಡರ್ ಪಡೆದಿದ್ದೆವು. ಈವರ್ಷ 2 ಲಕ್ಷ 75 ಸಾವಿರಕ್ಕೆ ಟೆಂಡರ್ ಬೆಲೆ ಹೆಚ್ಚಿಸಿ ಬೇರೊಬ್ಬರು ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದಾಯವಿದ್ದರೂ ಹೇಳಿಕೊಳ್ಳುವಂತ ಯಾವುದೇ ಸೌಲಭ್ಯ ಕಟ್ಟಡದಲ್ಲಿಲ್ಲ. ಕಟ್ಟಡದ ಬೀಗ ತೆರೆದು ವ್ಯಾಪಾರಕ್ಕೆ ಅವಕಾಶಮಾಡಿಕೊಡುವ ಜೊತೆಗೆ ಹಾಳಾಗಿರುವ ಶೌಚಾಲಯವನ್ನು ದುರಸ್ಥಿಮಾಡಿಕೊಡಬೇಕು – ಗಂಗಾ, ಮೀನು ವ್ಯಾಪಾರ ಮಾಡುವ ಮಹಿಳೆ]
[ಟೆಂಡರ್‍ನಲ್ಲಿ ಬಂದ ಆದಾಯದಲ್ಲಿ ದೊಡ್ಡ ಮೊತ್ತವನ್ನು ಬಂದರು ಇಲಾಖೆಗೆ ಪಾವತಿಸಬೇಕಾಗಿದೆ. ಮೀನುಮಾರುಕಟ್ಟೆ ತೆರೆಯುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶವನ್ನು ಎದುರುನೋಡುತ್ತಿದ್ದೇವೆ. ಶೌಚಾಲಯ ದುರಸ್ಥಿಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ – ನೀಲಕಂಠ ಮೇಸ್ತ, ಮುಖ್ಯಾಧಿಕಾರಿ ಪಟ್ಟಣಪಂಚಾಯತ]

watermarked IMG 20200916 170145 scaled
watermarked IMG 20200916 170125 scaled

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: honnavara, meenu maarukatte problem, ಅಲ್ಲಿಯಾದರೂ, ಆಳ ಸಮುದ್ರ ಮೀನುಗಾರಿಕೆ, ಕುಳಿತುಕೊಳ್ತಿದ್ದೆವು, ಕೊರೊನಾ ಸಂಬಂಧಿತ, ಟೆಂಡರ್‍ನಲ್ಲಿ ಲಕ್ಷ ಲಕ್ಷ ಆದಾಯ, ತೆರೆದಿದ್ದರೆ, ನಂತರ ಹಳ್ಳಿಗಳಿಂದ, ಮಳೆ ಬಿಸಿಲಿನಿಂದ ರಕ್ಷಣೆ, ಮೀನು ಮಾರುಕಟ್ಟೆ, ಮೀನುಗಾರರನ್ನು ಸೌಲಭ್ಯ, ಲಾಕ್‍ಡೌನ್ ತೆರವಾದ, ವಂಚಿತರನ್ನಾಗಿ ಮಾಡಿದೆ, ಹತಾಶೆಯನ್ನು ಹೊರ ಹಾಕುತ್ತಿದ್ದಾರೆ, ಹಾಳಾಗಿರುವ ಶೌಚಾಲ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...