ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ೭೦ನೇ ಜನ್ಮದಿನದ ಅಂಗವಾಗಿ ‘ಸೇವಾ ಸಪ್ತಾಹ’ ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಯುವಮೋರ್ಚಾ ಹೊನ್ನಾವರ ಘಟಕದಿಂದ ಕುಮಟಾದರಕ್ತನಿಧಿ ಕೇಂದ್ರದಲ್ಲಿರಕ್ತದಾನ ಶಿಬಿರ ಗುರುವಾರ ನಡೆಯಿತು.
ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಸದಸ್ಯರುರಕ್ತದಾನ ಮಾಡುವ ಮೂಲಕ ನರೇಂದ್ರ ಮೋದಿಯವರಜನ್ಮದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಯುವ ಮೋರ್ಚಾಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ, ಹೇಮಂತ್ಕುಮಾರ್, ವೈದ್ಯರಾದ ಡಾ.ಜಿ.ಜಿ.ಹೆಗಡೆ, ಎಂ.ಜಿ.ಭಟ್, ನಾಗರಾಜ ನಾಯ್ಕತೊರ್ಕೆ, ಹೊನ್ನಾವರಯುವ ಮೋರ್ಚಾಅಧ್ಯಕ್ಷ ಸಚಿನ್ ಶೇಟ್, ಕುಮಟಾಯುವ ಮೋರ್ಚಾಅಧ್ಯಕ್ಷಜಗದೀಶ್ ಭಟ್ ಸೇರಿದಂತೆಯುವ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Leave a Comment