ಹಳಿಯಾಳ:- ಕೇಂದ್ರ ಸರ್ಕಾರ ಸರ್ಕಾರಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಚೇದದಲ್ಲಿರುವ 22 ಭಾಷೆಗಳನ್ನೂ ಅಧಿಕೃತ ಸಂಪರ್ಕ ಭಾಷೇಗಳನ್ನಾಗಿ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಆಗ್ರಹಿಸಿದೆ.
ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಹಿಂದಿ ದಿವಸ ವಿರೊಧಿಸಿ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಂತೆಯೇ ಉಳಿದ 22 ಭಾಷೆಗಳನ್ನು ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ, ಹಕ್ಕುಗಳು ನೀಡುವಂತಾಗಬೇಕು. ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾದಂಥ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಪ್ರತಿವರ್ಷ ಸೆ.14 ಭಾಷಾ ದಿನವಾಗಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು ಹಾಗೂ ಯಾವ ಭಾಷೆಯನ್ನು ನಿರ್ಲಕ್ಷಿಸಬಾರದು ಎಂದು ಆಗ್ರಹಿಸಿರುವ ಸಂಘಟನೆ ಭಾರತ ಒಕ್ಕೂಟವನ್ನು ಸಮಾನತೆಯ ತತ್ವದಲ್ಲಿ ಪುನರ್ ರೂಪಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.
ಮನವಿ ಸಲ್ಲಿಸುವಾಗ ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾಧ್ಯಕ್ಷರಾದ ವಿನೋದ ದೊಡ್ಮನಿ, ಚಂದ್ರಕಾಂತ ದುರ್ವೆ, ಪ್ರಮುಖರಾದ ಮಹೇಶ ಆನೆಗುಂದಿ, ಸುಧಾಕರ ಕುಂಬಾರ, ವಿಜಯ ಪಡ್ನಿಸ್, ಈರಣ್ಣಾ ಹಿರೇಮಠ, ಶೀವು, ಚಂದ್ರು ಅರಿಶೀನಗೇರಿ, ಸುರೇಶ ಕೊಕಿತಕರ ಇತರರು ಇದ್ದರು.

Leave a Comment