ಹೊನ್ನಾವರ – ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವಂತಾಗಿದೆ ಜನರ ಪರಿಸ್ಥಿತಿ. ಲಾಕ್ಡೌನ್ ತೆರವಾಗಿದ್ದರೂ ದ್ವಿಗುಣಗೊಳ್ಳುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಂತೆ ಹೆಚ್ಚುತ್ತಿರುವ ದಿನಬಳಕೆಯ ಸಾಮಾನುಗಳ ಬೆಲೆ ಜನ ಸಾಮಾನ್ಯರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.


ಒಂದೆಡೆ ಕೆಲಸವಿಲ್ಲದೇ ಖಾಲಿ ಕುಳಿತು ಆರ್ಥಿಕ ಸ್ಥಿತಿ ಪಾತಾಳ ಕಂಡಿದೆ. ಇನ್ನೊಂದೆಡೆ ತರಕಾರಿ ಮೊಟ್ಟೆ ಸಹಿತ ಆಹಾರ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಿಂದೆ ಕಿಸೆಯಲ್ಲಿ ದುಡ್ಡು ಹಾಕಿಕೊಂಡು ಹೋಗಿ ಚೀಲದಲ್ಲಿ ಸಾಮಾನು ತುಂಬಿಕೊಂಡು ಬರುತ್ತಿದ್ದೆವು. ಈಗ ನೋಡಿದರೆ ಚೀಲದಲ್ಲಿ ದುಡ್ಡು ಒಯ್ದು ಕಿಸೆಯಲ್ಲಿ ಸಾಮಾನು ತರಬೇಕು ಹಾಗಾಗಿದೆ ಎಂದು ವ್ಯಂಗಭರಿತ ದ್ವನಿಯಲ್ಲಿ ತಮ್ಮ ಅಸಹಾಯಕ ಪರಿಸ್ಥಿತಿಯನ್ನು ತೋಡಿಕೊಳ್ಳುತ್ತಿದ್ದಾರೆ ದುಡಿದು ತಿನ್ನುವ ದೊಡ್ಡ ಸಮುದಾಯ.
ಲಾಕ್ಡೌನ್ ಸಮಯದಲ್ಲಿ ಐದು ರುಪಾಯಿ ಇದ್ದ ಮೊಟ್ಟೆಯ ಬೆಲೆ ಎಂಟು ರುಪಾಯಿ ಆಗಿದೆ ಮೂವತ್ತು ರುಪಾಯಿ ಇದ್ದ ಟೊಮೆಟೋ ಕೆ.ಜಿಗೆ 60 ರುಪಾಯಿ ಆಗಿದೆ. ಬಟಾಟೆ 50, ಉಳ್ಳಾಗಡ್ಡಿ 40, ಹಸಿಮೆಣಸು 120, ಶುಂಠಿ 100, ಬೀನ್ಸ್ 70, ಕ್ಯಾಬೀಜ 40 ರುಪಾಯಿಗೆ ಏರಿದೆ. ಇದು ಇನ್ನಷ್ಟುದಿನ ಮುಂದುವರಿಯುವ ಜೊತೆ ಬೆಲೆಯಲ್ಲಿಯೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಅಂಗಡಿಕಾರರು.
Leave a Comment