ಹೊನ್ನಾವರ – ಕಳೆದ ಸಾಲಿನಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾರಂಗದಲ್ಲಿ ಅತ್ಯುತ್ತಮ ಸಾಧನೆ ತೋರಿದ ತಾಲೂಕಿನ ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತಾಲೂಕಾ ಒಕ್ಕಲಿಗರ ಸಂಘದವರು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.
2019-20 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಶೇ 90 ಮತ್ತು ಪಿ.ಯು.ಸಿ. ದ್ವಿತೀಯ ವರ್ಷದಲ್ಲಿ ಶೇ 85 ಮತ್ತು ಅದಕ್ಕಿಂತ ಹೆಚ್ಚಿಗೆ ಅಂಕ ಪಡೆದ ವಿಧ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ಮತ್ತು 2018-19ನೇ ಸಾಲಿನ ಅಂತಿಮ ವರ್ಷದ ಪದವಿ ಮತ್ತು ಮೇಲ್ಪಟ್ಟು ಶೇ 85 ಮತ್ತು ಅದಕ್ಕಿಂತ ಹೆಚ್ಚಿಗೆ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಹಾಗೂ ಕ್ರೀಡೆ ಮತ್ತು ಸಾಂಸ್ಕøತಿಕ, ಇನ್ನಿತರ ಸ್ಫರ್ಧೆಗಳಿಗೆ ರಾಜ್ಯ ಮಟ್ಟದಲ್ಲಿ ಸ್ಪರ್ದಿಸಿದ ಹೊನ್ನಾವರ ತಾಲೂಕಿನ ಒಕ್ಕಲಿಗ ಸಮಾಜದ ವಿಧ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧ್ಯಾರ್ಥಿಗಳು ತಮ್ಮ ಅಂಕ ಪಟ್ಟಿ ಪ್ರತಿಯನ್ನು ದಿನಾಂಕ 03-10-2020ರೊಳಗೆ ಅಧ್ಯಕ್ಷರು ತಾಲೂಕಾ ಒಕ್ಕಲಿಗರ ಸಂಘ ರಿ. ಹೊನ್ನಾವರ, ಅಂಚೆ : ಕೆಳಗಿನೂರು, ತಾ. ಹೊನ್ನಾವರ ಉ.ಕ. ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡುವಂತೆ, ಹೆಚ್ಚಿನ ಮಾಹಿತಿಗಾಗಿ ಸಂಘದ ನಿರ್ದೇಶಕರುಗಳಾದ ತಿಮ್ಮಪ್ಪ ಗೌಡ 9448836243, ದಯಾನಂದ ಗೌಡÀ 9880238283, ಗಿರೀಶ ಗೌಡ 9972315682 ಇವರನ್ನು ಸಂಪರ್ಕಿಸಲು ಸೂಚಿಸಿದ್ದಾರೆ..
Leave a Comment