ಹೊನ್ನಾವರ: ವರ್ಷದ ಆರಂಭದಿಂದ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆ, ಪೋತ್ಸಾಹಧನ ಒದಗಿಸುವಂತೆ ಆಶಾ ಕಾರ್ಯಕರ್ತೆಯರು ಮನವಿ ನೀಡುತ್ತಾ ಬಂದಿದ್ದರೂ, ಇದುವರೆಗೂ ಬೇಡಿಕೆ ಈಡೇರಿಲ್ಲ. ಕೊರೋನಾ ನಿಯಂತ್ರಣಕ್ಕಾಗಿ ಗ್ರಾಮೀಣ ಹಾಗೂ ಪಟ್ಟಣ ಭಾಗದಲ್ಲಿ ಜೀವವನ್ನು ಪಣಕ್ಕಿಟು ಕೊರೋನಾ ಬಗ್ಗೆ ಜಾಗ್ರತಿ, ತಪಾಸಣೆ ಸೇರಿದಂತೆ ವಿವಿಧ ರೀತಿಯ ಸೇವೆ ಮಾಡುವ ಮೂಲಕ ವಾರಿಯರ್ಸ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇವೆ.

ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲು ಮೀನಾಮೇಷ ಮಾಡುತ್ತಿದೆ. ಹಲವು ಬಾರಿ ಮನವಿ ನೀಡಿದರೂ ಸ್ಪಂದಿಸಿಲ್ಲ. ರಾಜ್ಯವ್ಯಾಪಿ ಅನಿದಿಷ್ರ್ಟ ಮುಷ್ಕರಕ್ಕೆ ಮುಂದಾದ ಬಳಿಕ ಸಚೀವರು ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ ಅದು ಇದುವರೆಗೂ ಭರವಸೆಯಾಗಿಯೇ ಉಳಿದಿದೆ.
ನಮಗೆ ಆಶ್ವಾಸನೆಗಿಂತ ಈ ಬಾರಿ ಅಧಿವೇಶನದಲ್ಲೆ ನಮ್ಮ ವೇತನ ಇತರೆ ಸೌಲಭ್ಯದ ಬಗ್ಗೆ ಈಡೇರಿಸುವ ಕಾರ್ಯಕ್ಕೆ ಮುಂದಾಗಬೇಕು. ಮಾಸಿಕ ವೇತನ 12 ಸಾವಿರ ನಿಗದಿ ಮಾಡುವ ಜೊತೆ ಎಲ್ಲ ಕಾರ್ಯಕರ್ತೆಯರಿಗೆ ಆರೊಗ್ಯ ತಪಾಸಣೆ ಮಾಡಬೇಕು. ಕೊರೋನಾ ಸುರಕ್ಷತೆಗಾಗಿ ಮಾಸ್ಕ ಹ್ಯಾಂಡ್ ಗ್ಲೋಸ್, ಫೇಸ್ ಶಿಲ್ಡ್, ಸ್ಯಾನಿಟೈಜರ್ ಸಮರ್ಪಕವಾಗಿ ನೀಡಬೇಕು. ಬಾಕಿ ಇರುವ ಪೊತ್ಸಾಹಧನ ಹಾಗೂ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಆರೋಗ್ಯ ಸಚೀವರಿಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಪ್ರಭಾಮಣಿ ಶೆಟ್ಟಿ, ಜಯಲಕ್ಷ್ಮಿ ಕೊಡಿಯಾ, ರೋಪಿನ್, ರೇಖಾ, ಗಿರಿಜಾ ನಾಯ್ಕ, ಗಂಗಾ ಕೊಡಿಯಾ ಉಪಸ್ಥಿತರಿದ್ದರು.
Leave a Comment