ಜೂನ್ ಜುಲೈ ತಿಂಗಳಲ್ಲಿ ಕಂಡುಬರುತ್ತಿದ್ದ ಕಡಲಿನ ಅಬ್ಬರ ಸಪ್ಟಂಬರ್ ತಿಂಗಳಿಗೂ ಮುಂದುವರಿದಿದ್ದು ಹಳದಿಪುರ ಗ್ರಾಮದ ಗೌಡಕುಳಿ, ಈರಪ್ಪನ ಹಿತ್ಲ ಬಳಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಸ್ಮಶಾನಮಾರ್ಗದ ರಸ್ತೆ ಭಾಗಶ: ನೀರುಪಾಲಾಗಿದೆ.

ಕರ್ಕಿ ಹಳದಿಪುರ ಭಾಗದಲ್ಲಿ ಕಡಲಕೊರೆತ ಎನ್ನುವುದು ಉತ್ತರ ಕಾಣದ ಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ. ತಡೆಗೋಡೆ ನಿರ್ಮಿಸಿ ಎನ್ನುವ ಬೇಡಿಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲವಾದರೂ ಕಡಲಕೊರೆತ ಮಾತ್ರ ನಿಂತಿಲ್ಲ. ಈ ನಡುವೆ ಸಮುದ್ರ ತೀರದಲ್ಲಿ ತಡೆಗೋಡೆ ನಿರ್ಮಿಸದೇ ಗುಡ್ಡದ ಮಣ್ಣನ್ನು ತಂದು ಮರಳಿನ ದಿಬ್ಬದಮೇಲೆ ಸುರಿದು ಲಕ್ಷಾಂತರ ರುಪಾಯಿ ಅನುದಾನವನ್ನು ವ್ಯಯಿಸಿ ಮಾಡುವ ರಸ್ತೆಗಳು ವರ್ಷ ಕಳೆಯುವಷ್ಟರಲ್ಲಿ ಅಲೆಯ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿರುತ್ತದೆ. ಅಷ್ಟರಲ್ಲಾಗಲೇ ಗುತ್ತಿಗೆದಾರರನಿಗೆ ಬಿಲ್ ಪಾವತಿಯಾಗಿರುತ್ತದೆ ಮತ್ತು ಹಾನಿ ಪ್ರಕೃತಿವಿಕೋಪದಡಿ ಬರುವುದರಿಂದ ಗುತ್ತಿಗೆದಾರರನ್ನು ಹೊಣೆಯಾಗಿಸುವುದೂ ಸಾಧ್ಯವಿಲ್ಲ. ರಸ್ತೆಯ ಜೊತೆ ಸಾರ್ವಜನಿಕ ಹಣ ವ್ಯರ್ಥವಾಗಿ ಹೋದರೂ ಇಲ್ಲಿ ಹೇಳುವವರೂ ಇಲ್ಲ ಕೇಳುವವರು ಯಾರೂ ಇಲ್ಲವಾ ಎನ್ನುವ ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ.
Leave a Comment