ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಕುಸಿದ ಗುಡ್ಡ ಇನ್ನೂ ಸ್ವಲ್ಪ ಜಾರಿದರೂ ದೇವಾಲಯಕ್ಕೆ ಹಾನಿ ಉಂಟಾಗತ್ತಿದ್ದು ಗುಡ್ಡದ ಕೆಳಬಾಗದಲ್ಲಿ ಭಾರಿ ಗಾತ್ರದ ಮರವಿದ್ದ ಕಾರಣ ಕಲ್ಲು ಬಂಡೆ ದೇವಾಲಯದ ಮೇಲೆ ಬಿಳುವುದು ತಪ್ಪಿದೆ. ಈ ಬಂಡೆ ಕಲ್ಲು ಎತ್ತರದಲ್ಲಿ ಇರೊದರಿಂದ ಅದೇಷ್ಟೋ ಪ್ರವಾಸಿಗರು ಇಲ್ಲಿಗೆ ಸಮುದ್ರ ತೀರವನ್ನ ವೀಕ್ಷಣೆ ಮಾಡುವುದರೊಂದಿದೆ.ಪೋಟೋಗಳನ್ನ ಕ್ಲಿಕಿಸ್ತಾ ಇದ್ದರು. ರಾತ್ರಿ ಸಮಯದಲ್ಲಿ ಗುಡ್ಡ ಕುಸಿತವಾಗಿರೋದ್ರಿಂದ ಯಾವ ಪ್ರವಾಸಿಗರು ಇರಲಿಲ್ಲವಾದ್ದರಿಂದ ಭಾರಿ ಗಡಾಂತರದಿಂದ ಪಾರಾದಂತಾಗಿದೆ.

Leave a Comment