ಹೊನ್ನಾವರ – ಮಳೆಗಾಲ ಪ್ರಾರಂಬವಾದ ನಂತರ ಕೆಳಗಿನೂರು ಗ್ರಾಮದ ಅಪ್ಸರಕೊಂಡ ಭಾಗದಲ್ಲಿ ಪದೇ ಪದೇ ಗುಡ್ಡದಲ್ಲಿರುವ ಕಲ್ಲು ಬಂಡೆಗಳು ಹಾಗೂ ಮಣ್ಣು ಕುಸಿಯುತ್ತಿದ್ದ ಕೆಳಭಾಗದಲ್ಲಿ ವಾಸಿಸುತ್ತಿರುವವರ ಆತಂಕಕ್ಕೆ ಕಾರಣವಾಗಿದೆ.
ಗುಡ್ಡದಮೇಲಿನ ಬೃಹತ್ ಬಂಡೆಯೊಂದು ಉರುಳಿ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಜಖಂ ಆದ ಘಟನೆಗೂ ಮೊದಲು ರಸ್ತೆ ಪಕ್ಕದ ಎತ್ತರದ ದರೆ ಕುಸಿದು ರಸ್ತೆ ಸಂಚಾರಕ್ಕೇ ತೊಡಕಾಗಿತ್ತು. ಇದಾಗಿ ಸ್ವಲ್ಪ ದಿನದಲ್ಲಿಯೇ ಮತ್ತೊಮ್ಮೆ ಗುಡ್ಡದÀ ಒಂದು ಭಾಗ ಜಾರಿ ಅಪಾಯವನ್ನು ಸೃಷ್ಟಿಸಿದೆ. ರಸ್ತೆಯಲ್ಲಿ ಹಲವು ಕಡೆ ಗುಡ್ಡದ ಮಣ್ಣು ರಾಶಿ ಬಿದ್ದರೂ ಅದನ್ನು ಸಂಪೂರ್ಣ ತೆರವುಗೊಳಿಸುವ ಕೆಲಸವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮ್ಯಾಂಗನೀಸ್ ಕಲ್ಲುಗಳಿಂದಾವೃತ್ತವಾದ ಗುಡ್ಡದಮೇಲೆ ಹೊಂಗೆಯ ನೆರಳಲ್ಲಿ ಕುಳಿತು ಕಡಲಿನ ಸೌಂದರ್ಯವನ್ನು ಸವಿಯುವುದಕ್ಕೆ, ಅಪ್ಸರಕೊಂಡ ಜಲಪಾದಲ್ಲಿ ಮುಳುಗೆದ್ದು ಸುಖಿಸುವುದಕ್ಕೆ ದೇಶ ವಿದೇಶಗಳಿಂದಲೂ ಪ್ರವಾಸಿಗರ ದಂಡೇ ಬರುತ್ತಿರುತ್ತದೆ. ತಾಲೂಕಿನ ಪ್ರಸಿದ್ಧ ಪ್ರವಾಸಿತಾಣವಾಗಿ ಗುರುತಿಸಿಕೊಂಡಿರುವ ಅಪ್ಸರಕೊಂಡ ಭಾಗದಲ್ಲಿ ಗುಡ್ಡ ಕುಸಿತ ಸಾಕಷ್ಟು ತೊಂದರೆಯನ್ನುಂಟುಮಾಡುತ್ತಿದೆ. ಘಟನೆ ನಡೆದಾಗ ಸ್ಥಳಕ್ಕಾಗಮಿಸುವ ಅಧಿಕಾರಿಗಳು ಜನಪ್ರತಿನಿಧಿಗಳು ನಂತರ ಇಲ್ಲಿನ ಸಮಸ್ಯೆಯ ಬಗ್ಗೆ ಯಾವುದೇರೀತಿಯ ಕಾಳಜಿ ವಹಿಸುತ್ತಿಲ್ಲ ಎನ್ನುವ ಆರೋಪ ಮಾಡುತ್ತಿದ್ದಾರೆ ಗ್ರಾಮಸ್ಥರು.
ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿ ಸಾಕಾಗಿ ಹೋಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಜನ ಸಾಯುವ ಮುನ್ನ ವ್ಯವಸ್ಥೆ ಸರಿಪಡಿಸಬೇಕು. ಅನಾಹುತ ಸಂಭವಿಸಿದ ಬಳಿಕ ಬಂದು ಎಷ್ಟು ಪರಿಹಾರ ನೀಡಿದರೂ ಪ್ರಯೋಜನವಿಲ.್ಲ – ತಿಮ್ಮಪ್ಪ ಗೌಡ ಸ್ಥಳಿಯ ನಿವಾಸಿ


Leave a Comment