ಹೊನ್ನಾವರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋರೊನಾದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸದೇ ರೈತ ವಿರೋಧಿ ಕಾನೂನು ಜಾರಿಗೆ ತರಲು ಮುಂದಾಗುತ್ತಿದೆ. ಕಾರ್ಪೋರೇಟರ್ ಕಂಪನಿಯ ಪರವಾಗಿರುವ ಮಸೋದೆಯನ್ನು ಪ್ರತಿಪಕ್ಷ ಸೇರದಂತೆ ಯಾರ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುದರುದು ಖಂಡನೀಯ. ಇಂತಹ ಸರ್ವಾಧಿಕಾರ ಧೋರಣೆಯಿಂದ ಸರ್ಕಾರ ಹಿಂದೆಸರಿಯಬೇಕು. ಅಲ್ಲದೇ ರೈತ ವಿರೋಧಿ ಕಾಯ್ದೆಗಳಾದ ವಿದ್ಯುತ್ ಶಕ್ತಿ ತಿದ್ದುಪಡಿ ವಿಧೇಯಕ ಕಾಯ್ದೆ 2020, ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ವಿರೋಧಿ ನೀತಿಯನ್ನು ತಕ್ಷಣ ವಾಪಸ್ಸು ಪಡೆಯಬೇಕು. ಕಾಯ್ದೆ ಜಾರಿಗೆ ಮುಂದಾದರೆ, ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ತಹಶೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.

ರೈತರ ಹೆಸರಿನಲ್ಲಿ ಓಟ್ ಪಡೆದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತ ವಿರೋಧಿ ನೀತಿ ಜಾರಿಗೆ ತರಲು ಮುಂದಾಗುತ್ತಿರುವುದು ನಿಜಕ್ಕೂ ದುದೈವ. ಮುಂದಿನ ದಿನದಲ್ಲಿ 28ಕ್ಕೆ ಉಗ್ರ ಹೊರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ
ಕೋವಿಡ್ ಸಂಕಷ್ಟದಲ್ಲಿರುವ ನೆರವಿಗೆ ಬಾರದೇ ಕೇಂದ್ರ ರಾಜ್ಯ ಸರ್ಕಾರ ರೈತವಿರೋಧಿ ನೀತಿ ಸುಗ್ರಿವಾಜ್ಞೆ ಮಾಡಿರುವುದು, ಪ್ರಜಾಪ್ರಭುತ್ವದ ಅಡಿಯಲ್ಲಿ ಇರುವ ಹಕ್ಕನ್ನು ಕಸಿದುಕೊಂಡಿದೆ. ಇಂತಹ ರೈತ ವಿರೋಧಿ ಕಾನೂನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ತಿಮ್ಮಪ್ಪ ಗೌಡ ರೈತ ಸಂಘದ ಅಧ್ಯಕ್ಷ
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯದರ್ಶಿ ಗಣೇಶ ಭಂಡಾರಿ, ಅಣ್ಣಪ್ಪ ಗೌಡ, ಕಮಲಾ ಹೆಗಡೆ, ಕಲ್ಯಾಣಿ ಗೌಡ, ಮಂಜುನಾಥ ಗೌಡ ಹಾಜರಿದ್ದರು.
Leave a Comment