ಹೊನ್ನಾವರ – ಪಟ್ಟಣದ ಎಸ್.ಡಿ.ಎಮ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ನಾರಾಯಣ ಮಂಜುನಾಥ ಶೇಟ್ ಅವರು ಬುಧವಾರ ನಿಧನರಾದರು.
ಅವರು ಪತ್ನಿ ಶೈಲಾ,ಮಕ್ಕಳದಾ ರಾಘವೇಂದ್ರ, ಗಜೇಂದ್ರ, ನಾಗೇಂದ್ರ ಮಗಳು ಅನಿತಾ, ಕುಟುಂಬದವರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಮ್ಮ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಹಾಗೂ ಸರಳತೆಯಿಂದ ಕಾಲೇಜು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ನಮ್ಮನ್ನೆಲ್ಲಾ ಪ್ರೀತಿಯಿಂದ ಸಾಕಿ ಸಲುಹಿದ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡಿ ಸಂಸ್ಕಾರ ಕೊಟ್ಟ ತಂದೆಯವರ ಅಗಲಿಕೆ ಅತೀವ ದು:ಖವನ್ನುಂಟುಮಾಡಿದೆ ಎಂದು ದಿವಂಗತರನ್ನು ನೆನೆದು ಕುಟುಂಬದವರು ಕಂಬನಿ ಮಿಡಿದಿದ್ದಾರೆ.

Leave a Comment